ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಭಾಷೆಯಲ್ಲೇ ಸಂದೇಶ ಕಳಿಸಲು ಜಿಬೋರ್ಡ್ ಬಳಸಿ

ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ, ಭಾರತೀಯ ಮಾರುಕಟ್ಟೆಗೆ ತನ್ನ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಗೂಗಲ್ ಕೀಬೋರ್ಡ್(ಜಿಬೋರ್ಡ್) ಹಾಗೂ ನ್ಯೂರಲ್ ಸಿಸ್ಟಮ್ ಲಭ್ಯವಿದೆ.

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 25: ಭಾರತದಂಥ ವೈವಿಧ್ಯಮಯ ಭಾಷೆಗಳ ದೇಶಕ್ಕೆ ಹೊಂದಬಲ್ಲ ಉತ್ಪನ್ನಗಳನ್ನು ಗೂಗಲ್ ಇಂಡಿಯಾ ಪರಿಚಯಿಸುತ್ತಿದೆ. ಜಿಬೋರ್ಡ್ ಬಳಸಿ, ಇನ್ಮುಂದೆ ನಿಮ್ಮದೇ ತಾಯಿನುಡಿಯಲ್ಲಿ ಸುಲಭವಾಗಿ ಸಂದೇಶ ರವಾನಿಸಬಹುದಾಗಿದೆ.

ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ, ಭಾರತೀಯ ಮಾರುಕಟ್ಟೆಗೆ ತನ್ನ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಗೂಗಲ್ ಕೀಬೋರ್ಡ್(ಜಿಬೋರ್ಡ್) ಹಾಗೂ ನ್ಯೂರಲ್ ಸಿಸ್ಟಮ್ ಲಭ್ಯವಿದೆ.ಜಿಬೋರ್ಡ್ 22 ಭಾಷೆಗಳಲ್ಲಿ ಲಭ್ಯವಿದ್ದರೆ, ನ್ಯೂರಲ್ ಸಿಸ್ಟಮ್ 9 ಭಾಷೆಗಳಲ್ಲಿ ಸಿಗಲಿದೆ.[ಗೂಗಲ್ ಜತೆಗೆ ಕೈ ಜೋಡಿಸಲಿದೆ ರಿಲಯನ್ಸ್ ಜಿಯೊ]

Google launches Gboard and Neural Network in Indian languages including Kannada

ಜಿಬೋರ್ಡ್: ಜಿಬೋರ್ಡ್ ನಲ್ಲಿ ಈಗ ಅಸ್ಸಾಮಿ, ಬೆಂಗಾಲಿ, ಬೊಡೋ, ಡೊಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಾಂಥಲಿ, ಸಿಂಧಿ, ತಮಿಳು, ತೆಲುಗು ಹಾಗೂ ಉರ್ದು ಬಳಸಬಹುದಾಗಿದೆ.[ಬಾಲಕಿಗೆ ಗೂಗಲ್ ಸಿಇಒ ಪಿಚ್ಚೈ ಬರೆದ 'ಸುಂದರ' ಪತ್ರ]

* ಟ್ರಾನ್ಸ್ ಲಿಟರೆಷನ್ ಮೂಲಕ ನಿಮ್ಮದೇ ಭಾಷೆಗೆ ಸಂದೇಶಗಳು ಅನುವಾದಗೊಳ್ಳಲಿವೆ.
* ಭಾಷೆಗಳ ಕೀಬೋರ್ಡ್ ಹಾಗೂ ಇಂಗ್ಲೀಷ್ ನಿಂದ ಬೇರೆ ಭಾಷೆಗೆ ಭಾಷಾಂತರವಾಗುವ ಕೀಬೋರ್ಡ್ ಲಭ್ಯ.
* ಗೆಸ್ಚರ್/ ಸ್ವೈಪಿಂಗ್ ಆಧಾರಿತ ಟ್ರೈಪಿಂಗ್ ಲಭ್ಯ
* ಎಮೋಜಿ/ ಜಿಫ್ ಇಮೇಜ್ ಬಳಸಲು ಅನುಕೂಲ.
* ಕೀಬೋರ್ಡ್ ನಿಂದ ನೇರವಾಗಿ ವೆಬ್ ಮೂಲಕ ಸರ್ಚ್ ಮಾಡುವ ಅವಕಾಶ
* ವಾಟ್ಸಪ್ ಮುಂತಾದ ಮೆಸೆಜಿಂಗ್ ಅಪ್ಲಿಕೇಷನ್ ಗೆ ಉಪಯುಕ್ತ.
* ಜಿಬೋರ್ಡ್ ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ಬಳಸಿ
ಪ್ರತಿಯೊಬ್ಬ ಭಾರತೀಯರಿಗೂ ಇಂಟರ್ನೆಟ್: ನ್ಯೂರಲ್ ಮಷಿನ್ ಟ್ರಾನ್ಸ್ ಲೇಷನ್ ಈಗ ಕನ್ನಡ ಸೇರಿದಂತೆ ಹಿಂದಿ, ಬೆಂಗಾಲಿ, ಪಂಜಾಬಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ.

ಭಾರತದಲ್ಲಿ ಸದ್ಯ 400 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು, 2020ರಲ್ಲಿ ಈ ಸಂಖ್ಯೆ 600 ಮಿಲಿಯನ್ ಗೇರುವ ನಿರೀಕ್ಷೆಯಿದೆ ಭಾರತ ಹಾಗೂ ಈಶಾನ್ಯ ಏಷ್ಯಾದ ಉಪಾಧ್ಯಕ್ಷ ರಾಜನ್ ಆನಂದನ್ ಅವರು ಹೇಳಿದ್ದಾರೆ.

ಗೂಗಲ್ ನಿಂದ ಹೊರ ಬಂದ ಕುತೂಹಲಕಾರಿ ಅಂಶಗಳು:
* ಸ್ಮಾರ್ಟ್ ಫೋನ್ ಮೂಲಕ ಇಂಟರ್ನೆಟ್ ಬಳಸುವವರ ಸಂಖ್ಯೆ 300 ಮಿಲಿಯನ್ ನಷ್ಟಿದೆ.
* ರೈಲ್ ಟೆಲ್ ಜತೆ ಒಪ್ಪಂದ ಮಾಡಿಕೊಂಡಿರುವ ಗೂಗಲ್ ಸಂಸ್ಥೆ, ರೈಲ್ವೆ ನಿಲಾಣಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ನೀಡಲಿದೆ.
* ಗೂಗಲ್ ಕ್ರೋಮ್ ಹಾಗೂ ಮ್ಯಾಪ್ ಗಳಲ್ಲಿ ನ್ಯೂರಲ್ ಮಷಿನ್ ಟ್ರಾನ್ಸ್ ಲೇಷನ್ ಲಭ್ಯವಿದೆ.
* ಪ್ರತಿ ದಿನ ನೂರು ಕೋಟಿಗೂ ಅಧಿಕ ಭಾಷಾಂತರ ಕಾರ್ಯ ನಡೆಯುತ್ತಿದೆ.
* ಗೂಗಲ್ ಟ್ರಾನ್ಸ್ ಲೇಟ್ ಬಳಕೆದಾರರ ಸಂಖ್ಯೆ ಭಾರತವಲ್ಲದೆ, ಇಂಡೋನೇಷಿಯಾ, ಬ್ರೆಜಿಲ್, ಥೈಲ್ಯಾಂಡ್ ನಲ್ಲೂ ಇದೆ.

English summary
Google India has launched Gboard(keyboard) and Neutral Network in Indian languages including Kannada. Gboard is made available in 22 languages and neural system in 9 languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X