Gold Rate: ಚಿನ್ನ ಪ್ರಿಯರಿಗೆ ಆಘಾತ: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?

Gold Rate: ಚಿನ್ನ ಖರೀದಿ ಮಾಡಬೇಕು ಎಂದು ಕನಸು ಕಾಣುತ್ತಿದ್ದ ಚಿನ್ನ ಪ್ರಿಯರಿಗೆ ಮತ್ತೆ ನಿರಾಸೆ ಮೂಡಿದೆ. ಚಿನ್ನದ ಬೆಲೆಯು ನಿರಂತರವಾಗಿ ಮೂರನೇ ದಿನವೂ ಏರಿಕೆ ಕಂಡಿದೆ. ಈ ವಾರ ಪ್ರಾರಂಭದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿತ್ತು. ಆ ಸಂದರ್ಭದಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಆಗಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ, ಕಳೆದ ಮೂರು ದಿನದಿಂದಲೂ ಚಿನ್ನದ ಬೆಲೆ ಜಾಸ್ತಿ ಆಗುತ್ತಿದ್ದು. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಲಿದೆಯೇ ಎನ್ನುವ ಆತಂಕ ಎದುರಾಗಿದೆ. ಚಿನ್ನದ ಬೆಲೆಯು ಜುಲೈ 11 ರಂದು ಮತ್ತೆ ಹೆಚ್ಚಳವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.

ಚಿನ್ನ ಪ್ರಿಯರಿಗೆ ಚಿನ್ನದ ಬೆಲೆಯಿಂದ ಶಾಕ್ ಎದುರಾಗುತ್ತಲ್ಲೇ ಇದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲ್ಲೇ ಇದೆ. ಇಂದು ಸಹ ಚಿನ್ನದ ಬೆಲೆ ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆಯು ಮತ್ತೆ ತೀರ ಒಂದು ಲಕ್ಷ ರೂಪಾಯಿ ಸಮೀಪಕ್ಕೆ ಬಂದಿದೆ. ಚಿನ್ನದ ಬೆಲೆಯು ಬರೋಬ್ಬರಿ 99,000 ಸಾವಿರ ರೂಪಾಯಿ ಆಗಿದ್ದು. ಒಂದು ಲಕ್ಷ ರೂಪಾಯಿಗೆ ಕೇವಲ 1 ಸಾವಿರ ರೂಪಾಯಿ ಮಾತ್ರ ಬಾಕಿ ಉಳಿದಿದೆ.

Gold Rate Shock for gold lovers gold and silver price on July 11

ಬಂಗಾರದ ಬೆಲೆಯು ನಿರಂತರವಾಗಿ ಏರಿಕೆ ಆಗುತ್ತಿದ್ದು. ಬಂಗಾರ ಖರೀದಿ ಮಾಡಬೇಕು ಎಂದು ಕನಸು ಕಾಣುತ್ತಿರುವವರು ನಿರಾಸೆ ಅನುಭವಿಸುವಂತೆ ಆಗಿದೆ. ಜುಲೈ 11ರ ಶುಕ್ರವಾರವೂ ಸಹ ಚಿನ್ನದ ಬೆಲೆ ಭಾರೀ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ವಿವರ: ಕರ್ನಾಟಕದಲ್ಲಿ ಚಿನ್ನದ ಬೆಲೆಯು ಶುಕ್ರವಾರವೂ ಹೆಚ್ಚಳವಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ ವಿವಿಧ ಕ್ಯಾರೆಟ್‌ಗೆ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 7,425 ರೂಪಾಯಿ

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 9,075 ರೂಪಾಯಿ

24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ): 9,900 ರೂಪಾಯಿ

ಹತ್ತು ಗ್ರಾಂ ಚಿನ್ನ (10GM) ಎಷ್ಟಿದೆ

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 74,250 ರೂಪಾಯಿ

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 90,750 ರೂಪಾಯಿ

24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ): 99,000 ರೂಪಾಯಿ

ನೆನ್ನೆಗಿಂತ ಚಿನ್ನದ ಬೆಲೆ ಹೆಚ್ಚಳ: ನೆನ್ನೆಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ ಭಾರೀ ಹೆಚ್ಚಳವಾಗಿದೆ. ವಿವಿಧ ಕ್ಯಾರೆಟ್‌ನ ಚಿನ್ನದ ಬೆಲೆಯು ಒಂದು ಗ್ರಾಂಗೆ 45 ರೂಪಾಯಿಯಿಂದ 60 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು 10 ಗ್ರಾಂನ ಚಿನ್ನದ ಬೆಲೆಯು 450 ರೂಪಾಯಿಯಿಂದ 600 ರೂಪಾಯಿಯ ವರೆಗೆ ಹೆಚ್ಚಳವಾಗಿದೆ. ಈ ಮೂಲಕ ಚಿನ್ನದ ಬೆಲೆಯು ಕಳೆದ ಎರಡು ತಿಂಗಳು ಮುಂಚೆ ಇದ್ದ ಅದೇ ಒಂದು ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದೇ ಎನ್ನುವ ಆತಂಕ ಚಿನ್ನ ಪ್ರಿಯರಲ್ಲಿ ಎದುರಾಗಿದೆ.

ಬೆಳ್ಳಿ ಬೆಲೆ ಎಷ್ಟಿದೆ: ಇನ್ನು ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣ ಏರಿಕೆ ಆಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 111 ರೂಪಾಯಿ ಆಗಿದ್ದರೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 1,11,000 ಸಾವಿರ ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+