Gold Price: ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂ. ಆಗೋದು ಫಿಕ್ಸ್‌ ಕಾರಣವೇನು ?

ಚಿನ್ನದ ಬೆಲೆ ಮುಂದಿನ ವರ್ಷ ಬರೋಬ್ಬರಿ 1 ಲಕ್ಷ ರೂಪಾಯಿಗೆ ತಲುಪುವುದು ಫಿಕ್ಸ್‌ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಡಿಸೆಂಬರ್‌ 20ಕ್ಕೆ 24 ಕ್ಯಾರೆಟ್‌ನ ಬಂಗಾರದ ಬೆಲೆ ಬರೋಬ್ಬರಿ 76,800 ರೂಪಾಯಿ ಆಗಿದೆ. ಕಳೆದ ಒಂದೇ ವರ್ಷದಲ್ಲಿ ಚಿನ್ನ ಬೆಲೆ 60,000 ಸಾವಿರ ರೂಪಾಯಿಯಿಂದ 80,000 ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. 2023ನೇ ಸಾಲಿನ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 60,282 ಇತ್ತು. ಇದೀಗ 2024ನೇ ಸಾಲಿನ ವರ್ಷಾಂತ್ಯಕ್ಕೆ ಬರೋಬ್ಬರಿ 80,000 ಸಾವಿರ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ.

ಚಿನ್ನದ ಬೆಲೆ ಈ ವರ್ಷ ಏರಿಳಿತವಾಗುತ್ತಲ್ಲೇ ಇತ್ತು. ಒಮ್ಮೆ ಏರಿಕೆಯಾದರೆ ಮತ್ತೊಮ್ಮೆ ದಿಢೀರ್‌ ಕುಸಿತವಾಗುತ್ತಿತ್ತು. ಆದರೆ, ಈ ವರ್ಷ ಚಿನ್ನದ ಬೆಲೆ ಇಳಿಕೆಯಾಗಿದ್ದಕ್ಕಿಂತ ಜಾಸ್ತಿ ಆಗಿದ್ದೇ ಹೆಚ್ಚು. ಚಿನ್ನದ ಬೆಲೆಯು 2023ನೇ ಸಾಲಿನಲ್ಲಿ ಮಾತ್ರವೇ (2023ನೇ ಸಾಲಿನ ಅಂತ್ಯದಿಂದ) ಶೇಕಡ 30ರಷ್ಟು ಹೆಚ್ಚಳವಾಗಿದೆ. ಜನ ಚಿನ್ನ ಎಂದರೆ ಅದನ್ನು ಹೂಡಿಕೆಯಂತಲೇ ನೋಡ್ತಾರೆ. ಮದುವೆ ಅಥವಾ ಯಾವುದೇ ಶುಭ ಸಮಾರಂಭದಲ್ಲಾದರೂ ಚಿನ್ನ ಖರೀದಿಯೇ ಮೊದಲ ಸಾಲಿನಲ್ಲಿ ಇರುತ್ತದೆ. ಆದರೆ, ಕಳೆದ ಎರಡು ಮೂರು ವರ್ಷದಿಂದ ಚಿನ್ನದ ಬೆಲೆಯಲ್ಲಿ ಆಗುತ್ತಿರುವ ಬೆಲೆ ಏರಿಕೆಯನ್ನು ನೋಡಿ ಜನ ಶಾಕ್‌ಗೆ ಒಳಗಾಗಿದ್ದಾರೆ. ಈ ರೀತಿ ಇರುವಾಗಲೇ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1 ಲಕ್ಷ ರೂಪಾಯಿ ಆಗುವುದು ಫಿಕ್ಸ್‌ ಎನ್ನುತ್ತಿದ್ದಾರೆ ತಜ್ಞರು.

Photo credit This is an AI generated aticle image through WISE

ಡಾಲರ್‌ನ ಮುಂದೆ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿಯುತ್ತಿರುವುದರಿಂದಲೂ ಚಿನ್ನದ ಬೆಲೆ ಹೆಚ್ಚಾಗುತ್ತಲ್ಲೇ ಇದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಅನಿಶ್ಚಿತತೆ ಹಾಗೂ ಷೇರು ಮಾರುಕಟ್ಟೆ ಕುಸಿತ ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಇದೆ. ಮುಂದಿನ ದೀಪವಾಳಿಯ ಒಳಗಾಗಿ ಚಿನ್ನದ ಬೆಲೆಯು 80,000 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ಮುಟ್ಟುವುದು ಫಿಕ್ಸ್‌ ಅಂತಲೇ ಹೇಳಲಾಗ್ತಿದೆ. ಹಣದುಬ್ಬರ ಹೆಚ್ಚಳವಾಗುತ್ತಿರುವುದು ಹಾಗೂ ಡಾಲರ್‌ನ ಮುಂದೆ ರೂಪಾಯಿ ಮೌಲ್ಯವು ಚೇತರಿಕೆ ಆಗದಷ್ಟು ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಚಿನ್ನದ ಮೇಲೆ ಜನ ಜಾಸ್ತಿ ಹೂಡಿಕೆ ಮಾಡುತ್ತಿದ್ದಾರೆ.

ಇನ್ನು ಷೇರುಮಾರುಕಟ್ಟೆಯಲ್ಲಿ ಅನಿಶ್ಚಿತತೆ ಬಂದಾಗೆಲ್ಲ ಹೂಡಿಕೆದಾರರಿಗೆ ಬೆಸ್ಟ್‌ ಅಂತ ಕಾಣಿಸುವುದು ಗೋಲ್ಡ್‌. ಇನ್ನು ಇದೇ ಕಾರಣಕ್ಕೆ ಗೋಲ್ಡ್‌ ಪ್ರೈಸ್‌ನ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಿ ನಷ್ಟದಿಂದ ತಪ್ಪಿಸಿಕೊಳ್ಳುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಯಾವೊತ್ತು ನಷ್ಟ ಆಗಲ್ಲ ಎನ್ನುವುದಕ್ಕೆ ಕಳೆದ ಚಿನ್ನ ಬೆಲೆಯಲ್ಲಿ ಆಗಿರುವ ಬದಲಾವಣೆಗಳೇ ಕಾರಣ. ಎರಡು ಮೂರು ವರ್ಷದಲ್ಲೇ ಚಿನ್ನದ ಬೆಲೆ 50,000 ಸಾವಿರ ರೂಪಾಯಿಯಿಂದ 80,000 ಸಾವಿರ ರೂಪಾಯಿ ವರೆಗೆ ಆಗಿದೆ.

ವಿಶ್ವದ ವಿವಿಧ ದೇಶಗಳ ನಡುವೆ ಇನ್ನೂ ಯುದ್ಧ ಮುಂದುವರಿಯುತ್ತಿದೆ. ಭಾರತದೊಂದಿಗೆ ಹಲವು ದೇಶಗಳು ಮುನಿಸಿಕೊಂಡಿವೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತದ ಪರವಾಗಿ ಇದ್ದೇನೆ ಎಂದು ಹೇಳಿಕೊಂಡಿದ್ದರೂ, ತೆರಿಗೆ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೆ ಇಲ್ಲ ಎಂದಿದ್ದಾರೆ. ಈ ಎಲ್ಲಾ ವಿಷಯಗಳು ಹಣದುಬ್ಬರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುತೂಹಲವೂ ಇದೆ. ಆದರೆ, ಚಿನ್ನದ ಬೆಲೆ ಹೆಚ್ಚಳವಾಗುವುದಂತೂ ಫಿಕ್ಸ್‌ ಎನ್ನುತ್ತಿದ್ದಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+