Gold Price on May 1: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಚಿನ್ನದ ಬೆಲೆ ಭರ್ಜರಿ ಇಳಿಕೆ!

Gold Price on May 1: ಅಕ್ಷಯ ತೃತೀಯ ಮುಗಿಯುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಹೌದು ಮೇ 1ರ ಬೆಲೆ ಏರಿಕೆಯ ನಡುವೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಂತೆ ಆಗಿದೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕಳೆದ ಒಂದು ವಾರದಿಂದಲೂ ಭಾರೀ ಏರಿಕೆ ಹಾಗೂ ಇಳಿಕೆ ಕಂಡಿತ್ತು. ಇದೀಗ ಮೇ 1ರಂದೇ ಚಿನ್ನದ ಬೆಲೆ ಇಳಿಕೆಯಾಗಿದ್ದು. ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಂತಾಗಿದೆ. ಮೇ 1ರ ಚಿನ್ನ ಮತ್ತು ಬೆಳ್ಳಿ ಬೆಲೆಯ ವಿವರ ಇಲ್ಲಿದೆ.

ಯುದ್ಧ ಭೀತಿ ಹಾಗೂ ಷೇರು ಮಾರುಕಟ್ಟೆ ಏರಿಳಿತ ಸೇರಿದಂತೆ ವಿವಿಧ ಕಾರಣಗಳಿಗೆ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಚಿನ್ನದ ಬೆಲೆಯು ಸದಾ ಅಚ್ಚರಿಯನ್ನುಂಟು ಮಾಡುವಂತೆ ಈ ಬಾರಿಯೂ ಇಳಿಕೆ ಆಗಿದೆ. ಏಕಾಏಕಿ ಚಿನ್ನದ ಬೆಲೆ ಕುಸಿತ ಕಂಡಿದೆ. ಅಕ್ಷಯ ತೃತೀಯ ದಿನದಂದೂ ಸಹ ಚಿನ್ನದ ಬೆಲೆ ತುಸು ಇಳಿಕೆ ಇತ್ತು. ಇನ್ನು ಇದೇ ತಿಂಗಳು ಹಲವು ಶುಭ ಸಮಾರಂಭಗಳು ಹಾಗೂ ಮದುವೆಗಳು ಸಹ ನಡೆಯಲಿವೆ. ಈ ತಿಂಗಳಿನಲ್ಲಿ ಶುಭ ಕಾರ್ಯಕ್ರಮಗಳಿಗೆ ಒಳ್ಳೆಯ ದಿನ ಹಾಗೂ ಮುಹೂರ್ತ ಚೆನ್ನಾಗಿವೆ. ಹೀಗಾಗಿ, ಈ ತಿಂಗಳು ಚಿನ್ನ ಖರೀದಿ ಪ್ರಕ್ರಿಯೆಗಳು ಜೋರಾಗಿರಲಿವೆ ಎನ್ನುವ ಲೆಕ್ಕಾಚಾರವಿದೆ. ಈ ರೀತಿ ಇರುವಾಗಲೇ ಚಿನ್ನದ ಬೆಲೆಯಲ್ಲಿ ಬಂಪರ್ ಕುಸಿತ ಕಂಡಿದ್ದು. ಬಂಗಾರ ಪ್ರಿಯರಿಗೆ ಸಿಹಿ ಸಿಕ್ಕಂತಾಗಿದೆ.

Gold Price on May 1 Great Good News for Gold lovers Gold Price Drops Sharply

ಒಟ್ಟಾರೆ 5,000 ಸಾವಿರ ಇಳಿಕೆ: ಇನ್ನು ಚಿನ್ನದ ಬೆಲೆಯು ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 5,000 ಸಾವಿರ ರೂಪಾಯಿ ಇಳಿಕೆ ಆದಂತೆ ಆಗಿದೆ. ಕಳೆದ 2 ವಾರಗಳ ಮುಂಚೆ ಚಿನ್ನದ ಬೆಲೆಯು 1,00,000 ಲಕ್ಷ ರೂಪಾಯಿ ಗಡಿಯಲ್ಲಿತ್ತು. 1 ಲಕ್ಷ ರೂಪಾಯಿಗಿಂತ ಹೆಚ್ಚಳವಾಗಿದ್ದೂ ಇದೆ. ಆದರೆ ಮೇ 1ರ ಗುರುವಾರ ಚಿನ್ನದ ಬೆಲೆಯು 95,000 ಸಾವಿರ ಗಡಿ ತಲುಪಿದೆ.

ಮೇ 1 ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡಿದೆ. ಇಂದಿನ 18 ಕ್ಯಾರೆಟ್‌, 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಅಂತ ನೋಡೋಣ.

18 ಕ್ಯಾರೆಟ್‌ ಚಿನ್ನದ ಬೆಲೆ: ಮೇ 1ರಂದು 18 ಕ್ಯಾರೆಟ್‌ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,180 ರೂಪಾಯಿ ಆಗಿದೆ. 10 ಗ್ರಾಂಗೆ 71,800 ರೂಪಾಯಿ ಆಗಿದೆ. ನೆನ್ನೆಗಿಂತ 1,640 ರೂಪಾಯಿ ಇಳಿಕೆಯಾದಂತೆ ಆಗಿದೆ.

Gold Price on May 1 Great Good News for Gold lovers Gold Price Drops Sharply

22 ಕ್ಯಾರೆಟ್‌ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. 22 ಕ್ಯಾರೆಟ್‌ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 8,775 ರೂಪಾಯಿ ಆಗಿದೆ. 10 ಗ್ರಾಂಗೆ 87,750 ರೂಪಾಯಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ: 24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,573 ರೂಪಾಯಿ ಆಗಿದೆ. 10 ಗ್ರಾಂಗೆ 95,730 ರೂಪಾಯಿ ಆಗಿದೆ. ನೆನ್ನೆಗಿಂತ 10 ಗ್ರಾಂ ಬೆಲೆಯು ಬರೋಬ್ಬರಿ 2,180 ರೂಪಾಯಿ ಇಳಿಕೆ ಆಗಿದೆ.

ಮೇ 1ರ ಬೆಳ್ಳಿ ಬೆಲೆ ಎಷ್ಟಿದೆ ?

ಇನ್ನು ಮೇ 1ರಂದು ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 98 ರೂಪಾಯಿ ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆಯು 98,000 ಸಾವಿರ ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+