Gold Price on July 28: ಈ ಹಬ್ಬಗಳ ಹೊತ್ತಿಗೆ ಚಿನ್ನದ ದರ ಭಾರೀ ಹೆಚ್ಚಳ?: ಇಂದಿನ ಚಿನ್ನ-ಬೆಳ್ಳಿ ದರವೆಷ್ಟು?

ಬೆಂಗಳೂರು, ಜುಲೈ 28: ಚಿನ್ನಕ್ಕೆ ಬೇಡಿಕೆ ಯಥಸ್ಥಿತಿಯಲ್ಲಿದ್ದು, ಚಿನ್ನ-ಬೆಳ್ಳಿ ದರ ಏರಿಳಿತ ಮುಂದುವರಿದಿದೆ. ವಿದೇಶಗಳಲ್ಲಿ ಇಂದು ಸೋಮವಾರ (ಜುಲೈ 28) ಬಂಗಾರದ ದರ ಕೊಂಚ ಏರಿಕೆ ಆಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿವೆ. ವರಮಹಾಲಕ್ಷ್ಮೀ ಹಬ್ಬ ಸಮೀಪಿಸುತ್ತಿದ್ದು, ಅಂದು ಚಿನ್ನದ ದರ ಹೆಚ್ಚಾಗುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಇಂದಿನ ದರ ಎಷ್ಟಿದೆ. ಹೆಚ್ಚಾಗಿದೆಯಾ? ಕಡಿಮೆ ಆಯ್ತಾ? ಎಂಬ ಮಾಹಿತಿ ಇಲ್ಲಿದೆ.

ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 91,600 ರೂಪಾಯಿ ಇದ್ದರೆ, 24 ಕ್ಯಾರಟ್​ನ ಅಪರಂಜಿ ಬಂಗಾರದ ದರ 9,993 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ದರ ಬರೋಬ್ಬರಿ 11,600 ರೂಪಾಯಿಯಷ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 91,600 ರೂಪಾಯಿ, 24 ಕ್ಯಾರಟ್ 10 ಗ್ರಾಂ ಚಿನ್ನದ ದರ 99,930 ರೂಪಾಯಿಗೆ ಏರಿಕೆ ಆಗಿದೆ. ಬೆಳ್ಳಿ ದರ ನಗರದಲ್ಲಿ 100 ಗ್ರಾಂ​ಗೆ 11,600 ರೂಪಾಯಿ ಇದೆ ಎಂದು ಇಂದಿನ ಚಿನ್ನದ ಮಾರುಕಟ್ಟೆ ದರಗಳು ಮಾಹಿತಿ ನೀಡಿವೆ.

Gold Price Today Gold and Silver Rate Stable on July 28th Increased Other Country

ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಹಾವು ಏಣಿ ಆಟದಂತಿದ್ದ ಚಿನ್ನ-ಬೆಳ್ಳಿ ದರ ಇಂದು ಸೋಮವಾರಕ್ಕೆ ಯಥಾಸ್ಥಿತಿಯಲ್ಲಿದೆ. ನೆನ್ನೆ ಬೆಲೆಯಗಳೇ ಮುಂದುವರಿದಿವೆ. ಬೆಳ್ಳಿ ಬೆಲೆಯಲ್ಲೂ ಬದಲಾವಣೆ ಆಗಿಲ್ಲ. ವಿದೇಶಗಳಲ್ಲಿ ಮಾತ್ರ ಕೊಂಚ ದರ ಹೆಚ್ಚಾಗಿದೆ. ಸದ್ಯ ನಾಗರಪಂಚಮಿ ಹಬ್ಬ, ಸರಿಯಾಗಿ ಒಂದು ತಿಂಗಳಿನ ಅಂತರದಲ್ಲಿ ಗಣೇಶ್ ಚತುರ್ಥಿ, ದಸರಾ ಹಬ್ಬ, ದೀಪಾವಳಿ ಹಬ್ಬಗಳು ಎದುರಾಗಲಿದ್ದು, ಚಿನ್ನ ಖರೀದಿಸಲು ಕೆಲವು ಗ್ರಾಹಕರ ಸಜ್ಜಾಗಿದ್ದಾರೆ. ಈ ವೇಳೆ ಮತ್ತೆ ಚಿನ್ನದ ದರ ಹೆಚ್ಚಾದರೂ ಆಗಬಹುದೆಂದು ಅಂದಾಜಿಸಲಾಗಿದೆ.

ಚಿನ್ನದ 1 ಗ್ರಾಂ ಬೆಲೆಯಲ್ಲಿ (24k & 22k) ವ್ಯತ್ಯಾಸ, ವಾರದ ದರ ಪಟ್ಟಿ

* ಜುಲೈ 28 - 9,993 (0) ರೂಪಾಯಿ & 9,160 (0) ರೂಪಾಯಿ

* ಜುಲೈ 27 - 9,993 (0)ರೂಪಾಯಿ & 9,160 (0) ರೂಪಾಯಿ

* ಜುಲೈ 26 - 9,993 (-55) ರೂಪಾಯಿ & 9,160 (-50 ಇಳಿಕೆ) ರೂಪಾಯಿ

* ಜುಲೈ 25 - 10,048 (-49) ರೂಪಾಯಿ & 9,210 (-45 ಇಳಿಕೆ) ರೂಪಾಯಿ

* ಜುಲೈ 24 - 10,097 (-136) ರೂಪಾಯಿ & 9,255 (-125 ಇಳಿಕೆ) ರೂಪಾಯಿ

* ಜುಲೈ 23 - 10,233 (+104) ರೂಪಾಯಿ & 9,380 (+95 ಏರಿಕೆ) ರೂಪಾಯಿ

* ಜುಲೈ 22 - 10,129 (+114) ರೂಪಾಯಿ & 9,285 (+105 ಏರಿಕೆ) ರೂಪಾಯಿ

* ಜುಲೈ 21 - 10,015 (+11) ರೂಪಾಯಿ & 9,180 (+10 ಏರಿಕೆ) ರೂಪಾಯಿ

ಇಂದಿನ ಚಿನ್ನದ (22k) ಬೆಲೆ: ನಗರವಾರು ದರಪಟ್ಟಿ

* ಬೆಂಗಳೂರು: ₹91,600
* ದೆಹಲಿ: ₹91,750
* ಕೋಲ್ಕತಾ: ₹91,600
* ಚೆನ್ನೈ: ₹91,600
* ಮುಂಬೈ: ₹91,600
* ಲಕ್ನೋ: ₹91,750
* ಭುವನೇಶ್ವರ್: ₹91,600
* ಕೇರಳ: ₹91,600
* ಅಹ್ಮದಾಬಾದ್: ₹91,650
* ಜೈಪುರ್: ₹91,750

ಗಮನಿಸಬೇಕಾದ ವಿಷಯವೆಂದರೆ ಒಂದು ನಗರ, ರಾಜ್ಯದಿಂದ ರಾಜ್ಯಕ್ಕೆ ಮಳಿಗೆಗಳಲ್ಲಿ ಹಾಕುವ ವೇಸ್ಟೇಜ್ ಶುಲ್ಕ, ಇತರ ಹಾಗೂ ಜಿಎಸ್ ಶುಲ್ಕ ಆಧಾರದಲ್ಲಿ ದರದಲ್ಲಿ ಕೊಂಚ ಹೆಚ್ಚು ಕಡಿಮೆ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+