Gold Price: ಚಿನ್ನ ಪ್ರಿಯರಿಗೆ ಬಿಗ್ ಶಾಕ್: ಇತಿಹಾಸದಲ್ಲೇ ಮೊದಲ ಬಾರಿ ಚಿನ್ನದ ಬೆಲೆ ಭರ್ಜರಿ ಹೆಚ್ಚಳ!
ಚಿನ್ನ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಬರೋಬ್ಬ 80,000 ಸಾವಿರ ಗಡಿದಾಟಿದೆ. 24 ಕ್ಯಾರೇಟ್ ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಬರೋಬ್ಬರಿ 80,000 ಸಾವಿರ ಗಡಿದಾಟಿದೆ. ಚಿನ್ನದ ಬೆಲೆ ಜಿಗಿತ ಕಂಡಿರುವುದನ್ನು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಖಚಿತಪಡಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ 24 ಕ್ಯಾರೇಟ್‌ನ ಚಿನ್ನದ ಬೆಲೆಯು 10 ಗ್ರಾಂಗೆ 80,194 ರೂಪಾಯಿ ಆಗಿದೆ. ಚಿನ್ನದ ಬೆಲೆಯು 80 ಸಾವಿರ ಗಡಿದಾಟಿರುವುದು ಇದೇ ಇತಿಹಾಸದಲ್ಲಿ ಇದೇ ಮೊದಲು. ಕಳೆದ ನಾಲ್ಕರಿಂದ ಐದು ತಿಂಗಳಿನಿಂದ 80 ಸಾವಿರದ ಗಡಿಯಲ್ಲೇ ಇತ್ತು. ಇತ್ತು ಇದೀಗ ಜನವರಿ 23ರಂದು ಕೊನೆಗೂ ಚಿನ್ನದ ಬೆಲೆ 80 ಸಾವಿರದ ಗಡಿ ದಾಟಿದೆ.
ಸಾಮಾನ್ಯವಾಗಿ ಷೇರುಮಾರುಕಟ್ಟೆಯಲ್ಲಿ ಏರಿಳಿತ, ಯುದ್ಧ ಹಾಗೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗುವುದು ಇದೆ. ಆದರೆ ಇದೀಗ ವಿಶ್ವದಲ್ಲಿ ಅಂತಹ ಗಂಭೀರ ಪರಿಸ್ಥಿತಿ ಇಲ್ಲ. ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇನ್ನೇನು ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಸಹ ಯುದ್ಧ ನಿಲ್ಲುವ ಲಕ್ಷಣಗಳು ಸಹ ಕಾಣಿಸುತ್ತಿವೆ. ಈಗಾಗಲೇ ರಷ್ಯಾ - ಉಕ್ರೇನ್‌ನ ಮೇಲೆ ಯುದ್ಧ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ವಿಶ್ವದ ವಿವಿಧ ಭಾಗದಲ್ಲಿ ಯುದ್ಧ ವಿರಾಮ ಹಾಗೂ ಶಾಂತಿ ನೆಲೆಸುತ್ತಿದ್ದರೂ ಚಿನ್ನದ ಬೆಲೆ ಹೆಚ್ಚಳ ಆಗುತ್ತಿರುವುದಕ್ಕೆ ಬೇರೆಯದ್ದೇ ಕಾರಣ ಇದೆ.

ಕಳೆದ ಐದಾರು ತಿಂಗಳಿನಿಂದ ಚಿನ್ನದ ಬೆಲೆ 75 ಸಾವಿರ ರೂಪಾಯಿಯಿಂದ 78,79 ಸಾವಿರ ರೂಪಾಯಿಯ ಗಡಿಯಲ್ಲೇ ಇತ್ತು. ಇನ್ನೇನು ಚಿನ್ನದ ಬೆಲೆ 80 ಸಾವಿರ ರೂಪಾಯಿ ಗಡಿದಾಟಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಇದೀಗ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಹೌದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುವುದಾಗಿ ಹೇಳಿದ ಮೇಲೆ ಹೂಡಿಕೆದಾರರು ಸದಾ ಸುರಕ್ಷಿತ ಎಂದು ನಂಬಿರುವ ಚಿನ್ನದ ಮೇಳೆ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ ಡಾಲರ್ ದುರ್ಬಲವಾಗುತ್ತಿರುವುದು ಸಹ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣ ಅಂತ ಹೇಳಲಾಗಿದೆ.
ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ: ಇನ್ನು ಚಿನ್ನದ ಬೆಲೆ ಈಗಾಗಲೇ 80 ಸಾವಿರ ರೂಪಾಯಿ ಗಡಿದಾಟ್ಟಿದ್ದು. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ಮೇಲೆ ತೆರಿಗೆ ನೀತಿ ಸುಧಾರಣೆ ಮಾಡುವುದಾಗಿ ಹೇಳಿದ್ದಾರೆ. ಅಂದರೆ ಅಮೆರಿಕದ ವಸ್ತುಗಳಿಗೆ ಯಾವ ದೇಶ ಹೆಚ್ಚು ತೆರಿಗೆ ವಿಧಿಸುತ್ತಿದೆಯೋ ಆ ದೇಶದ ಮೇಲೆ ಹೆಚ್ಚು ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಚೀನಾ ಹಾಗೂ ಕೆನಡಾದ ಮೇಲೆ ಭರ್ಜರಿ ತೆರಿಗೆ ವಿಧಿಸುವುದಕ್ಕೆ ಅಮೆರಿಕ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಚಿನ್ನದ ಬೆಲೆ 80 ಸಾವಿರ ಗಡಿ ದಾಟಿದೆ.
ಚಿನ್ನದ ಬೆಲೆ 80 ಸಾವಿರ ಗಡಿ ಮುಟ್ಟಲಿದೆ ಎಂದು ಹಲವು ದಿನಗಳಿಂದ ಆತಂಕ ಇತ್ತು. ಆ ಆತಂಕ ಈಗ ನಿಜವಾಗಿದೆ. ಇದೇ ಮೊದಲ ಬಾರಿ 80 ಸಾವಿರದ ಗಡಿಯನ್ನ ಚಿನ್ನದ ಬೆಲೆ ಕ್ರಾಸ್ ಮಾಡಿದೆ. ಒಮ್ಮೆ ಚಿನ್ನದ ಬೆಲೆ ಹೆಚ್ಚಳವಾದ ಮೇಲೆ ಚಿನ್ನದ ಬೆಲೆ ಇಳಿಕೆಯಾದರೂ ಹೇಳಿಕೊಳ್ಳುವ ಬೆಲೆಯಲ್ಲಿ ಆಗಲ್ಲ.












Click it and Unblock the Notifications