Gold Rate: ವಾರಾಂತ್ಯದಲ್ಲಿ ಚಿನ್ನ ಪ್ರಿಯರಿಗೆ ಹೊಸ ಶಾಕ್: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?

Gold Rate: ಚಿನ್ನ ಪ್ರಿಯರಿಗೆ ವಾರಾಂತ್ಯದ ಚಿನ್ನದ ಬೆಲೆಯು ಶಾಕ್ ನೀಡಿದೆ. ಜುಲೈ ಪ್ರಾರಂಭದಲ್ಲಿ ಚಿನ್ನದ ಬೆಲೆಯು ಇಳಿಕೆ ಕಂಡಿತ್ತು. ಇದೇ ರೀತಿ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಚಿನ್ನದ ಬೆಲೆಯು ಇದೀಗ ಮತ್ತೆ 1 ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. ಚಿನ್ನದ ಬೆಲೆಯು ವಾರಾಂತ್ಯದಲ್ಲಿ ಚಿನ್ನ ಪ್ರಿಯರಿಗೆ ಶಾಕ್ ನೀಡಿದೆ ಅಂತಲೇ ಹೇಳಬಹುದು. ಹೌದು ಚಿನ್ನದ ಬೆಲೆಯು ಏರಿಕೆ ಆಗುತ್ತಲ್ಲೇ ಇದ್ದು ಜುಲೈ ಎರಡನೇ ವಾರದ ಪ್ರಾರಂಭದಲ್ಲೇ ಚಿನ್ನದ ಬೆಲೆಯು ಭರ್ಜರಿ ಏರಿಕೆ ಕಂಡಿದೆ. ಇಂದಿನ ವಿವಿಧ ಕ್ಯಾರೆಟ್‌ನ ಚಿನ್ನದ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.

ಚಿನ್ನಕ್ಕೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಕೈ ಹಿಡಿಯುವ ಸಾಧನವಾಗಿ ಚಿನ್ನ ಬಳಕೆಯಾಗುತ್ತಿದೆ. ಚಿನ್ನದ ಬೆಲೆ ಇಳಿಕೆಯಾದರೆ ಖರೀದಿ ಮಾಡಬಹುದು ಎಂದು ಕಾಯುತ್ತಿದ್ದ ಕೋಟ್ಯಾಂತರ ಜನರಿಗೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದು ನಿರಾಸೆ ಮೂಡಿಸಿದೆ. ಚಿನ್ನದ ಬೆಲೆಯು ಮತ್ತೆ ಒಂದು ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. ಚಿನ್ನದ ಬೆಲೆಯು 10 ಗ್ರಾಂ ಸಮೀಪಕ್ಕೆ ಬಂದಿದೆ. ಚಿನ್ನದ ಬೆಲೆಯು ಜುಲೈ 13ರಂದು ಏರಿಕೆಯ ಹಾದಿಯಲ್ಲೇ ಇದೆ. ಇಂದಿನ ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆಯು ಚಿನ್ನ ಪ್ರಿಯರಿಗೆ ಶಾಕ್ ನೀಡಿದೆ.

Gold Rate New shock for gold lovers over the weekend What is the price of gold and silver on july 13

ಜುಲೈ 13ರ 18, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ವಿವರ

ಕರ್ನಾಟಕದಲ್ಲಿ ವಿವಿಧ ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ

18 ಕ್ಯಾರೆಟ್ ಚಿನ್ನದ ಬೆಲೆ: ಜುಲೈ 13ರಂದು 18 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 7,479 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಯಥಾಸ್ಥಿತಿಯಲ್ಲಿ ಇದೆ. ಎಲ್ಲಾ ಕ್ಯಾರೆಟ್‌ನ ಚಿನ್ನದ ಬೆಲೆಯು ಹೆಚ್ಚು ಬದಲಾವಣೆ ಆಗಿಲ್ಲ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 9,140 ರೂಪಾಯಿ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಒಂದು ಗ್ರಾಂನ ಚಿನ್ನದ ಬೆಲೆಯು 9,971 ರೂಪಾಯಿ ಆಗಿದೆ. ಬಹುತೇಕ 10 ಸಾವಿರದ ಸಮೀಪಕ್ಕೆ ಬಂದು ನಿಂತಿದೆ.

---------------

10 ಗ್ರಾಂ ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ?

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 74,790 ರೂಪಾಯಿ ಆಗಿದೆ. ಶನಿವಾರದ ಬೆಲೆಯೇ ಮುಂದುವರಿದಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆ 91,400 ರೂಪಾಯಿ ಆಗಿದೆ. ನೆನ್ನೆಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲವಾದರೂ ಚಿನ್ನದ ಬೆಲೆಯು ಬಹುತೇಕ 1 ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 99,710 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ: ಬೆಳ್ಳಿ ಬೆಲೆಯು ಇಂದು ಪ್ರತಿ ಗ್ರಾಂಗೆ 115 ರೂಪಾಯಿ ಆಗಿದೆ. ಪ್ರತಿ ಕೆ.ಜಿಗೆ 1,15,000 ಸಾವಿರ ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+