ಸದ್ಯಕ್ಕೆ ಬೆಂಕಿಪೊಟ್ಟಣ, ಮೊಬೈಲ್ ಫೋನ್ ಬೆಲೆ ಮಾತ್ರ ಏರಿಕೆ

ನವದೆಹಲಿ, ಮಾರ್ಚ್ 15: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 39ನೇ ಜಿಎಸ್ಟಿ ಮಹಾಮಂಡಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮೊಬೈಲ್ ಫೋನ್, ಬೆಂಕಿಪೊಟ್ಟಣ ಮೇಲಿನ ಜಿಎಸ್ಟಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಈ ನಡುವೆ ಜಿಎಸ್ಟಿ ಪಾವತಿಸದ ಸಣ್ಣ ಉದ್ದಿಮೆದಾರರಿಗೆ ಕೊಂಚ ನೆಮ್ಮದಿ ಸುದ್ದಿ ಸಿಕ್ಕಿದೆ.

ಮೊಬೈಲ್ ಹ್ಯಾಂಡ್‍ಸೆಟ್ ಮೇಲಿನ ಜಿಎಸ್‍ಟಿ ದರವನ್ನು ಶೇಕಡ 12ರಿಂದ 18ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಜಿಎಸ್‍ಟಿ ದರ ಬದಲಾವಣೆಯು ಮೊಬೈಲ್ ಫೋನ್ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇದು ಬಹು ಸೇವೆಗಳ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಂಥ ಪ್ರಮುಖ ಸೇವೆ ಮತ್ತು ಪ್ರೋಗಾಂಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಐಸಿಇಎ ಅಭಿಪ್ರಾಯಪಟ್ಟಿದೆ. ಫೆಬ್ರವರಿ ತಿಂಗಳ ಜಿಎಸ್ಟಿ ಸಂಗ್ರಹ 1,05,366 ಕೋಟಿ ರು ನಷ್ಟಾಗಿದೆ.

ಈ ನಡುವೆ ಮುಂದಿನ ಜಿಎಸ್ಟಿ ಸಭೆಗಳಲ್ಲಿ ಇನ್ಫೋಸಿಸ್ ಸಂಸ್ಥೆಯ ನಿರ್ದೇಶಕ ನಂದನ್ ನಿಲೇಕಣಿ ಪಾಲ್ಗೊಳ್ಳಲಿದ್ದಾರೆ. ಜಿಎಸ್ಟಿ ವ್ಯವಸ್ಥೆಗೆ ಇನ್ಫೋಸಿಸ್ ಸಂಸ್ಥೆ ತಾಂತ್ರಿಕ ನೆರವು ಒದಗಿಸುತ್ತಿದ್ದು, ಈ ಸಂಬಂಧ ಬಂದಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವೆ ನಿರ್ಮಲಾ ಅವರು ಸೂಚಿಸಿದ್ದಾರೆ. ಜಿಎಸ್ಟಿ ಸಭೆ ಬಳಿಕ ಯಾವೆಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ? ಮುಂದೆ ಓದಿ...

ಬೆಂಕಿಪೊಟ್ಟಣ, ಮೊಬೈಲ್ ಹ್ಯಾಂಡ್ ಸೆಟ್ ಬೆಲೆ ಏರಿಕೆ

ಬೆಂಕಿಪೊಟ್ಟಣ, ಮೊಬೈಲ್ ಹ್ಯಾಂಡ್ ಸೆಟ್ ಬೆಲೆ ಏರಿಕೆ

ಉಳಿದಂತೆ ಕೈಯಿಂದ ತಯಾರಿಸುವ ಹಾಗೂ ಮಷಿನ್ ನಿರ್ಮಿತ ಬೆಂಕಿಪೊಟ್ಟಣ(matchsticks) ಮೇಲಿನ ಜಿಎಸ್ಟಿ ದರವನ್ನು ಶೇ5ರಿಂದ ಶೇ 12ಕ್ಕೇರಿಸಲಾಗಿದೆ. ಏರ್ ಕ್ರಾಫ್ಟ್ ನಿರ್ವಹಣಾ ವೆಚ್ಚದ ಮೇಲಿನ ಜಿಎಸ್ಟಿ 18%ರಿಂದ ಶೇ5ಕ್ಕೆ ಇಳಿಸಲಾಗಿದೆ. ಎಲ್ಲಾ ಪರಿಷ್ಕೃತ ದರಗಳು ಏಪ್ರಿಲ್ 1, 2020ರಿಂದ ಜಾರಿಗೆ ಬರಲಿದೆ.

ಪಾದರಕ್ಷೆ, ರಸಗೊಬ್ಬರ, ಜವಳಿ ಮುಂತಾದ ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಪರಿಷ್ಕರಣೆ ಬಗ್ಗೆ ಮುಂದಿನ ಜಿಎಸ್ಟಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಜಿಎಸ್ಟಿ ಪಾವತಿದಾರರ ಗಮನಕ್ಕೆ

