Gold Price Today: ಚಿನ್ನ ಖರೀದಿಸಲು ಇದೇ ಒಳ್ಳೆಯ ಸಮಯ, ಎಷ್ಟಿದೆ ಇಂದಿನ ಚಿನ್ನದ ದರ?
ಚಿನ್ನ ಹಾಗೂ ಬೆಳ್ಳಿ ಖರೀದಿದಾರರಿಗೆ ಇದೀಗ ಒಳ್ಳೆಯ ಕಾಲ ಕೂಡಿ ಬಂದಿದೆ. ದೀಪಾವಳಿ ಹಬ್ಬ ಕೆಲವೇ ದಿನಗಳಿದ್ದು, ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ದರಗಳು ಕೂಡ ಈ ವಾರದ ಆರಂಭದಿಂದಲೂ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಈ ಹಬ್ಬದ ಶುಭಸಂದರ್ಭದಲ್ಲಿ ಚಿನ್ನ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿರುವವರಿಗೆ ನೆಮ್ಮದಿಯ ಸುದ್ದಿ ಇಲ್ಲಿದೆ. ನಿನ್ನೆ ಚಿನ್ನದ ದರ ಭಾರೀ ಹೆಚ್ಚಳ ಕಂಡಿತ್ತು. ಇಂದು ದರಗಳು ಎಂದಿನಂತೆ ಏರಿಕೆ ಕಂಡಿದೆ. ಇಂದು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,889, 22 ಕ್ಯಾರೆಟ್ ಚಿನ್ನಕ್ಕೆ ₹11,815 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,697. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,889 ಆಗಿದ್ದು, ನಿನ್ನೆಯ ದರಕ್ಕಿಂತ ಇಂದು ₹54 ಹೆಚ್ಚಾಗಿದೆ. 8 ಗ್ರಾಂ. ಚಿನ್ನದ ದರ ₹1,03,112, 10 ಗ್ರಾಂ. ಚಿನ್ನದ ದರ ₹1,28,890, 100 ಗ್ರಾಂ. ಚಿನ್ನದ ದರ ₹12,88,900 ಆಗಿದ್ದು, ನಿನ್ನೆಗಿಂತ ₹5,400 ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,815 ಆಗಿದ್ದು, ನಿನ್ನೆಗಿಂತ ₹50 ಏರಿಕೆ ಕಂಡಿದೆ. 8 ಗ್ರಾಂ. ಚಿನ್ನದ ದರ ₹94,520, 10 ಗ್ರಾಂ. ಚಿನ್ನದ ದರ ₹1,18,150, 100 ಗ್ರಾಂ. ಚಿನ್ನದ ದರ ₹11,81,500 ತಲುಪಿದೆ. ಒಂದೇ ದಿನದಲ್ಲಿ ₹5,000 ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,697 ಹೆಚ್ಚಳ ಕಂಡಿದೆ. ನಿನ್ನೆಗಿಂತ ಇಂದು ₹71 ಹೆಚ್ಚಾಗಿದೆ. 8 ಗ್ರಾಂ. ಚಿನ್ನದ ದರ ₹77,576, 10 ಗ್ರಾಂ. ಚಿನ್ನದ ದರ ₹96,970, 100 ಗ್ರಾಂ. ಚಿನ್ನದ ದರ ₹9,69,700 ಏರಿದ್ದು, ₹7,100ರವರೆಗೆ ಜಿಗಿತ ಕಂಡಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
| ದಿನಾಂಕ | ಮೊತ್ತ 1 | ಮೊತ್ತ 2 |
|---|---|---|
| ಅಕ್ಟೋಬರ್ 15 | ₹12,889 | ₹11,815 |
| ಅಕ್ಟೋಬರ್ 14 | ₹12,868 | ₹11,795 |
| ಅಕ್ಟೋಬರ್ 13 | ₹12,540 | ₹11,495 |
| ಅಕ್ಟೋಬರ್ 12 | ₹12,508 | ₹11,465 |
| ಅಕ್ಟೋಬರ್ 11 | ₹12,508 | ₹11,465 |
| ಅಕ್ಟೋಬರ್ 10 | ₹12,371 | ₹11,340 |
| ಅಕ್ಟೋಬರ್ 9 | ₹12,415 | ₹11,380 |
| ಅಕ್ಟೋಬರ್ 8 | ₹12,393 | ₹11,360 |
| ಅಕ್ಟೋಬರ್ 7 | ₹12,202 | ₹11,185 |
| ಅಕ್ಟೋಬರ್ 6 | ₹12,077 | ₹11,070 |

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಬೆಳ್ಳಿಯ ದರವು ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ದೀಪಾವಳಿ ಹಬ್ಬಕ್ಕೆ ಬೆಳ್ಳಿಯ ವಸ್ತುಗಳನ್ನು ಹೆಚ್ಚಾಗಿ ಖರೀದಿಸಿ, ಪೂಜೆ ಮಾಡುವ ಕಾರಣದಿಂದ ಬೆಲೆಗಳು ಏರುತ್ತಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹195 ಮತ್ತು ಪ್ರತಿ ಕಿಲೋಗ್ರಾಂಗೆ ₹1,95,000 ಆಗಿದೆ. ನಿನ್ನೆಗಿಂತ ದರ ₹1,400 ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಕುಸಿತ ಕಂಡಿದ್ದು, ಬೆಲೆ ಪ್ರತಿ ಗ್ರಾಂಗೆ ₹ 4,681 ಮತ್ತು 10 ಗ್ರಾಂಗೆ ₹ 46,810 ಆಗಿದೆ. ನಿನ್ನೆಗಿಂತ ಪ್ರತಿ ಗ್ರಾಂ.ಗೆ ₹79 ಇಳಿಕೆ ಕಂಡಿದೆ.












Click it and Unblock the Notifications