Gold Price: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಮೂರನೇ ದಿನವೂ ಅದೇ ಬೆಲೆ!
Gold Price: ಚಿನ್ನ ಮತ್ತು ಬೆಳ್ಳಿ ಬೆಲೆಯು ಮೂರು ದಿನಗಳಿಂದ ಯಥಾಸ್ಥಿತಿ ಮುಂದುವರಿದಿದ್ದು. ಚಿನ್ನ ಖರೀದಿ ಮಾಡಬೇಕು ಎಂದು ಆಸೆಪಡುತ್ತಿರುವ ಚಿನ್ನ ಪ್ರಿಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ. ಭಾರತದಾದ್ಯಂತ ಚಿನ್ನದ ಬೆಲೆಯು ಇಳಿಕೆಯ ಹಾದಿಯಲ್ಲಿದೆ. ಬೆಳ್ಳಿ ಬೆಲೆಯೂ ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ ಬಂಗಾರದ ಬೆಲೆಯು 10 ಗ್ರಾಂಗೆ 90,700 ರೂಪಾಯಿ ಆಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಒಟ್ಟು ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ವಿಶ್ವದಾದ್ಯಂತ ತುಸು ಶಾಂತಿ ನೆಲೆಸುತ್ತಿರುವುದು ಹಾಗೂ ಯಾವುದೇ ವಿಶೇಷ ದಿನಗಳು ಇಲ್ಲದೆ ಇರುವುದರಿಂದ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ. ಇಂದೂ ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಶುಕ್ರವಾರ ಸಹ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮಹತ್ವದ ವ್ಯತ್ಯಾಸಗಳು ಆಗಿಲ್ಲ. ಇದು ಚಿನ್ನ ಪ್ರಿಯರಲ್ಲಿ ಭಾರೀ ಸಂತೋಷವನ್ನುಂಟು ಮಾಡಿದೆ.

ಚಿನ್ನ ಖರೀದಿಗೆ ಬೆಸ್ಟ್ ಟೈಮ್: ಇನ್ನು ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿರುವುದು. ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗದೆ ಇರುವುದರಿಂದ ಚಿನ್ನ ಖರೀದಿ ಮಾಡುವುದಕ್ಕೆ ಇದು ಬೆಸ್ಟ್ ಟೈಮ್ ಎಂದೇ ಹೇಳಲಾಗುತ್ತಿದೆ. ಚಿನ್ನದ ಬೆಲೆಯು ಕಡಿಮೆ ಆಗುವುದರಲ್ಲಿ ಇದೆ. ಹೀಗಾಗಿ ಈ ಅವಧಿಯಲ್ಲಿ ಚಿನ್ನ ಖರೀದಿ ಮಾಡುವುದು ಉತ್ತಮ ಎಂದೇ ಹೇಳಲಾಗುತ್ತಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,420 ರೂಪಾಯಿ ಆಗಿದೆ. 10 ಗ್ರಾಂಗೆ 74,200 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 9,069 ರೂಪಾಯಿ ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆಯು 90,690 ರೂಪಾಯಿ ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 10 ರೂಪಾಯಿ ಇಳಿಕೆ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 9,894 ರೂಪಾಯಿ ಹಾಗೂ 10 ಗ್ರಾಂಗೆ 98,940 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 10 ರೂಪಾಯಿ ಕಡಿಮೆಯಾಗಿದೆ.
ಬೆಳ್ಳಿ ಬೆಲೆ: ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 107.90 ಹಾಗೂ ಪ್ರತಿ ಕೆಜಿಗೆ 1,07,900 ರೂಪಾಯಿ ಆಗಿದೆ.












Click it and Unblock the Notifications