Gold, Silver Price: ಗಗನಕ್ಕೇರಿದ ಬೆಳ್ಳಿ, ಬಂಗಾರ ಬೆಲೆ: ಬೆಂಗಳೂರಿನಲ್ಲಿ ಎಷ್ಟಿದೆ ದರ ತಿಳಿಯಿರಿ
Gold, Silver Price: ಮತ್ತೆ ಬಂಗಾರ, ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ ಆಗಿದೆ. ಹಾಗಾದ್ರೆ ಇಂದು (ಜನವರಿ 21) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರವನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಜನವರಿ 20) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,37,300 ರೂಪಾಯಿ ಇದ್ದರೆ, ಇಂದು (ಜನವರಿ 21) 1,41,900 ರೂಪಾಯಿಗೆ ಏರಿಕೆಯಾಗಿದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,49,780 ರೂಪಾಯಿ ಇತ್ತು. ಇನ್ನು ಇಂದು ಕೂಡ 1,54,800 ರೂಪಾಯಿಗೆ ದಾಖಲೆಯ ಏರಿಕೆ ಆಗಿದೆ. ಹಾಗಾದ್ರೆ, ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,13,520 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,23,840 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,41,900 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,54,800 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,44,150 ರೂಪಾಯಿ
* ಚೆನ್ನೈ - 1,42,500 ರೂಪಾಯಿ
* ಮುಂಬೈ - 1,44,150 ರೂಪಾಯಿ
* ಕೋಲ್ಕತ್ತಾ - 1,44,150 ರೂಪಾಯಿ
* ನವದೆಹಲಿ - 1,44,300 ರೂಪಾಯಿ
* ಹೈದರಾಬಾದ್ - 1,44,150 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,57,260 ರೂಪಾಯಿ
* ಚೆನ್ನೈ - 1,55,460 ರೂಪಾಯಿ
* ಮುಂಬೈ - 1,57,260 ರೂಪಾಯಿ
* ಕೋಲ್ಕತ್ತಾ - 1,57,260 ರೂಪಾಯಿ
* ನವದೆಹಲಿ - 1,57,410 ರೂಪಾಯಿ
* ಹೈದರಾಬಾದ್ - 1,57,260 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)
* ಬೆಂಗಳೂರು - 3,30,000 ರೂಪಾಯಿ (10,000 ರೂಪಾಯಿ ಏರಿಕೆ)
* ಚೆನ್ನೈ - 3,40,000 ರೂಪಾಯಿ
* ಮುಂಬೈ - 3,30,000 ರೂಪಾಯಿ (10,000 ರೂಪಾಯಿ ಏರಿಕೆ)
* ಕೋಲ್ಕತ್ತಾ - 3,30,000 ರೂಪಾಯಿ (10,000 ರೂಪಾಯಿ ಏರಿಕೆ)
* ನವದೆಹಲಿ - 3,30,000 ರೂಪಾಯಿ (10,000 ರೂಪಾಯಿ ಏರಿಕೆ)
* ಹೈದರಾಬಾದ್ - 3,40,000 ರೂಪಾಯಿ
ಮತ್ತಷ್ಟು ದರ ಏರಿಕೆ ಸಾಧ್ಯತೆ: ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲಿದ್ದಾರೆ. ಇದೀಗ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಆಭರಣಗಳ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಅಂತಲೂ ಹಲವು ಆರ್ಥಿಕ ತಜ್ಞರು ಹೇಳಿದ್ದಾರೆ.












Click it and Unblock the Notifications