Gold and Silver Price: "ಬಂಗಾರ" ದರ ತುಸು ಇಳಿಕೆ, ಖರೀದಿ ಬಲು ಜೋರು - ನಗರವಾರು ದರಗಳ ವಿವರ

Gold and Silver Price: ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತದೆ ಎನ್ನುವ ಮಾತೇ ಇದೆ. ಇನ್ನೂ ಬಂಗಾರ ಅಂದರೆ ಯಾರಿಗೆ ಇಷ್ಟ ಇರಲಿಕ್ಕಿಲ್ಲ ಹೇಳಿ. ಅದರಲ್ಲೂ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾದರೆ ಸಾಕು ಬಂಗಾರದ ಅಂಗಡಿಗಳ ಮುಂದೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಕ್ಯೂ ನಿಂತಿರುತ್ತಾರೆ ಅನ್ನುವುದಕ್ಕಿಂತ ಚಿನ್ನ ಕೊಳ್ಳಲು ಒಂದು ಹೆಜ್ಜೆ ಮುಂದೆ ಇರುತ್ತಾರೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಇದೀಗ ಬಂಗಾರದ ಬೆಲೆ ತುಸು ಕಡಿಯಾಗಿದೆ. ಹಾಗಾದರೆ ಯಾವ್ಯಾವ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಲೆ ಇಳಿಕೆಯಾಗಿದೆ ಎನ್ನುವ ಸುದ್ದಿ ತಿಳಿದ ಕೂಡಲೇ ನಗರ ಪ್ರದೇಶಗಳಲ್ಲಿ ಇಂದು ಚಿನ್ನ ಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಇನ್ನಿತರ ನಗರಗಳಲ್ಲಿ ಚಿನ್ನದ ದರ ಹೀಗಿದೆ ನೋಡಿ.

Gold and Silver prices details on november 24, Know City wise price details

ಬಂಗಾರ ಮತ್ತು ಬೆಳ್ಳಿ ದರ ಹೀಗಿದೆ

* 22 ಕ್ಯಾರಟ್​ನ (10 ಗ್ರಾಂ) ಬಂಗಾರದ ದರ - 56,800 ರೂಪಾಯಿ
* 24 ಕ್ಯಾರಟ್​ನ (10 ಗ್ರಾಂ) ಬಂಗಾರದ ದರ - 61,970 ರೂಪಾಯಿ
* 1 ಕೆಜಿ ಬೆಳ್ಳಿ ದರ - 75,250 ರೂಪಾಯಿ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ನವೆಂಬರ್‌ 23) ಹಾಗೂ ಕಳೆದ ಎರಡು ದಿನಗಳಿಂದಲೂ 22 ಕ್ಯಾರೆಟ್ 10 ಗ್ರಾಂ​ ಬಂಗಾರ ದರ 56,850 ರೂಪಾಯಿ ಇತ್ತು. ಆದರೆ ಇದೀಗ ಇಂದು (ನವೆಂಬರ್‌ 24) 56,800 ರೂಪಾಯಿ ಆಗಿದೆ. ಇದನ್ನು ಗಮನಿಸಿದರೆ ಚಿನ್ನದ ಬೆಲೆ ತುಸು ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)

* ಬೆಂಗಳೂರು - 56,800 ರೂಪಾಯಿ
* ಮುಂಬೈ - 56,800 ರೂಪಾಯಿ
* ದೆಹಲಿ - 56,950 ರೂಪಾಯಿ
* ಕೇರಳ - 56,800 ರೂಪಾಯಿ
* ಅಹ್ಮದಾಬಾದ್ - 56,850 ರೂಪಾಯಿ
* ಜೈಪುರ್ - 56,960 ರೂಪಾಯಿ

ನವೆಂಬರ್‌ 21ರಿಂದ 23ರವರೆಗೂ ದರಗಳ ವಿವರ

1. 22 ಕ್ಯಾರೆಟ್ ಆಭರಣ ಚಿನ್ನದ (ಒಂದು ಗ್ರಾಂ) ದರ - 5,685 ರೂಪಾಯಿ
2. 24 ಕ್ಯಾರೆಟ್ ಬಂಗಾರದ ದರ - 6,202 ರೂಪಾಯಿ

* 8 ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ದರ - 45,480 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 49,616 ರೂಪಾಯಿ

* 10 ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ದರ - 56,850 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,020 ರೂಪಾಯಿ

* 100 ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 5,68,500 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 6,20,200 ರೂಪಾಯಿ

* ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)

1. ಬೆಂಗಳೂರು - 56,850 ರೂಪಾಯಿ
2. ಚೆನ್ನೈ - 57,300 ರೂಪಾಯಿ
3. ಮುಂಬೈ - 56,850 ರೂಪಾಯಿ
4. ಕೋಲ್ಕತ್ತಾ- 56,850 ರೂಪಾಯಿ
5. ನವದೆಹಲಿ - 57,000 ರೂಪಾಯಿ

* ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

1. ಬೆಂಗಳೂರಲ್ಲಿ - 75,000 ರೂಪಾಯಿ
2. ಚೆನ್ನೈ - 79,400 ರೂಪಾಯಿ
3. ಮುಂಬೈ - 76,000 ರೂಪಾಯಿ
4. ಕೋಲ್ಕತ್ತಾ - 76,400 ರೂಪಾಯಿ
5. ನವದೆಹಲಿ - 76,400 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+