Gold Price Today: ಕ್ರಿಸ್ಮಸ್ ದಿನವು ಹೆಚ್ಚಾಯ್ತು ಚಿನ್ನ-ಬೆಳ್ಳಿ ರೇಟ್, ಬೆಂಗಳೂರಲ್ಲಿ ದರ ಎಷ್ಟಿದೆ?
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಗುರುವಾರ ಕ್ರಿಸ್ಮಸ್ ದಿನ (ಡಿಸೆಂಬರ್ 25) ಮತ್ತೆ ಹೆಚ್ಚಾಗಿದೆ. ದರ ಎಷ್ಟೇ ಹೆಚ್ಚಾದರೂ ಬೇಡಿಕೆ ಮಾತ್ರ ಕುಸಿಯುತ್ತಿಲ್ಲ. ಭಾರತದಂತಹ ದೇಶಗಳಲ್ಲಿ ಆಭರಣ ಖರೀದಿಗೆ ಬೇಡಿಕೆ ಇದ್ದು, ವಿದೇಶಗಳಲ್ಲಿ ಹೂಡಿಕೆ ರೂಪದಲ್ಲಿ ಹೆಚ್ಚು ಖರೀದಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ನಿರಂತರ ಬೆಲೆ ಜೊತೆಗೆ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುತ್ತಿರುವ ಈ ಲೋಹಗಳ ನಗರವಾರು ಮಾಹಿತಿ ಇಲ್ಲಿದೆ. ಇಂದು ಚಿನ್ನದ ಜೊತೆಗೆ ಬೆಳ್ಳಿ ದರ ಕೊಂಚ ಏರಿಕೆ ಆಗಿದೆ.
ಬೆಂಗಳೂರಿನಲ್ಲಿಂದು 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 30ರೂಪಾಯಿ, 10 ಗ್ರಾಂ ಗೆ 300 ರೂಪಾಯಿ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ ಒಂದು ಗ್ರಾಂ ಬಂಗಾರಕ್ಕೆ 32 ರೂಪಾಯಿಯಂತೆ 10 ಗ್ರಾಂಗೆ 320 ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಚಿನ್ನವು ತನ್ನ ಏರಿಕೆ ಕ್ರಮ ಮುಂದುವರೆಸಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನವು ನಿರಂತರ ಏರಿಕೆಯ ಹಾದಿ ಹಿಡಿದಿದೆ.

ಬೆಳ್ಳಿ ದರವು ಇಂದು ಗ್ರಾಂ ಗೆ ಒಂದು ರೂಪಾಯಿಯಂತೆ, 100 ಗ್ರಾಂಗೆ 100 ರೂಪಾಯಿ, ಒಂದು ಕೆಜಿ ಬೆಳ್ಳಿಗೆ 1000 ರೂಪಾಯಿ ಹೆಚ್ಚಾಗಿದೆ. ಡಿಸೆಂಬರ್ 22ರಿಂದ ನಿರಂತರವಾಗಿ ಬೆಳ್ಳಿ ದರ ಗಗನಕ್ಕೇರುತ್ತಲೇ ಬಂದಿದೆ. ಅಂದು ಒಂದೇ ದಿನಕ್ಕೆ ಒಂದು ಕೆಜಿ ಬೆಳ್ಳಿ ದರ 5000 ರೂ., ಡಿಸೆಂಬರ್ 23 ರಂದು 4000 ರೂಪಾಯಿ, ಡಿಸೆಂಬರ್ 24ರಂದು ನೆನ್ನೆ 10,000 ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಬೆಳ್ಳಿಯು ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದು ಕೊಟ್ಟಿದೆ. ಈ ಲೋಹಗಳ ಬೆಲೆ ಏರಿದರೂ, ಕುಸಿದರೂ ಮಾರುಕಟ್ಟೆಯಲ್ಲಿ ವಹೀವಾಟು ಮುಂದುವರಿದೆ. ಬೆಂಗಳೂರು ಸೇರಿ ನಗರವಾರು ಇಂದಿನ ಚಿನ್ನದ ದರ ವಿವರ ಇಲ್ಲಿದೆ.
22 ಕ್ಯಾರಟ್ 01 ಗ್ರಾಂ ಚಿನ್ನದ ಬೆಲೆಪಟ್ಟಿ
ಚೆನ್ನೈ: 12,820 ರೂಪಾಯಿ
ಮುಂಬೈ: 12,765 ರೂಪಾಯಿ
ದೆಹಲಿ: 12,780 ರೂಪಾಯಿ
ಕೊಲ್ಲತ್ತಾ: 12,765 ರೂಪಾಯಿ
ಬೆಂಗಳೂರು: 12,765 ರೂಪಾಯಿ
ಹೈದರಾಬಾದ್: 12,765 ರೂಪಾಯಿ
ಕೇರಳ:12,765 ರೂಪಾಯಿ
ಪುಣೆ:12,765 ರೂಪಾಯಿ
ವಡೋದರಾ: 12,770 ರೂಪಾಯಿ
24 ಕ್ಯಾರಟ್ 01 ಗ್ರಾಂ ಚಿನ್ನದ ದರ
ಚೆನ್ನೈ: 13,986 ರೂಪಾಯಿ
ಮುಂಬೈ: 13,925 ರೂಪಾಯಿ
ದೆಹಲಿ: 13,940 ರೂಪಾಯಿ
ಕೊಲ್ಲತ್ತಾ: 13,925 ರೂಪಾಯಿ
ಬೆಂಗಳೂರು: 13,925 ರೂಪಾಯಿ
ಹೈದರಾಬಾದ್: 13,925 ರೂಪಾಯಿ
ಕೇರಳ: 13,925 ರೂಪಾಯಿ
ಪುಣೆ: 13,925 ರೂಪಾಯಿ
ವಡೋದರಾ: 13,9230 ರೂಪಾಯಿ
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications