ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಪಿ ಎನ್ವಿ ನೋಟ್ ಬುಕ್, ವರ್ಕ್ ಸ್ಟೇಷನ್ ಬಿಡುಗಡೆ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಎಚ್ ಪಿ ಎನ್ವಿ ನೋಟ್ ಬುಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಜತೆಗೆ ಎಚ್ ಪಿ ತನ್ನ ಇತ್ತೀಚಿನ ಎಚ್ ಪಿ ವರ್ಕ್ ಸ್ಟೇಷನ್ ನ ಝಡ್ ಸರಣಿಯ ಎಚ್ ಪಿ ಝಡ್ ಬುಕ್ ಸ್ಟುಡಿಯೋ ಮತ್ತು ಎಚ್ ಪಿ ಝಡ್ ಬುಕ್ ಕ್ರಿಯೇಟ್ ಗಳನ್ನು ಸಹ ಬಿಡುಗಡೆ ಮಾಡಿದೆ.

ಛಾಯಾಗ್ರಾಹಕು, ವ್ಲಾಗರ್ಸ್, ಗ್ರಾಫಿಕ್ ಡಿಸೈನರ್ ಗಳು, ಆರ್ಕಿಟೆಕ್ಟ್ ಗಳು, ಫಿಲ್ಮ್ ಮೇಕರ್ ಗಳು ಮತ್ತು ಇನ್ನಿತರೆ ವರ್ಗದ ಬಳಕೆದಾರರು ತಮ್ಮ ಸೃಜನಾತ್ಮಕ ಉತ್ಪಾದಕತೆಯನ್ನು ವೃದ್ಧಿ ಮಾಡಿಕೊಳ್ಳಲು ನೆರವಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ವರ್ಕ್ ಫ್ರಂ ಹೋಂ: ಲ್ಯಾಪ್ ಟಾಪ್ ಮಾರಾಟಗಾರರಿಗೆ ಸಿಕ್ಕಿದ್ದೇ ಸೀರುಂಡೆವರ್ಕ್ ಫ್ರಂ ಹೋಂ: ಲ್ಯಾಪ್ ಟಾಪ್ ಮಾರಾಟಗಾರರಿಗೆ ಸಿಕ್ಕಿದ್ದೇ ಸೀರುಂಡೆ

ಎಚ್ ಪಿ ಇಂಡಿಯಾ ಮಾರ್ಕೆಟ್ ನ ವ್ಯವಸ್ಥಾಪಕ ನಿರ್ದೇಶಕ ಕೇತನ್ ಪಟೇಲ್ ಅವರು ಮಾತನಾಡಿ, ''ಸೃಜನಶೀಲತೆ ಅಭಿವ್ಯಕ್ತಿಯು ಮಾನವನ ಅತ್ಯಂತ ಆಂತರಿಕ ಗುಣಲಕ್ಷಣಗಳಲ್ಲಿ ಒಂದಾಗಿದೆ. ವಿಶ್ವದೊಂದಿಗೆ ಹೆಚ್ಚು ಹೆಚ್ಚು ಸಂಪರ್ಕ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ಜನರು ತಮ್ಮ ವೈಯಕ್ತಿಕ ಗುರುತುಗಳನ್ನು ಸೇರ್ಪಡೆ ಮಾಡಲು ಬಯಸುತ್ತಾರೆ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ತಮಗೆ ಪ್ರೇರಣೆ ನೀಡುವ ಸಾಧನಗಳಿಗಾಗಿ ನೋಡುತ್ತಿದ್ದಾರೆಯಷ್ಟೇ ಅಲ್ಲ, ತಮ್ಮ ಸೃಜನಶೀಲತೆಗೆ ಜೀವ ತುಂಬಲು ಕಾತುರರಾಗಿದ್ದಾರೆ'' ಎಂದರು.

