ಮಾರ್ಚ್ 6; ಹತ್ತು ತಿಂಗಳ ನಂತರ 20% ಇಳಿದ ಚಿನ್ನದ ಬೆಲೆ

ನವದೆಹಲಿ, ಮಾರ್ಚ್ 6: ಹತ್ತು ತಿಂಗಳ ನಂತರ ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡುಬಂದಿದ್ದು, ಕಳೆದ ಆಗಸ್ಟ್‌ಗೆ ಹೋಲಿಸಿದರೆ 20% ಬೆಲೆ ಕಡಿಮೆ ಆಗಿರುವುದಾಗಿ ತಿಳಿದುಬಂದಿದೆ.

2020ರಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಂಡಿತ್ತು. ಕಳೆದ ಆಗಸ್ಟ್‌ನಲ್ಲಿ ಚಿನ್ನ ದಾಖಲೆ ಮಟ್ಟವನ್ನು ತಲುಪಿದ್ದು, 56,200ರೂಪಾಯಿಗೆ ತಲುಪಿತ್ತು. ಇದೀಗ ಕಳೆದ ಆಗಸ್ಟ್‌ಗಿಂತ 11,500ರೂಗಳಷ್ಟು ಬೆಲೆ ಇಳಿಕೆ ಕಂಡಿದೆ ಎನ್ನಲಾಗಿದೆ. ನವದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 41,700 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 65,700 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಕಳೆದ ನಾಲ್ಕು ದಿನಗಳ ಏರಿಳಿತ ಹೇಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಚಿನ್ನದಲ್ಲಿ ಹೂಡಿಕೆ ಮಾಡುವವರಿಗೂ ಉತ್ತಮ ಅವಕಾಶ ಒದಗಿಬಂದಿದೆ. ಯಾವ ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್‌ (ಬೆಲೆ ರೂಗಳಲ್ಲಿ)
ಮಾರ್ಚ್ 6: 41,700 45,490
ಮಾರ್ಚ್ 5: 41, 450 45, 220
ಮಾರ್ಚ್ 4: 41,800 45,600
ಮಾರ್ಚ್ 3: 42,450 46,300

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 6: 43,850 47,840
ಮಾರ್ಚ್ 5: 43,600 47,560
ಮಾರ್ಚ್ 4: 43,950 47,950
ಮಾರ್ಚ್ 3: 44,600 48,650

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 6: 42,160 45,990
ಮಾರ್ಚ್ 5: 41,840 45,630
ಮಾರ್ಚ್ 4: 42,170 46,020 ಮಾರ್ಚ್ 3: 42,640 46,520

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 6: 43,510 44,510
ಮಾರ್ಚ್ 5: 43,430 44,430
ಮಾರ್ಚ್ 4: 43,900 44,900 ಮಾರ್ಚ್ 3: 44,370 45,370

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+