Gold Price Drop Today: ಚಿನ್ನ - ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಬರೋಬ್ಬರಿ 25,000 ರೂ ಇಳಿಕೆ
Gold Price Drop Today: ಚಿನ್ನ ಪ್ರಿಯರಿಗೆ ಶುಭ ಶುಕ್ರವಾರವಾಗಿದೆ. ಕಳೆದ ವಾರದಂತೆಯೇ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಗುರುವಾರವೂ ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಫೆಬ್ರವರಿ 6ರಂದು ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ 2,070 ರೂಪಾಯಿ ಕಡಿಮೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 25,000 ರೂಪಾಯಿ ಕಡಿಮೆಯಾಗಿದೆ. ಫೆಬ್ರವರಿ 6ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ ವಿವರ ಇಲ್ಲಿದೆ.
ಚಿನ್ನ ಪ್ರಿಯರಿಗೆ ಶುಕ್ರವಾರ ಬಂಪರ್ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯು ಸತತ ಎರಡನೇ ದಿನವೂ ಕಡಿಮೆಯಾಗಿದೆ. ಬೆಳ್ಳಿಯಲ್ಲೂ ಕಳೆದ ಒಂದು ವಾರದಿಂದ ನಿರಂತರವಾಗಿ ಬೆಲೆ ಇಳಿಕೆಯಾಗುತ್ತಿದ್ದು. ಚಿನ್ನ ಮತ್ತು ಬೆಳ್ಳಿ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಚಿನ್ನದ ಬೆಲೆಯು 10 ಗ್ರಾಂಗೆ ಬರೋಬ್ಬರಿ 2 ಲಕ್ಷ ರೂಪಾಯಿ ಸಮೀಪಿಸಿತ್ತು. ಇದೀಗ ಚಿನ್ನದ ಬೆಲೆಯು ಹಳೆಯ ರೇಟ್‌ಗೆ ಬರುತ್ತಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಫೆಬ್ರವರಿ 6ರಂದು 24 ಕ್ಯಾರೆಟ್‌ನ 1ಗ್ರಾಂನ ಚಿನ್ನದ ಬೆಲೆಯು 15,235 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 1,52,350 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಬೆಲೆಯು 207 ರೂಪಾಯಿ ಹಾಗೂ 10 ಗ್ರಾಂನ ಬೆಲೆಯು 2,070 ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 22 ಕ್ಯಾರೆಟ್‌ನ 1ಗ್ರಾಂ ಚಿನ್ನದ ಬೆಲೆಯು 13,965 ರೂ. ಹಾಗೂ 10 ಗ್ರಾಂಗೆ 1,39,650 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ, 22 ಕ್ಯಾರೆಟ್‌ನ ಚಿನ್ನದ ಬೆಲೆಯು 1ಗ್ರಾಂಗೆ 190 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,900 ರೂಪಾಯಿ ಕಡಿಮೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,426 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,14,260 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 156 ರೂಪಾಯಿ ಹಾಗೂ 1,560 ರೂಪಾಯಿ ಕಡಿಮೆಯಾಗಿದೆ.
ಫೆಬ್ರವರಿ 6 ಬೆಳ್ಳಿ ಬೆಲೆ ಎಷ್ಟಿದೆ
ಇನ್ನು ಫೆಬ್ರವರಿ 6ರಂದು ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 275 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,75,000 ರೂ. ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು ಪ್ರತಿ ಗ್ರಾಂನ ಮೇಲೆ 25 ರೂಪಾಯಿ ಹಾಗೂ ಪ್ರತಿ ಕೆ.ಜಿ ಬೆಳ್ಳಿಯ ಮೇಲೆ ಬರೋಬ್ಬರಿ 25,000 ರೂಪಾಯಿ ಕಡಿಮೆಯಾಗಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications