Gold Price Today: ಆಭರಣ ಕೊಳ್ಳುವ ಮುನ್ನ ಇಂದಿನ ಚಿನ್ನದ ರೇಟ್ ನೋಡಿ: ಸತತ ಇಳಿಕೆಯ ಹಾದಿಯಲ್ಲಿ ಚಿನ್ನ, ಬೆಳ್ಳಿ ದರ
ಕಳೆದ ಕೆಲವು ದಿನಗಳಿಂದ ಸಾರ್ವಕಾಲಿಕ ದಾಖಲೆ ಬರೆಯುತ್ತಾ ಗ್ರಾಹಕರಿಗೆ ಶಾಕ್ ನೀಡಿದ್ದ ಚಿನ್ನದ ದರದಲ್ಲಿ ಈಗ ಸಣ್ಣದೊಂದು ಬ್ರೇಕ್ ಬಿದ್ದಿದೆ. ಶನಿವಾರ ಕುಸಿದಿದ್ದ ಚಿನ್ನದ ಬೆಲೆ, ಇಂದು ಕೂಡ ಯಾವುದೇ ಏರಿಕೆ ಕಾಣದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಸತತ ಎರಡು ದಿನಗಳಿಂದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದು ಆಭರಣ ಖರೀದಿದಾರರಿಗೆ ತುಸು ನಿರಾಳತೆ ತಂದಿದೆ. ನಿನ್ನೆ ಪ್ರತಿ 10 ಗ್ರಾಂ ಚಿನ್ನದ ಮೇಲೆ ಸುಮಾರು ₹400ರಿಂದ ₹430ರವರೆಗೆ ದರ ಇಳಿಕೆಯಾಗಿತ್ತು. ಇಂದು ಸಹ ಮಾರುಕಟ್ಟೆ ಅದೇ ಇಳಿಕೆಯ ದರವನ್ನು ಕಾಯ್ದುಕೊಂಡಿದೆ. ಇಂದಿನ ದರ ವಿವರ ಇಲ್ಲಿ ತಿಳಿಯಿರಿ.
24 ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂಗೆ ₹15,906ರಷ್ಟಿದೆ. (10 ಗ್ರಾಂಗೆ ₹1,59,060). 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹14,580ಕ್ಕೆ ಬಂದು ತಲುಪಿದೆ. ಇದರನ್ವಯ 10 ಗ್ರಾಂ ಚಿನ್ನದ ಬೆಲೆ ₹1,45,800 ಆಗುತ್ತದೆ. 18 ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂಗೆ ₹11,929ರಂತೆ ಮಾರಾಟವಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ ಇಳಿಕೆಯಾಗಿ ಯಥಾಸ್ಥಿತಿ ಮುಂದುವರಿದಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಇಂದಿನ ದರ ವಿವರ
24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,906 ರಷ್ಟಿದೆ. ಇದರನ್ವಯ 8 ಗ್ರಾಂ ಚಿನ್ನದ ಬೆಲೆ ₹1,27,248 ಹಾಗೂ 10 ಗ್ರಾಂ ಚಿನ್ನದ ಬೆಲೆ ₹1,59,060 ಆಗಿದ್ದು, ಇನ್ನು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವವರಿಗೆ 100 ಗ್ರಾಂ ಚಿನ್ನದ ದರ ₹15,90,600ರಷ್ಟಿದೆ. 22 ಕ್ಯಾರೆಟ್ ಆಭರಣ ಚಿನ್ನದ ದರದಲ್ಲೂ ಇಂದು ಯಾವುದೇ ಬದಲಾವಣೆ ಆಗಿಲ್ಲ. ಇಂದು ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,580 ಆಸುಪಾಸಿನಲ್ಲೇ ಸ್ಥಿರವಾಗಿದೆ.