ವ್ಯವಸ್ಥಾಪಕ ನಿರ್ದೇಶಕ ಕೇತನ್ ಪಟೇಲ್

ವ್ಯವಸ್ಥಾಪಕ ನಿರ್ದೇಶಕ ಕೇತನ್ ಪಟೇಲ್

ಎಚ್ ಪಿ ಇಂಡಿಯಾ ಮಾರ್ಕೆಟ್ ನ ವ್ಯವಸ್ಥಾಪಕ ನಿರ್ದೇಶಕ ಕೇತನ್ ಪಟೇಲ್ ಅವರು ಮಾತನಾಡಿ, ''ಸೃಜನಶೀಲತೆ ಅಭಿವ್ಯಕ್ತಿಯು ಮಾನವನ ಅತ್ಯಂತ ಆಂತರಿಕ ಗುಣಲಕ್ಷಣಗಳಲ್ಲಿ ಒಂದಾಗಿದೆ. ವಿಶ್ವದೊಂದಿಗೆ ಹೆಚ್ಚು ಹೆಚ್ಚು ಸಂಪರ್ಕ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ಜನರು ತಮ್ಮ ವೈಯಕ್ತಿಕ ಗುರುತುಗಳನ್ನು ಸೇರ್ಪಡೆ ಮಾಡಲು ಬಯಸುತ್ತಾರೆ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ತಮಗೆ ಪ್ರೇರಣೆ ನೀಡುವ ಸಾಧನಗಳಿಗಾಗಿ ನೋಡುತ್ತಿದ್ದಾರೆಯಷ್ಟೇ ಅಲ್ಲ, ತಮ್ಮ ಸೃಜನಶೀಲತೆಗೆ ಜೀವ ತುಂಬಲು ಕಾತುರರಾಗಿದ್ದಾರೆ'' ಎಂದರು.

ಎಚ್ ಪಿ ಎನ್ವಿ 15 ಸಾಧನಗಳು

ಎಚ್ ಪಿ ಎನ್ವಿ 15 ಸಾಧನಗಳು

* ಈ ವರ್ಷ ಎಚ್ ಪಿ ಎನ್ವಿ ಸಾಧನಗಳು ಲಭ್ಯವಾಗಲಿವೆ. ಆಲ್-ಇನ್-ಒನ್ ಕೀಬೋರ್ಡ್ ಇರಲಿದ್ದು ಇದರಲ್ಲಿ ಸುಲಭವಾಗಿ ಪವರ್ ಗೆ ಸಂಪರ್ಕ ಕಲ್ಪಿಸುವಂತಹ ಬಟನ್ ಗಳು, ಕ್ಯಾಮೆರಾ ಶಟರ್, ಮ್ಯೂಟ್ ಮೈಕ್, ಫಿಂಗರ್ ಪ್ರಿಂಟ್ ರೀಡರ್ ಮತ್ತು ಎಚ್ ಪಿ ಕಮಾಂಡ್ ಸೆಂಟರ್ ಇರಲಿದೆ.

* ಕ್ರಿಯೇಟರ್ ಗಳ ಆಶಯಕ್ಕೆ ತಕ್ಕಂತಹ ಸ್ಟನ್ನಿಂಗ್ ಡಿಸ್ ಪ್ಲೇ, ಶಕ್ತಿಶಾಲಿ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ಬರುವಂತಹ ಬ್ಯಾಟರಿ, ಸಂಪರ್ಕವಿರುತ್ತದೆ.

* ಅತ್ಯಾಧುನಿಕವಾಗಿರುವ ಅಲ್ಯೂಮಿನಿಯಂ ಚಾಸಿಗಳು ಮತ್ತು ಡೈಮಂಡ್ ಕಟ್ ವಿನ್ಯಾಸವನ್ನು ಹೊಂದಿರುವುದರೊಂದಿಗೆ ಇರುವ ವಿನ್ಯಾಸದಿಂದ ಎಲ್ಲರ ಮನಸೂರೆಗೊಳ್ಳುತ್ತದೆ. ಸುಗಮವಾಗಿ ಸ್ಪರ್ಶದ ಅನುಭವವನ್ನು ನೀಡಲು ಟಚ್ ಪ್ಯಾಡ್ ಮೇಲ್ಭಾಗದಲ್ಲಿ ಗಾಜಿನ ಪದರವನ್ನು ಅಳವಡಿಸಲಾಗಿದೆ. ಈ ರೀತಿಯ ಪದರವನ್ನು ಹೊಂದಿದ ಮೊದಲ ಇನ್ವಿ ಇದಾಗಿದೆ.

