Gold Price on May 24: ಚಿನ್ನದ ಬೆಲೆ 5000 ರೂಪಾಯಿ ಏರಿಕೆ, ಆಭರಣ ಪ್ರಿಯರಿಗೆ ಶಾಕ್, ಇಂದು ಎಷ್ಟಿದೆ?

ಬೆಂಗಳೂರು, ಮೇ 24: ಚಿನ್ನಪ್ರಿಯರಿಗೆ ಶುಕ್ರವಾರ ಸಿಹಿ ಸುದ್ದಿ ಸಿಕ್ಕಿತ್ತು. ಕಳೆದೊಂದು ವಾರದಿಂದ ಏರಿಕೆ ಆಗಿದ್ದ ಚಿನ್ನ ಇಳಿಕೆ ಆಗಿತ್ತು. ಇಂದು ಶನಿವಾರ (ಮೇ 24) ಬಂಗಾರದ ಬೆಲೆ ಭರ್ಜರಿ ಏರಿಕೆ ಆಗಿದೆ. ಇತ್ತ ಬೆಳ್ಳಿ ಬೆಲೆ ಇಳಿಕೆ ಆಗಿದೆ. ಕಳೆದ ಹಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಆಗಾಗ ಕೊಂಚ ಇಳಿಕೆ ಆಗುವ ಬಂಗಾರವು ತನ್ನ ಬೇಡಿಕೆ ಕಡಿಮೆ ಮಾಡಿಕೊಂಡಿಲ್ಲ. ಸದ್ಯ ಮದುವೆ ಸೀಸನ್ ಆಗಿದ್ದರಿಂದ ಚಿನ್ನ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಆಗುತ್ತಿದೆ.

ಒಂದು ಲಕ್ಷ ರೂಪಾಯಿ ಏರಿಕೆ ಕಂಡ ಬಳಿಕ ಕೊಂಚ ಇಳಿಕೆ ಆಯಿತೇ ವಿನಃ ಮೊದಲಿನಂತೆ ಕೈಗೆಟುಕುವ ಬೆಲೆಗೆ ಬಂಗಾರ ಸಿಗುತ್ತಿಲ್ಲ ಎಂದು ಮಧ್ಯಮ ವರ್ಗದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಚಿನ್ನ ಮತ್ತೆ ತನ್ನ ದರ ಹೆಚ್ಚಿಸಿಕೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 5000 ರೂಪಾಯಿ ಹೆಚ್ಚಾಗಿದೆ. 24 ಕ್ಯಾರಟ್ ಬಂಗಾರದ ದರ 5400 ರೂಪಾಯಿ ಏರಿಕೆ ಕಂಡಿದೆ ಎಂದು ವರದಿ ಆಗಿದೆ.

Gold Price on May 24th in Karnataka Shocking news For Gold Lovers

ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ, ₹24 ಕ್ಯಾರಟ್ ಬಂಗಾರ 10 ಗ್ರಾಂ ನೆನ್ನೆ 97,530 ರೂಪಾಯಿ ಇದ್ದದ್ದು ಇಂದು 98,080 ರೂಪಾಯಿಗೆ ಹೆಚ್ಚಾಗಿದೆ. ಒಟ್ಟು ₹550 ರೂ. ಏರಿದೆ. ಇದೇ 100 ಗ್ರಾಂ ಚಿನ್ನಕ್ಕೆ 5500 ಏರಿಕೆ ಆಗಿದೆ. ಇದು ಮೃದು ಚಿನ್ನವಾಗಿದ್ದರಿಂದ ಇದನ್ನು ಆಭರಣ ತಯಾರಿಕೆಗೆ ಬಳಸುವುದು ತೀರಾ ಕಡಿಮೆ.

ಇನ್ನೂ 22 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ ನೆನ್ನೆ 89,400 ರೂಪಾಯಿ ಇದ್ದದ್ದು, ಇಂದು ₹89,900 ರೂ.ಗೆ ಹೆಚ್ಚಳಗೊಂಡಿದೆ. ಈ ಮೂಲಕ ಬೆಲೆಯಲ್ಲಿ 500 ರೂಪಾಯಿ ಏರಿಕೆ ಆಗಿದೆ. ಇದೇ ಚಿನ್ನ 100 ಗ್ರಾಂಗೆ 5000 ರೂಪಾಯಿ ಹೆಚ್ಚಳವಾಗಿದೆ. ಆಭರಣಪ್ರಿಯರು ಹೆಚ್ಚಾಗಿ ಇದೇ ಚಿನ್ನ ಖರೀದಿಸುತ್ತಾರೆ. ದರ ಎಷ್ಟೇ ಹೆಚ್ಚಾದರೂ ಸಹಿತ ಬೇಡಿಕೆ ಮಾತ್ರ ತಗ್ಗುತ್ತಿಲ್ಲ ಎಂಬುದು ವಿಶೇಷ ಸಂಗತಿ.

18 ಕ್ಯಾರಟ್ ಚಿನ್ನದ ದರ 10 ಗ್ರಾಂ ನೆನ್ನೆ ಶುಕ್ರವಾರ 73,150 ರೂಪಾಯಿ ಇತ್ತು ಇಂದು ಆ ಬೆಲೆ 73,560ಕ್ಕೆ ಏರಿಕೆ ಆಗಿದೆ. ಈ ಮೂಲಕ ಒಟ್ಟು 410 ರೂಪಾಯಿ ಹೆಚ್ಚಾಗಿದೆ. ಇದೇ ಬಂಗಾರದ 100 ಗ್ರಾಂಗೆ 4100 ರೂಪಾಯಿ ಹೆಚ್ಚಾಗಿದೆ. ಇನ್ನೂ ಬೆಲೆ ದರದಲ್ಲಿ ಕೊಂಚ ಇಳಿಕೆ ಆಗಿದೆ.

ಕರ್ನಾಟಕ ಸೇರಿದಂತೆ ಭಾರತದಲ್ಲಿ ಬೆಳ್ಳೆ ಬೆಲೆಯಲ್ಲಿ ಇಂದು 10 ಗ್ರಾಂ ಬೆಳ್ಳಿಗೆ ಒಂದು ರೂಪಾಯಿ ಇಳಿಕೆ ಆಗಿದೆ. 100 ಗ್ರಾಂ ಗೆ 10ರೂಪಾಯಿ ಹಾಗೂ 1000 ಗ್ರಾಂ ಬೆಳ್ಳಿಗೆ 100 ರೂಪಾಯಿ ಇಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ ಬಹುತೇಕವಾಗಿ ಸ್ಥಿರವಾಗಿರುವ ಸಾಧ್ಯತೆ ಹೆಚ್ಚಿದೆ. ಆದರೆ ಚಿನ್ನದ ಬೆಲೆ ನಿರಂತರವಾಗಿ ಏರಿಳಿತದಿಂದ ಕೂಡಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+