ಅ.20 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಏರಿಳಿತ

ನವದೆಹಲಿ, ಅಕ್ಟೋಬರ್ 20: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತಗೊಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ, ಕಡಿಮೆಯಾಗಿದ್ದು, 46,500 ರೂ. ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯೂ 10 ರೂ. ಇಳಿಕೆ ಕಂಡಿದ್ದು 47,500 ರೂ. ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,300 ರೂ. ಇದ್ದು, 24 ಕ್ಯಾರೆಟ್ ಚಿನ್ನ 48,300 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 46,450 ರೂ. ಇದ್ದು, 24 ಕ್ಯಾರೆಟ್ ಚಿನ್ನ 50,650 ರೂ. ಇದೆ.

ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ - ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ 'ಭಾರತೀಯ ಚಿನ್ನ ಬೇಡಿಕೆಯ ಚಾಲಕರು' ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಎಕನೋಮೆಟ್ರಿಕ್‌ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.

ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ - ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.

ವಿಶ್ವ ಚಿನ್ನದ ಪರಿಷತ್ತಿನ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿ.ಆರ್, 'ನಮ್ಮ ಇತ್ತೀಚಿನ ಸಂಶೋಧನೆ, ಭಾರತದಲ್ಲಿ ಚಿನ್ನದ ಬೇಡಿಕೆಯ ಚಾಲಕರು ಹಲವು ಮತ್ತು ವೈವಿಧ್ಯಮಯವಾಗಿದೆ ಎಂಬ ಅಂಶವನ್ನು ಬಲಪಡಿಸುತ್ತದೆ.

ಸಾಂಸ್ಕೃತಿಕ ಬಾಂಧವ್ಯ, ದೀರ್ಘಕಾಲದ ಸಂಪ್ರದಾಯ ಮತ್ತು ಹಬ್ಬಗಳಲ್ಲಿ ಉಡುಗೊರೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದು ಕಳೆದ ಮೂರು ದಶಕಗಳಲ್ಲಿ ಭಾರತದ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತದ ಹೂಡಿಕೆದಾರರು ಮನೆಯ ಆದಾಯ, ಚಿನ್ನದ ಬೆಲೆ ಮತ್ತು ಹಣದುಬ್ಬರಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವರದಿ ಇಂದು ಹಾಗೂ ಭವಿಷ್ಯದಲ್ಲಿ ಚಿನ್ನದ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ವಿವರಿಸುತ್ತಾರೆ.

*ಆದಾಯ: ಶೇ. 1ರಷ್ಟು ರಾಷ್ಟ್ರೀಯ ತಲಾದಾಯ ಹೆಚ್ಚಳವಾದಲ್ಲಿ ಚಿನ್ನದ ಬೇಡಿಕೆ ಶೇ. 0.9ರಷ್ಟು ಏರಿಕೆಯಾಗುತ್ತದೆ.

*ಚಿನ್ನದ ದರ: ಚಿನ್ನದ ರೂಪಾಯಿ ಆಧಾರಿತ ಬೆಲೆಯಲ್ಲಿ ಶೇ.1ರಷ್ಟು ಏರಿಕೆಯಾದಾಗ, ಬೇಡಿಕೆ ಶೇ.0.4ರಷ್ಟು ಕಡಿಮೆಯಾಗುತ್ತದೆ.

*ಸರ್ಕಾರಿ ಸುಂಕಗಳು: ಆಮದು ಸುಂಕ ಮತ್ತು ಇತರ ತೆರಿಗೆಗಳು ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ ಅದು ಚಿನ್ನವನ್ನು ಆಭರಣಗಳು ಅಥವಾ ಬಾರ್‌ಗಳು ಮತ್ತು ಕಾಯಿನ್‌ ಹೀಗೆ ಅದರ ಖರೀದಿಯ ಪ್ರಕಾರವನ್ನು ಆಧರಿಸಿರುತ್ತದೆ.

 ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 20:44, 300 ರೂ, 48,330 ರೂ(-)
ಅಕ್ಟೋಬರ್ 19:44, 300 ರೂ, 48,330 ರೂ
ಅಕ್ಟೋಬರ್ 18:44, 300 ರೂ, 48,330 ರೂ
ಅಕ್ಟೋಬರ್ 17: 44,190ರೂ (10 ರೂ. ಇಳಿಕೆ) , 48,210 ರೂ(10 ರೂಇಳಿಕೆ)
ಅಕ್ಟೋಬರ್ 16:44,200ರೂ (600 ರೂ. ಇಳಿಕೆ) , 48,220 ರೂ(650 ರೂಇಳಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

 ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 20: 46,450( 10ರೂ ಇಳಿಕೆ), 50,670 ರೂ(10ರೂ ಇಳಿಕೆ)
ಅಕ್ಟೋಬರ್ 19:46,460 ರೂ,( 130ರೂ. ಏರಿಕೆ) 50,680 ರೂ( 140 ರೂ. ಏರಿಕೆ)
ಅಕ್ಟೋಬರ್ 18:46,330 ರೂ, 50,540 ರೂ
ಅಕ್ಟೋಬರ್ 17: 46,340ರೂ (10ರೂ ಇಳಿಕೆ) , 50,550 ರೂ (10ರೂ ಇಳಿಕೆ)
ಅಕ್ಟೋಬರ್ 16: 46,350 ರೂ (609ರೂ ಇಳಿಕೆ) , 50,560 ರೂ(660ರೂ ಇಳಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

 ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 20: 46,500 ರೂ, 47,500 ರೂ
ಅಕ್ಟೋಬರ್ 19: 47,070 ರೂ, 48,070 ರೂ
ಅಕ್ಟೋಬರ್ 18: 47,070 ರೂ, 48,070 ರೂ
ಅಕ್ಟೋಬರ್ 17: 47,070 ರೂ, 48,070 ರೂ
ಅಕ್ಟೋಬರ್ 16: 47,080 ರೂ, 48,080 ರೂ

ಬೆಳ್ಳಿ ಬೆಲೆ ಕೆ.ಜಿಗೆ64,400 ರೂಪಾಯಿ

 ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 20: 44,300 ರೂ, 48330 ರೂ
ಅಕ್ಟೋಬರ್ 19: 44,300 ರೂ, 48330 ರೂ
ಅಕ್ಟೋಬರ್ 18: 44,300 ರೂ, 48330 ರೂ
ಅಕ್ಟೋಬರ್ 17: 44,190 ರೂ, 48,210 ರೂ(10 ರು ಇಳಿಕೆ)
ಅಕ್ಟೋಬರ್ 16: 44,200 ರೂ, 48,220 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,700 ರೂಪಾಯಿ

 ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 20: 46,840 ರೂ, 48,300 ರೂ
ಅಕ್ಟೋಬರ್ 19: 46,760ರೂ(30ರೂ. ಏರಿಕೆ) , 49,460ರೂ(30ರೂ. ಏರಿಕೆ)
ಅಕ್ಟೋಬರ್ 18: 46,730ರೂ , 49,430ರೂ
ಅಕ್ಟೋಬರ್ 17: 46,740ರೂ , 49,440ರೂ
ಅಕ್ಟೋಬರ್ 16: 4,750 ರೂ , 49,450 ರೂ

ಬೆಳ್ಳಿ: 1 ಕೆ.ಜಿಗೆ 64,400 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+