Gold Rate: ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್: ಜೂನ್ 24 ಚಿನ್ನ & ಬೆಳ್ಳಿ ಬೆಲೆ ಭರ್ಜರಿ ಕಡಿಮೆ!
Gold Rate: on June 24 ಚಿನ್ನ ಪ್ರಿಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು. ಚಿನ್ನ ಪ್ರಿಯರಲ್ಲಿ ಸ್ವಲ್ಪ ಸಂತೋಷ ಮೂಡಿಸಿದೆ. ಯಾಕೆಂದರೆ ಮೂರು ದಿನದಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ನಿಜ. ಆದರೆ 10 ಗ್ರಾಂ ಚಿನ್ನದ ಬೆಲೆಯು ಇನ್ನೂ ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲೇ ಇದೆ. ಹೀಗಾಗಿ ಚಿನ್ನದ ಬೆಲೆ ಗ್ರಾಂ ಲೆಕ್ಕದಲ್ಲಿ ಸ್ವಲ್ಪ ಇಳಿಕೆಯಾಗುತ್ತಿದೆಯಾದರೂ ಇನ್ನೊಂದು ವಾರವಾದರೂ ಚಿನ್ನದ ಬೆಲೆ ಇಳಿದರಷ್ಟೇ ಮಧ್ಯಮ ವರ್ಗದವರು ಚಿನ್ನ ಖರೀದಿ ಮಾಡಬಹುದು ಎನ್ನುವಂತಿದೆ. ಜೂನ್ 24ರ ಮಂಗಳವಾರದಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.
ಚಿನ್ನದ ಬೆಲೆಯು ಕಳೆದ ಮೂರು ದಿನಗಳಿಂದಲೂ ಇಳಿಕೆಯ ಹಾದಿಯಲ್ಲಿದೆ. ಇಂದೂ ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ವಿಶ್ವದಾದ್ಯಂತ ಯುದ್ಧ ಭೀತಿಯ ನಡುವೆಯೂ ಚಿನ್ನದ ಬೆಲೆ ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಷೇರುಮಾರುಕಟ್ಟೆ ಸ್ಥಿರವಾಗಿರುವುದು ಅಂತಲೇ ಹೇಳಲಾಗುತ್ತಿದೆ. ಅಲ್ಲದೇ ಈ ತಿಂಗಳು ವಿಶೇಷ ಕಾರ್ಯಕ್ರಮಗಳು ಹೆಚ್ಚಾಗಿ ಇಲ್ಲದೆ ಇರುವುದರಿಂದ ಚಿನ್ನ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿಲ್ಲ. ಹೀಗಾಗಿ ಚಿನ್ನದ ಬೆಲೆ ಕಡಿಮೆ ಆಗುತ್ತಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,491 ರೂಪಾಯಿ ಆಗಿದ್ದು 61 ರೂಪಾಯಿ ಇಳಿಕೆಯಾಗಿದೆ. ಇನ್ನು 10 ಗ್ರಾಂನ ಬೆಲೆಯು 74, 910 ರೂಪಾಯಿ ಆಗಿದೆ. ನೆನ್ನೆಗಿಂತ 610 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು ಮಂಗಳವಾರ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 9,155 ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 75 ರೂಪಾಯಿ ಇಳಿಕೆಯಾಗಿದೆ. ಇನ್ನು 22 ಕ್ಯಾರೆಟ್‌ನ 10 ಚಿನ್ನದ ಬೆಲೆಯು 91,550 ರೂಪಾಯಿ ಆಗಿದೆ. ನೆನ್ನೆಗಿಂತಲು 750 ರೂಪಾಯಿ ಕಡಿಮೆ ಆದಂತೆ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಜೂನ್ 24ರಂದು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,987 ರೂಪಾಯಿ ಆಗಿದೆ. 10 ಗ್ರಾಂಗೆ 99,870 ರೂಪಾಯಿ ಆಗಿದೆ. ನೆನ್ನೆಗಿಂತಲೂ ಬರೋಬ್ಬರಿ 820 ರೂಪಾಯಿ ಕಡಿಮೆ ಆದಂತೆ ಆಗಿದೆ.
ಬೆಳ್ಳಿ ಬೆಲೆ ಹೇಗಿದೆ: ಇಂದು ಬೆಳ್ಳಿ ಬೆಲೆ ಸಹ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 109 ರೂಪಾಯಿ ಆಗಿದೆ. 10 ಗ್ರಾಂಗೆ 1090 ರೂಪಾಯಿ ಹಾಗೂ 100 ಗ್ರಾಂಗೆ 10,900 ರೂಪಾಯಿ ಆಗಿದೆ.












Click it and Unblock the Notifications