Gold & Silver Prices: ಮತ್ತೆ 80,000 ಸಾವಿರ ಗಡಿಗೆ ಚಿನ್ನದ ಬೆಲೆ: ನವೆಂಬರ್ 19ರ ಚಿನ್ನದ ಬೆಲೆ ನೋಡಿ!
ಬೆಂಗಳೂರು ವೆದರ್ ಹಾಗೂ ಚಿನ್ನದ ಬೆಲೆ ಎರಡೂ ಒಂದೇ ರೀತಿ ಇದೆ. ಹೌದು ಬೆಂಗಳೂರಲ್ಲಿ ಹವಾಮಾನ ಬದಲಾಗುತ್ತಲ್ಲೇ ಇದೆ. ಬೆಳಿಗ್ಗೆ ಮೋಡ ಕವಿದ ವಾತಾವರಣ ಇದ್ದರೆ, ಮಧ್ಯಾಹ್ನ ಸುಡು ಬಿಸಿಲು ಸಂಜೆ ಮತ್ತದೇ ಚಳಿ! ಇದೇ ರೀತಿ ಗೋಲ್ಡ್ ರೇಟ್ ಸಹ ದಿನಕ್ಕೊಂದು ರೀತಿ ಬದಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಚಿನ್ನದ ಬೆಲೆ ಕುಸಿಯುತ್ತಿತ್ತು. ಇದೀಗ ಚಿನ್ನದ ಬೆಲೆ ಏಕಾಏಕಿ ಗಗನಮುಖಿಯಾಗಿದೆ. ಹೌದು ಇದೀಗ ಪ್ರತಿ ನೂರು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಬರೋಬ್ಬರಿ 7,600 ರೂಪಾಯಿ ಹೆಚ್ಚಳವಾಗಿದೆ.
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವುದು ಚಿನ್ನ ಪ್ರಿಯರಿಗೆ ಶಾಕ್ ಸೃಷ್ಟಿಸಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆ ಹೆಚ್ಚಾಗುತ್ತಲ್ಲೇ ಇದೆ. ಎಲ್ಲಿ ಮತ್ತೆ ಚಿನ್ನದ ಬೆಲೆ 80,000 ಸಾವಿರ ರೂಪಾಯಿ ಗಡಿ ಮುಟ್ಟುತ್ತೋ ಎನ್ನುವ ಆತಂಕ ಎದುರಾಗಿದೆ. ಕಳೆದ ತಿಂಗಳು ಚಿನ್ನ ಬೆಲೆ ಬರೋಬ್ಬರಿ 80,000 ಸಾವಿರ ರೂಪಾಯಿ ಗಡಿ ದಾಟಿತ್ತು. ಇದೇ ರೀತಿ ಬೆಲೆ ಏರಿಕೆಯಾದರೆ ವರ್ಷಾಂತ್ಯದ ಒಳಗೆ ಚಿನ್ನದ ಬೆಲೆಯು 1 ಲಕ್ಷ ರೂಪಾಯಿಯ ಗಡಿ ಮುಟ್ಟುವುದರಲ್ಲಿತ್ತು. ಇನ್ನೇನು ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ಮುಟ್ಟಿಯೇ ಬಿಟ್ಟಿತ್ತು ಎನ್ನುವಾಗಲೇ ಚಿನ್ನದ ಬೆಲೆ ಇಳಿಯುತ್ತಾ ಬಂದಿತ್ತು. ಆದರೆ, ಈಗ ಚಿನ್ನದ ಬೆಲೆ ಮತ್ತೆ ಹೆಚ್ಚಳವಾಗುತ್ತಿದ್ದು, ಚಿನ್ನ ಎಲ್ಲಿ 80 ಸಾವಿರ ರೂಪಾಯಿಗೆ ತಲುಪಿ ಬಿಡುತ್ತೋ ಎನ್ನುವ ಭಯ ಶುರುವಾಗಿದೆ.

