Gold Price Today Nov 26: ಚಿನ್ನ ಖರೀದಿದಾರರಿಗೆ ಆಘಾತ, ಎಷ್ಟಿದೆ ಇಂದಿನ ಚಿನ್ನ-ಬೆಳ್ಳಿ ದರ?
ಚಿನ್ನ ಹಾಗೂ ಬೆಳ್ಳಿ ದರವು ಮಂಗಳವಾರ ಭಾರೀ ಏರಿಕೆ ಕಾಣುವ ಮೂಲಕ ಚಿನ್ನ ಖರೀದಿದಾರರಿಗೆ ಆಘಾತ ನೀಡಿದೆ. ಸೋಮವಾರ ಇಳಿಕೆ ಕಂಡಿದ್ದ ಚಿನ್ನದ ದರವು ಒಂದೇ ದಿನದಲ್ಲಿ ದಿಢೀರ್ ಏರಿಕೆ ಕಾಣುವ ಮೂಲಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ವರ್ಷಾಂತ್ಯ ಮುಗಿಯುತ್ತಿರುವ ಹಿನ್ನೆಲೆ ಹಲವರು ಚಿನ್ನ ಖರೀದಿ ಮೇಲೆ ಆಸಕ್ತಿ ತೋರಿದ್ದಾರೆ. ಆದರೆ ಭಾರೀ ದರ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಚಿನ್ನ ಖರೀದಿಸುವವರು ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ನೋಡುವುದಾದರೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,791, 22 ಕ್ಯಾರೆಟ್ ಚಿನ್ನಕ್ಕೆ ₹11,725 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,593 ಆಗಿದೆ. ಚಿನ್ನದ ದರ ಸತತವಾಗಿ ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹12,791 ಆಗಿದ್ದು, ನಿನ್ನೆಗಿಂತ ₹87 ಹೆಚ್ಚಾಗಿದೆ. 8 ಗ್ರಾಂ.ಚಿನ್ನದ ದರವು ₹1,02,328, 10 ಗ್ರಾಂ ಚಿನ್ನದ ದರ ₹1,27,910, 100 ಗ್ರಾಂ ಚಿನ್ನದ ದರ ₹12,79,100 ಆಗಿದ್ದು, ಬರೋಬ್ಬರಿ ₹8,700 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,593 ಆಗಿದ್ದು, ಒಂದು ಗ್ರಾಂ ಮೇಲೆ ₹65 ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರ ₹76,744, 10 ಗ್ರಾಂ ಚಿನ್ನದ ದರ ₹95,930, 100 ಗ್ರಾಂ ಚಿನ್ನದ ದರ ₹9,59,300 ಆಗಿದ್ದು ನಿನ್ನೆಗಿಂತ ₹6,500 ಏರಿಕೆ ಕಂಡಿದೆ. 18 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂಗೆ ₹9,593 ಆಗಿದ್ದು, ಒಂದು ಗ್ರಾಂ ಮೇಲೆ ₹65 ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರವು ₹76,744, 10 ಗ್ರಾಂ ಚಿನ್ನದ ದರ ₹95,930 ಹಾಗೂ 100 ಗ್ರಾಂ ಚಿನ್ನದ ದರ ₹9,59,300 ಆಗಿದ್ದು, ₹6,500ವರೆಗೆ ದಿಢೀರ್ ಏರಿಕೆಯಾಗಿದೆ. ಕಳೆದ ಎರಡೂ ದಿನಗಳಿಂದ ದರಗಳು ನಿರಂತರವಾಗಿ ಏರುತ್ತಿದ್ದು, ಖರೀದಿದಾರರು ಕಂಗಾಲಾಗಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ನವೆಂಬರ್ 26, ₹12,791 ; ₹11,725
ನವೆಂಬರ್ 25, ₹12,704 ; ₹11,645
ನವೆಂಬರ್ 24, ₹12,513 ; ₹11,470
ನವೆಂಬರ್ 23, ₹12,584 ; ₹11,535
ನವೆಂಬರ್ 22, ₹12,584 ; ₹11,535
ನವೆಂಬರ್ 21, ₹12,398 ; ₹11,365
ನವೆಂಬರ್ 20, ₹12,426 ; ₹11,390
ನವೆಂಬರ್ 19, ₹12,486 ; ₹11,445
ನವೆಂಬರ್ 18, ₹12,366 ; ₹11,335
ನವೆಂಬರ್ 17, ₹12,540 ; ₹11,495
ನವೆಂಬರ್ 16, ₹12,508 ; ₹11,465
ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಚಿನ್ನದ ಜೊತೆಗೆ ಬೆಳ್ಳಿ ದರಗಳು ಕೂಡ ಸದ್ಯ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹169 ಮತ್ತು ಪ್ರತಿ ಕಿಲೋಗ್ರಾಂಗೆ ₹1,69,000 ಆಗಿದೆ. ಪ್ರತಿ ಕೆ.ಜಿಗೆ ನಿನ್ನೆಗಿಂತ ₹2,000 ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ತುಸು ಕಡಿಮೆಯಾಗಿದೆ. ಸದ್ಯ ಪ್ರತಿ ಗ್ರಾಂಗೆ ₹4,448 ಮತ್ತು 10 ಗ್ರಾಂಗೆ ₹44,480 ಆಗಿದೆ. ಗ್ರಾಂ ಮೇಲೆ 13 ರೂಪಾಯಿ ಕಡಿಮೆಯಾಗಿದೆ.
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ












Click it and Unblock the Notifications