Gold Rate Sep 30: ದಸರಾ ಸಂಭ್ರಮದ ಬೆನ್ನಲ್ಲೇ ಚಿನ್ನ ಪ್ರಿಯರಿಗೆ ಭಾರೀ ಶಾಕ್, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ
Gold Rate Sep 30: ಚಿನ್ನ ಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಚಿನ್ನದ ಬೆಲೆಯು ಮಂಗಳವಾರ ಸೆಪ್ಟೆಂಬರ್ 30ರಂದು ಮತ್ತೆ ಸರ್ವಕಾಲಿಕ ದಾಖಲೆಯನ್ನು ಬರೆದಿದೆ. ಸೆಪ್ಟೆಂಬರ್ ತಿಂಗಳ ಪ್ರಾರಂಭದಲ್ಲಿ ಚಿನ್ನದ ಬೆಲೆಯು ಸಮಾಧಾನಕರವಾಗಿತ್ತು. ಆದರೆ ತಿಂಗಳಾಂತ್ಯದ ವೇಳೆಗೆ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಸಂಪೂರ್ಣ ವಿವರ ಇಲ್ಲಿದೆ.
ದೇಶದಲ್ಲಿ ವಿವಿಧ ಕಾರಣಗಳಿಗೆ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆ ಕಾಣುತ್ತಿದೆ. ಅಲ್ಲದೇ ಹಬ್ಬದ ಸಂದರ್ಭವೂ ಆಗಿರುವುದರಿಂದ ಚಿನ್ನ ಖರೀದಿ ಮಾಡುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜಿಎಸ್‌ಟಿ ಬದಲಾವಣೆ ಹಾಗೂ ಹಣಕಾಸು ವ್ಯವಹಾರ ಅಲ್ಪ ಪ್ರಮಾಣದಲ್ಲಿ ಚುರುಕು ಪಡೆದುಕೊಂಡಿರುವುದು ಸೇರಿದಂತೆ ಹಲವು ಕಾರಣಗಳಿಗೆ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗುತ್ತಿದೆ. ಆದರೆ ಚಿನ್ನ ಪ್ರಿಯರಿಗೆ ನಿರಂತರವಾಗಿ ಶಾಕ್ ಎದುರಾಗುತ್ತಿದೆ. ನೆನ್ನೆ ಸಹ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಇಂದೂ ಸಹ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 8,873 ಆಗಿದೆ. 10 ಗ್ರಾಂಗೆ ₹ 88,730 ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹106 ಹಾಗೂ 10 ಗ್ರಾಂಗೆ ₹ 1,060 ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. ಮಂಗಳವಾರ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು ₹10,845 ಆಗಿದ್ದರೆ, ಹತ್ತು ಗ್ರಾಂಗೆ ₹ 1,08, 450 ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಬೆಲೆಯು ₹130 ಹಾಗೂ 10 ಗ್ರಾಂಗೆ ₹ 1,300 ರೂಪಾಯಿ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆ ಸಹ ಭಾರೀ ಹೆಚ್ಚಳವಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ ₹ 11,831 ಆಗಿದೆ. ಇನ್ನು ಹತ್ತು ಗ್ರಾಂಗೆ ₹ 1,18,31 ಆಗಿದೆ. ನೆನ್ನೆಯ ಬೆಲೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಚಿನ್ನದ ಬೆಲೆಯು ₹142 ಹಾಗೂ 10 ಗ್ರಾಂನ ಬೆಲೆಯಲ್ಲಿ ₹1,420 ಆಗಿದೆ.
ಬೆಳ್ಳಿ ಬೆಲೆಯೂ ಭರ್ಜರಿ ಹೆಚ್ಚಳ: ಇನ್ನು ಚಿನ್ನದ ಬೆಲೆ ಮಾತ್ರವಲ್ಲ ಬೆಳ್ಳಿ ಬೆಲೆ ಸಹ ಹೆಚ್ಚಳವಾಗುತ್ತಿದೆ. ಇನ್ನು ಚಿನ್ನದೊಂದಿಗೆ ಬೆಳ್ಳಿ ಬೆಲೆ ಸಹ ಹೆಚ್ಚಳವಾಗುತ್ತಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ ₹151 ಹಾಗೂ ಕೆ.ಜಿಗೆ 1,51,000 ಆಗಿದೆ.












Click it and Unblock the Notifications