ಚಿನ್ನದ ಬೆಲೆ ಸೋಮವಾರಕ್ಕಿಂತಲೂ ಮಂಗಳವಾರ ಹೆಚ್ಚಾಗಿದೆ. ಹಾಗಾದರೆ ಮಂಗಳವಾರ ಚಿನ್ನದ ಬೆಲೆ ಏನು, ಚಿನ್ನದ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಚಿನ್ನ ಎಂದರೆ ಯಾರಿಗೆ ತಾನೇ ಇಷ್ಟವಗಲ್ಲ ಅದೊಂದು ರೀತಿ ಎಕ್ಸ್‌ಟ್ರಾ ಸೇವಿಂಗ್ಸ್‌ನಂತೆ ಜೇಬು ಖಾಲಿಯಾದಾಗ ಯಾರ ನಿರೀಕ್ಷೆಯೂ ಇಲ್ಲದೆ ಚಿನ್ನದಿಂದ ಹಣ ಪಡೆಯಬಹುದು. ಇದೇ ಕಾಲಕ್ಕೆ ಮಹಿಳೆಯರು ಕೈಯಲ್ಲಿ ನಾಲ್ಕು ಕಾಸು ಸೇರಿದರೆ ಮೊದಲು ಚಿನ್ನ ಖರೀದಿ ಮಾಡುವ ಉಪಾಯ ನೋಡುತ್ತಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಳಿತವಾಗುತ್ತಿದ್ದು, ಯಾವಾಗ ಇಳಿಯುತ್ತೆ, ಯಾವಾಗ ಹೆಚ್ಚಳವಾಗುತ್ತೆ ಎಂದು ಹೇಳಲೇ ಆಗದಷ್ಟು ಬದಲಾಗುತ್ತಿದೆ. ಚಿನ್ನದ ಬೆಲೆ ನವೆಂಬರ್ 18ಕ್ಕಿಂತಲೂ ನವೆಂಬರ್ 19ಕ್ಕೆ ಭರ್ಜರಿ ಹೆಚ್ಚಳವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 100 ಗ್ರಾಂಗೆ ಬರೋಬ್ಬರಿ 7,600 ರೂಪಾಯಿ ಹೆಚ್ಚಳವಾಗಿದೆ.
ನವೆಂಬರ್ 19ರ ಚಿನ್ನದ ಬೆಲೆ
24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯು ಕಳೆದ ಒಂದು ವಾರದಿಂದ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಲ್ಲೇ ಇದೆ. ಪ್ರತಿದಿನ
ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದು, ಚಿನ್ನದ ಬೆಲೆ 80,000 ಸಾವಿರ ರೂಪಾಯಿ ಗಡಿಗೆ ಮತ್ತೆ ಬಂದು ನಿಂತಿದೆ.

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಶುದ್ಧ ಚಿನ್ನ 24 ಕ್ಯಾರೆಟ್ ಬಂಗಾರದ ಬೆಲೆಯು ಇದೀಗ 100 ಗ್ರಾಂಗೆ 7,600 ರೂಪಾಯಿ ಹೆಚ್ಚಳವಾದಂತಾಗಿದೆ. ಪ್ರತಿ 100 ಗ್ರಾಂ ಬೆಲೆ 7,70,700 ರೂಪಾಯಿ ಆಗಿದೆ. ಸೋಮವಾರ ಇದು 7,63,100 ರೂಪಾಯಿ ಆಗಿತ್ತು.
ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 77,070ಕ್ಕೆ ಆಗಿದೆ. 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 7,707 ರೂಪಾಯಿ ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆಯು ಈಗ 7,000 ಸಾವಿರ ರೂಪಾಯಿ ಹೆಚ್ಚಾಗಿದೆ. ಪ್ರತಿ 100 ಗ್ರಾಂನ ಬೆಲೆಯು 7,06,500 ರೂಪಾಯಿ ಆಗಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆಯು 70,650 ರೂಪಾಯಿ ಆಗಿದೆ. ಇನ್ನು 1 ಗ್ರಾಂ ಬೆಲೆಯು 7,065 ರೂಪಾಯಿ ಹೆಚ್ಚಳವಾಗಿದೆ.












Click it and Unblock the Notifications