ಡಿಜಿಟಲ್ ಕ್ರಿಯೇಟರ್ ಗಳಿಗೆ ಅನುಕೂಲಕರ

ಡಿಜಿಟಲ್ ಕ್ರಿಯೇಟರ್ ಗಳಿಗೆ ಅನುಕೂಲಕರ

* ಇದರಲ್ಲಿನ 4 ಕೆ ಒಎಲ್ಇಡಿ ವಿಇಎಸ್ಎ ಪ್ರಮಾಣೀಕೃತ ಡಿಸ್ ಪ್ಲೇ ಎಚ್ ಡಿಆರ್ ಟ್ರೂ ಬ್ಲ್ಯಾಕ್ ಡಿಸ್ ಪ್ಲೇ ಅನ್ನು ಹೊಂದುವ ಮೂಲಕ ಡಿಜಿಟಲ್ ಕ್ರಿಯೇಟರ್ ಗಳು ಹೊಸ ಹಂತದ ಅನುಭವವನ್ನು ಪಡೆಯಬಹುದು. ಇದರಲ್ಲಿ ಶೇಕಡಾ ನೂರರಷ್ಟು ಡಿಸಿಐ-ಪಿ3 ಕಲರ್ ಗ್ಯಾಮಟ್, 400 ನಿಟ್ಸ್ ಬ್ರೈಟ್ ನೆಸ್ ನೊಂದಿಗೆ 100000:1 ರ ಅನುಪಾತದ ಕಾಂಟ್ರಾಸ್ಟ್ ಇರಲಿದೆ.

* ಎಚ್ ಪಿ ಕ್ವಿಕ್ ಡ್ರಾಪ್- ಹೊಸ ಎನ್ವಿ15 ನಲ್ಲಿ ಡಿಜಿಟಲ್ ಕ್ರಿಯೇಶನ್ ಗಳನ್ನು, ದಾಖಲೆಗಳು, ನೋಟ್ ಗಳು, ವೆಬ್ ಸೈಟ್ ಗಳು, ವಿಳಾಸಗಳನ್ನು ಪಿಸಿ, ಐಫೋನ್, ಆ್ಯಂಡ್ರಾಯ್ಡ್ ಅಥವಾ ಟ್ಯಾಬ್ ಗಳಿಗೆ ತಡೆರಹಿತವಾಗಿ ವರ್ಗಾವಣೆ ಮಾಡಬಹುದಾಗಿದೆ.

ಎಚ್ ಪಿಯಿಂದ ಝಡ್

ಎಚ್ ಪಿಯಿಂದ ಝಡ್

* ಝಡ್ ಬುಕ್ ಸ್ಟುಡಿಯೋ, ಇದು ಕ್ರಿಯೇಶನ್ ಗೆ ವಿಶ್ವದ ಅತ್ಯಂತ ಚಿಕ್ಕ 15 ಇಂಚಿನ ಲ್ಯಾಪ್ ಟಾಪ್ ಆಗಿದೆ. ಇದು ಅತ್ಯಂತ ಶಕ್ತಿಶಾಲಿಯಾದ ಮೊಬೈಲ್ ವರ್ಕ್ ಸ್ಟೇಷನ್ ಆಗಿದೆ. ಝಡ್ ಬುಕ್ ಕ್ರಿಯೇಟ್ ಪ್ಯಾಕ್ ಹಿಂದಿನ ಪೀಳಿಗೆಯ ಸಾಧನಗಳಿಗಿಂತ ಶೇ.22 ರಷ್ಟು ಕಡಿಮೆ ವಾಲ್ಯೂಮ್ ಇರಲಿದೆ. ಇದರ ಬ್ಯಾಟರಿ 17.5 ಗಂಟೆಗಳ ಕಾಲ ಬಾಳಿಕೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ: ಎಚ್ ಪಿ ವರ್ಲ್ಡ್ ಸ್ಟೋರ್ ಗಳು ಮತ್ತು ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯವಿದೆ. ಎಚ್ ಪಿ ಎನ್ವಿ 15 3 ಬಗೆಯ ಬೆಲೆಗಳಲ್ಲಿ ಲಭ್ಯವಿದೆ. INR 119,999 ರಿಂದ INR169,999 ತನಕ ಬೆಲೆ ಇದೆ.

English summary
HP on Tuesday launched its latest portfolio of HP ENVY notebooks in India including the HP ENVY 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X