ಜಿಎಸ್ಟಿ ಪಾವತಿದಾರರ ಗಮನಕ್ಕೆ

ಈ ನಡುವೆ ಕೊನೆದಿನಾಂಕವಾದರೂ ಜಿಎಸ್ಟಿಆರ್ 9ಸಿ ಪಾವತಿಸದ ಸಣ್ಣ ಉದ್ದಿಮೆದಾರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಜುಲೈ 1ರ ತನಕ ವಿನಾಯಿತಿ ಸಿಕ್ಕಿದ್ದು, ನಂತರ ವಿಳಂಬವಾಗಿ ಪಾವತಿಸಿದರೆ ಬಡ್ಡಿ ಹಾಕಲಾಗುತ್ತದೆ. ಇನ್ನು ವಾರ್ಷಿಕ 5 ಕೋಟಿ ರುಗೂ ಕಡಿಮೆ ಆದಾಯಯುಳ್ಳವರಿಗೆ 2019 ಆರ್ಥಿಕ ವರ್ಷದ ವಾರ್ಷಿಕ ರಿಟರ್ನ್ಸ್ ಪಾವತಿ ಕೊನೆ ದಿನಾಂಕ ಜೂನ್ 30, 2020 ಎಂದು ನಿಗದಿಪಡಿಸಲಾಗಿದೆ. 2018, 2019ರ ರಿಟರ್ನ್ಸ್ ಸಲ್ಲಿಸದ 2 ಕೋಟಿ ರುಗೂ ಕಡಿಮೆ ವಾರ್ಷಿಕ ಉಳ್ಳ ಉದ್ದಿಮೆದಾರರ ಮೇಲೆ ವಿಧಿಸಲಾಗಿದ್ದ ವಿಳಂಬ ಶುಲ್ಕ ತೆಗೆದುಹಾಕಲಾಗಿದೆ.

ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ

ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ

2018-19ರ ಅವಧಿಯಲ್ಲಿ ಮೊಬೈಲ್ ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ ಮೌಲ್ಯ 25 ಶತಕೋಟಿ ಡಾಲರ್ ಇದ್ದರೂ, ದರವನ್ನು ತೀರಾ ಅಧಿಕಮಟ್ಟಕ್ಕೆ ಹೆಚ್ಚಾಗಿ ಅಂದಾಜಿಸಲಾಗಿದೆ. ಮಾರುಕಟ್ಟೆ ಬೇಡಿಕೆಯನ್ನು 80 ಶತಕೋಟಿ ಡಾಲರ್‍ಗೆ ಹೆಚ್ಚಿಸಬೇಕಾದರೆ, ಸಾಂಪ್ರದಾಯಿಕ ಪ್ರಗತಿದರದ ಅಂದಾಜನ್ನು ಮೀರಿ ಬೆಳೆಯುವ ನಿರೀಕ್ಷೆ ಇದೆ ಎಂದು ಐಸಿಇಎ ಅಭಿಪ್ರಾಯಪಟ್ಟಿದೆ.

ಜಿಎಸ್‍ಟಿ ದರ ಪರಿಷ್ಕರಣೆ

ಜಿಎಸ್‍ಟಿ ದರ ಪರಿಷ್ಕರಣೆ

ಈ ಚಾಂಪಿಯನ್ ಉತ್ಪನ್ನದ ಮೇಲಿನ ಜಿಎಸ್‍ಟಿ ದರವನ್ನು ಪರಿಷ್ಕರಿಸುವ ಯಾವುದೇ ಪ್ರಯತ್ನ, ಇಡೀ ಉದ್ಯಮಕ್ಕೆ ಮಾರಕವಾಗಲಿದೆ. ಈ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಜಿಎಸ್‍ಟಿ ಪೂರ್ವ ಯುಗದಲ್ಲಿ ಕೂಡಾ, ವಿಎಟಿ ವ್ಯವಸ್ಥೆಯಡಿಯಲ್ಲಿ, ಮೊಬೈಲ್ ಸೆಟ್‍ಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇಕಡ 4-5ರಷ್ಟು ಮಾತ್ರ ಇತ್ತು ಎಂದು ಐಸಿಇಎ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಯಾವೆಲ್ಲ ಪದಾರ್ಥ ಬೆಲೆ ಏರಿಕೆ ಸಾಧ್ಯತೆ?

ಯಾವೆಲ್ಲ ಪದಾರ್ಥ ಬೆಲೆ ಏರಿಕೆ ಸಾಧ್ಯತೆ?

ಟಿವಿ, ಟಾರ್ಚ್, ಗೀಸರ್, ಐರನ್ ಬಾಕ್ಸ್, ಹೀಟರ್, ಮಿಕ್ಸರ್, ಜ್ಯೂಸರ್ ಇತ್ಯಾದಿ ಬೆಲೆ ಶೇ 18ಕ್ಕೇರುವ ನಿರೀಕ್ಷೆಯಿದೆ., ಬೆಲೆ ಏರಿಕೆ ಅನಿವಾರ್ಯ ಎನ್ನಲಾಗಿದೆ. ರಸಗೊಬ್ಬರ ಶೇ 12ರಷ್ಟು ತೆರಿಗೆ ಸ್ಲ್ಯಾಬ್ ನಲ್ಲಿದೆ. ಇನ್ಪುಟ್ ತೆರಿಗೆ ಕ್ರೆಡಿಟ್ ರೂಪದಲ್ಲಿ 6000 ಕೋಟಿ ರು ಸಂದಾಯವಾಗಿದೆ. ಆದರೆ ಅಮೋನಿಯಾ, ಸಲ್ಫರ್ ನಿಂದ ಹೆಚ್ಚಿನ ಇನ್ಪುಟ್ ಬಂದಿಲ್ಲ ಹೀಗಾಗಿ ಶೇ 18ರಷ್ಟು ತೆರಿಗೆ ಸ್ಲ್ಯಾಬಿಗೆ ತರುವ ಸಾಧ್ಯತೆಯಿದೆ. ಈ ಬಗ್ಗೆ ಮುಂದಿನ ಜಿಎಸ್ಟಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+