Gold Price On April 8: ಬಂಗಾರದ ಬೆಲೆ ಭರ್ಜರಿ ಇಳಿಕೆ: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?

Gold Price On April 8: ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಡಳಿತ ನೀತಿಗಳು ವಿಶ್ವವನ್ನೇ ನಡುಗಿಸಿದ್ದು, ಚಿನ್ನದ ಬೆಲೆಯಲ್ಲಿ ಹೊಚ್ಚ ಹೊಸ ದಾಖಲೆ ಪ್ರತಿ ದಿನವೂ ಸೃಷ್ಟಿಯಾಗುತ್ತಿದೆ. ಇನ್ನು ಟ್ಯಾಕ್ಸ್‌ ವಾರ್ ಹಾಗೂ ರಿಟರ್ನ್‌ ಟ್ಯಾಕ್ಸ್‌ ವಾರ್‌ಗಳ ನಡುವೆ ಚಿನ್ನದ ಬೆಲೆ ಏರಿಕೆ ಆಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಏಪ್ರಿಲ್‌ 8ರ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

ಚಿನ್ನವನ್ನು ಇತ್ತೀಚಿನ ದಿನಗಳಲ್ಲಿ ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಷೇರು ಮಾರುಕಟ್ಟೆ ಹಾಗೂ ವಿವಿಧ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿರುವುದು. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪೈಪೋಟಿಯ ಮೇಲೆ ಬೆಲೆ ಏರಿಕೆ ಮಾಡುತ್ತಿವೆ. ಇದರಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿಶ್ವದಾದ್ಯಂತ ಟ್ಯಾಕ್ಸ್‌ ಸಮರ ಸಾರಿದ್ದಾರೆ. ಇದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಏಪ್ರಿಲ್‌ 8ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ.

Gold Price Today Gold and Silver Price on April 8 Gold Price Drops Sharply

ಇದರಿಂದ ಚಿನ್ನ ಮತ್ತು ಬೆಳ್ಳಿ ಪ್ರಿಯರು ಸಂತೋಷ ಪಡುವಂತೆ ಆಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ವಿಪರೀತವಾಗಿ ಏರಿಕೆ ಕಂಡಿತ್ತು. ಇದೀಗ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಭರ್ಜರಿ ಇಳಿಕೆಯಾಗಿದ್ದು. ಚಿನ್ನ ಪ್ರಿಯರಿಗೆ ಖುಷಿ ಮೂಡಿಸಿದೆ. 24 ಕ್ಯಾರೆಟ್‌ನ ಚಿನ್ನದ ಬೆಲೆಯು ಬರೋಬ್ಬರಿ 6,500 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್‌ ಚಿನ್ನದ ಬೆಲೆಯು 6,000 ಸಾವಿರ ರೂಪಾಯಿ ಕಡಿಮೆಯಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

Take a Poll

ಏಪ್ರಿಲ್‌ 8ರ ಚಿನ್ನ ಮತ್ತು ಬೆಳ್ಳಿ ಬೆಲೆ: ಏಪ್ರಿಲ್‌ 8ರ ಮಂಗಳವಾರ 22 ಕ್ಯಾರೆಟ್‌ ಚಿನ್ನದ ಬೆಲೆಯು 1 ಗ್ರಾಂ 8,225 ರೂಪಾಯಿ ಆಗಿದೆ. ನೆನ್ನೆ 8,285 ರೂಪಾಯಿ ಇತ್ತು. ನೆನ್ನೆಗಿಂತ 60 ರೂಪಾಯಿ ಕಡಿಮೆಯಾಗಿದೆ. ಇನ್ನು 10 ಚಿನ್ನದ ಬೆಲೆಯು 82,250 ರೂಪಾಯಿ ಆಗಿದೆ. ನೆನ್ನೆಗಿಂತ ಬರೋಬ್ಬರಿ 600 ರೂಪಾಯಿ ಕಡಿಮೆಯಾಗಿದೆ.

Gold Price Today Gold and Silver Price on April 8 Gold Price Drops Sharply

24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 1 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆಯು 8,973 ರೂಪಾಯಿ ಆಗಿದೆ. 10 ಗ್ರಾಂಗೆ 89,730 ರೂಪಾಯಿ ಆಗಿದೆ. ಇನ್ನು 100 ಗ್ರಾಂಗೆ 6,500 ರೂಪಾಯಿ ಇಳಿಕೆ ಆಗಿದೆ.

ಬೆಳ್ಳಿ ಬೆಲೆ ಹೇಗಿದೆ ?

ಚಿನ್ನದ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆಯು 94 ರೂಪಾಯಿ ಹಾಗೂ ಪ್ರತಿ ಕೆ.ಜೆ ಬೆಳ್ಳಿ ಬೆಲೆಯು 94,000 ಸಾವಿರ ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+