Gold Price on April 28: ಚಿನ್ನ ಪ್ರಿಯರಿಗೆ ಹೊಸ ಗುಡ್‌ನ್ಯೂಸ್: ಬಂಗಾರದ ಬೆಲೆ ಭರ್ಜರಿ ಕುಸಿತ!
Gold Price on April 28: ಚಿನ್ನ ಪ್ರಿಯರಿಗೆ ಇಲ್ಲೊಂದು ಭರ್ಜರಿ ಹೊಸ ಗುಡ್‌ನ್ಯೂಸ್ ಇದೆ. ಚಿನ್ನದ ಬೆಲೆಯು ಏರಿಕೆಯ ಹಾದಿಯಿಂದ ನಿಧಾನವಾಗಿ ಇಳಿಕೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ 1 ಲಕ್ಷ ರೂಪಾಯಿ ಮುಟ್ಟಿದ್ದ ಚಿನ್ನದ ಬೆಲೆಯು ಇದೀಗ ನಿಧಾನವಾಗಿ ಇಳಿಕೆಯಾಗುತ್ತಿದ್ದು. ಬಂಗಾರ ಪ್ರಿಯರಲ್ಲಿ ತುಸು ನಿರಾಳತೆ ಮೂಡಿಸಿದೆ. ಹೌದು ಇನ್ಮುಂದೆ ಚಿನ್ನದ ಬೆಲೆ ಇಳಿಕೆಯಾಗುವುದಿಲ್ಲ. ಏರಿಕೆಯ ಹಾದಿಯಲ್ಲೇ ಸಾಗಲಿದೆ ಎನ್ನುವಾಗಲೇ ಭರ್ಜರಿ ಗುಡ್‌ನ್ಯೂಸ್ ಬಂದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಏಪ್ರಿಲ್ 28ಕ್ಕೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.
ದೇಶದಲ್ಲಿ ಹಾಗೂ ವಿಶ್ವದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಚಿನ್ನದ ಬೆಲೆಯು ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮೂಡಿತ್ತು. ಆದರೆ, ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಕಳೆದ ಎರಡು ವಾರಗಳಿಂದಲೂ ಚಿನ್ನ & ಬೆಳ್ಳಿ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಲ್ಲೇ ಇದೆ.ಇದೀಗ ಮದುವೆ ಹಾಗೂ ಅಕ್ಷಯ ತೃತೀಯ ಇರುವುದರಿಂದ ಚಿನ್ನ ಖರೀದಿ ವ್ಯಾಪಾರ ಜೋರಾಗಿದೆ. ಹೀಗಾಗಿ, ಚಿನ್ನದ ಬೆಲೆಯ ಮೇಲೆಯೇ ಎಲ್ಲರ ಕಣ್ಣಿದೆ. ಇದೀಗ ಏಪ್ರಿಲ್ 28 ತಿಂಗಳ ಕೊನೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಚಿನ್ನ ಪ್ರಿಯರಿಗೆ ಸಿಹಿ ತಂದಿದೆ.

18 ಕ್ಯಾರೆಟ್ ಚಿನ್ನದ ಬೆಲೆ: ಏಪ್ರಿಲ್ 28ರ ಸೋಮವಾರ 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 7,315 ರೂಪಾಯಿ ಆಗಿದೆ. ಇದು ನೆನ್ನೆಗೆ ಹೋಲಿಕೆ ಮಾಡಿದರೆ 51 ರೂಪಾಯಿ ಇಳಿಕೆಯಾಗಿದೆ. ಪ್ರತಿ 10 ಗ್ರಾಂಗೆ 73, 150 ರೂಪಾಯಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 8,940 ರೂಪಾಯಿ ಆಗಿದೆ. ಪ್ರತಿ 10 ಗ್ರಾಂಗೆ 89, 400 ರೂಪಾಯಿ ಆಗಿದೆ.
24 ಕ್ಯಾರೆಟ್ ಚಿನ್ನ: ಸೋಮವಾರ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 9,753 ರೂಪಾಯಿ ಆಗಿದೆ. 10 ಗ್ರಾಂಗೆ 97,530 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲೂ ಅಲ್ಪ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 100.50 ರೂಪಾಯಿ ಆಗಿದ್ದರೆ. ಪ್ರತಿ ಕೆ.ಜಿ ಬೆಳ್ಳಿ ಬೆಲೆಯು 1,00,500 ರೂ. ಆಗಿದೆ.
ಮದುವೆ ಸಂಭ್ರಮ: ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹಲವು ಶುಭ ಸಮಾರಂಭಗಳು ಇವೆ. ಮೇ ತಿಂಗಳ ಮೊದಲ ದಿನವೇ ಅಕ್ಷಯ ತೃತೀಯ ಇದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಖರೀದಿ ಮಾಡಿದರೆ, ಸಂಪತ್ತು ಹೆಚ್ಚಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿ, ಜನ ಅಕ್ಷಯ ತೃತೀಯದಂದು ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಇನ್ನು ಈ ತಿಂಗಳು ಮದುವೆ ಮುಹೂರ್ತಗಳು ಹೆಚ್ಚಾಗಿವೆ. ಮದುವೆ ಶುಭ ಸಮಾರಂಭಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿಯು ಜೋರಾಗಿ ಇರುತ್ತದೆ.












Click it and Unblock the Notifications