ಇದರ ಆಧಾರದ ಮೇಲೆ ಗ್ರಾಹಕರು 8 ಗ್ರಾಂ ಆಭರಣ ಚಿನ್ನ ಖರೀದಿಸಲು ₹1,16,640 ಮತ್ತು 10ಗ್ರಾಂ ಆಭರಣ ಚಿನ್ನ ಖರೀದಿಸಲು ₹1,45,800 ಪಾವತಿಸಬೇಕಾಗುತ್ತದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ದರ ನಿನ್ನೆಯಂತೆಯೇ ಇಂದು ಕೂಡ ₹14,58,000 ರಲ್ಲೇ ಮುಂದುವರಿದಿದೆ. 18 ಕ್ಯಾರೆಟ್ ಚಿನ್ನದ ದರವು ಸಹ ಇಂದು ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಇಂದು 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,929ರಷ್ಟಿದ್ದು, 8 ಗ್ರಾಂಗೆ ₹95,432 ಹಾಗೂ 10 ಗ್ರಾಂಗೆ ₹1,19,290 ದರ ನಿಗದಿಯಾಗಿದೆ.
ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದ ಮೋದಿ ಮಾತಿಗೆ ಬೆಲೆಕೊಟ್ಟ ಭಾರತೀಯರು; ಚಿನ್ನದ ಅಂಗಡಿಗಳು ಖಾಲಿ
ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಪ್ರತಿ 1 ಗ್ರಾಂ ಬೆಳ್ಳಿಯ ಬೆಲೆ ₹285ರಷ್ಟಿದೆ. ಇದರನ್ವಯ ಸಾರ್ವಜನಿಕರು ಹೆಚ್ಚಾಗಿ ಖರೀದಿಸುವ 10 ಗ್ರಾಂ ಬೆಳ್ಳಿಯ ದರ ಇಂದು ₹2,850 ಆಗಿದೆ ಹಾಗೂ 100 ಗ್ರಾಂ ಬೆಳ್ಳಿಗೆ ₹28,500 ದರ ನಿಗದಿಯಾಗಿದೆ. ಇನ್ನು ಹೂಡಿಕೆದಾರರು ಮತ್ತು ಒಡವೆ ವ್ಯಾಪಾರಿಗಳು ಹೆಚ್ಚಾಗಿ ಖರೀದಿಸುವ 1 ಕಿಲೋಗ್ರಾಂ (ಕೆಜಿ) ಬೆಳ್ಳಿಯ ಬೆಲೆ ಇಂದು ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬರೋಬ್ಬರಿ ₹2,85,000ರಲ್ಲೇ ಮುಂದುವರಿದಿದೆ.
ಇಂದು ಪ್ರತಿ 1 ಗ್ರಾಂ ಪ್ಲಾಟಿನಂ ಬೆಲೆ ₹6,058ರಷ್ಟಿದೆ. ಇದರ ಆಧಾರದ ಮೇಲೆ ಗ್ರಾಹಕರು ಮತ್ತು ಆಭರಣ ಪ್ರಿಯರು ಹೆಚ್ಚಾಗಿ ಖರೀದಿಸುವ 10 ಗ್ರಾಂ ಪ್ಲಾಟಿನಂ ದರ ಇಂದು ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬರೋಬ್ಬರಿ ₹60,580ರಲ್ಲೇ ಮುಂದುವರಿದಿದೆ. ಚಿನ್ನಕ್ಕೆ ಹೋಲಿಸಿದರೆ ಪ್ಲಾಟಿನಂ ಬೆಲೆ ಅರ್ಧಕ್ಕಿಂತಲೂ ಕಡಿಮೆ ಇರುವುದರಿಂದ, ಪ್ರಸ್ತುತ ಮಾರುಕಟ್ಟೆಯಲ್ಲಿ ಆಧುನಿಕ ವಿನ್ಯಾಸದ ಶ್ವೇತ ಆಭರಣಗಳನ್ನು ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.












Click it and Unblock the Notifications