Gold Rate Jan 7: ಸತತ 5ನೇ ದಿನವೂ ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ, ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ
Gold Rate Jan 7: ಬಂಗಾರ ಪ್ರಿಯರಿಗೆ ಬುಧವಾರವೂ ಶಾಕ್ ಮುಂದುವರಿದಿದೆ. ಬುಧವಾರವೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಬಂಗಾರ ಖರೀದಿ ಮಾಡಬೇಕು ಎಂದು ನಿರೀಕ್ಷೆ ಮಾಡುತ್ತಿದ್ದ ಬಂಗಾರ ಪ್ರಿಯರಿಗೆ ಆಘಾತ ಎದುರಾಗಿದೆ. ವಿಶ್ವದಾದ್ಯಂತ ಭೌಗೋಳಿಕ ಹಾಗೂ ರಾಜಕೀಯ ಅಸ್ತಿರತೆ ಸೃಷ್ಟಿಯಾಗಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಬುಧವಾರ ಜನವರಿ 7ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಹೆಚ್ಚಳವಾಗಿದೆ ಎನ್ನುವ ನಿಖರವಾದ ವಿವರ ಇಲ್ಲಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಬುಧವಾರವೂ ಹೆಚ್ಚಳವಾಗಿದೆ. ಈ ಮೂಲಕ ಸತತ ಐದನೇ ದಿನವೂ ಚಿನ್ನದ ಬೆಲೆಯಲ್ಲಿ ಗರಿಷ್ಠ ದಾಖಲೆ ಆಗಿದೆ. ಕಳೆದ ಆರು ತಿಂಗಳಿನಿಂದಲೂ ಚಿನ್ನದೊಂದಿಗೆ ಬೆಳ್ಳಿಯ ಬೆಲೆಯೂ ಹೆಚ್ಚಾಗುತ್ತಿದ್ದು, ಇಂದೂ ಸಹ ಬೆಳ್ಳಿ ಬೆಲೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೂಡಿಕೆ ಹಾಗೂ ಷೇರುಮಾರುಕಟ್ಟೆ ಸೇರಿದಂತೆ ವಿವಿಧ ವಿಚಾರಗಳ ಮೇಲೆ ಪರಿಣಾಮ ಬೀರುತ್ತಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಜನವರಿ 7ರಂದು 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,948 ರೂಪಾಯಿ ಇದೆ. ಇನ್ನು 10 ಗ್ರಾಂನ ಚಿನ್ನದ ಬೆಲೆಯು 1,39,480 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ ಮೇಲೆ 66 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಮೇಲೆ 660 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,785 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,27,850 ರೂಪಾಯಿ ಆಗಿದೆ. ಒಂದು ಗ್ರಾಂ ಚಿನ್ನದ ಮೇಲೆ 60 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಮೇಲೆ 600 ರೂಪಾಯಿ ಹೆಚ್ಚಳವಾಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. ಒಂದು ಗ್ರಾಂನ 18 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 10,461 ರೂಪಾಯಿ ಆಗಿದೆ. ಇನ್ನು 10 ಗ್ರಾಂನ ಚಿನ್ನದ ಬೆಲೆಯು 1,04,610 ರೂಪಾಯಿ ಆಗಿದೆ. ಜನವರಿ 6ಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು ಒಂದು ಗ್ರಾಂನ ಮೇಲೆ 49 ರೂಪಾಯಿ ಹಾಗೂ 10 ಗ್ರಾಂನ ಮೇಲೆ 490 ರೂಪಾಯಿ ಹೆಚ್ಚಳವಾಗಿದೆ.
ಇಂದಿನ ಬೆಳ್ಳಿ ಬೆಲೆ ಎಷ್ಟಿದೆ ?
ಇನ್ನು ಬೆಳ್ಳಿಯ ಬೆಲೆಯಲ್ಲೂ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 263 ರೂಪಾಯಿ ಆಗಿದೆ. ಇನ್ನು ಒಂದು ಕೆ.ಜಿ ಬೆಳ್ಳಿ ಬೆಲೆಯು 2,63,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 10 ರೂಪಾಯಿ ಹಾಗೂ ಒಂದು ಕೆ.ಜಿಯ ಮೇಲೆ ಬರೋಬ್ಬರಿ 10,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.












Click it and Unblock the Notifications