Gold Rate Today: 77,000 ರೂ. ಗೆ ಸಿಗುತ್ತಿದ್ದ ಚಿನ್ನದ ಇಂದು ದರ ಗಗನಕ್ಕೆ: ದರಪಟ್ಟಿ

ಚಿನ್ನಾಭರಣ ಪ್ರಿಯರಿಗೆ ಶ್ರಾವಣ ಮಾಸದಿಂದಲೂ ಶಾಕ್ ನೀಡುತ್ತಿರುವ ದರ ಏರಿಕೆಯು ಮುಂದುವರಿದಿದೆ. ಕೆಲವು ತಿಂಗಳುಗಳಿಂದ ಚಿನ್ನ ಹಾಗೂ ಬೆಳ್ಳಿಯ ದರವು ಹೆಚ್ಚಾಗುತ್ತಲೇ ಬಂದಿದೆ. ಹಬ್ಬಗಳ ಹಿನ್ನೆಲೆ ಖರೀದಿಗೆ ಮನಸ್ಸು ಮಾಡಿದ್ದ ಜನರಿಗೆ ಈ ನಿರಂತರ ದರ ಏರಿಕೆಯು ಜೇಬಿಗೆ ಕತ್ತರಿ ಹಾಕಿದೆ. ಕಳೆದ ಒಂದು ವಾರದಲ್ಲಿ 10,280 ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 10,585 ರೂಪಾಯಿಗೆ ಹೆಚ್ಚಾಗಿದೆ. ಇಂದು ಚಿನ್ನದ ಬೆಲೆ ಎಷ್ಟಿದೆ? ದರಪಟ್ಟಿ ವಿವರ ಇಲ್ಲಿದೆ.

ಬಂಗಾರದ ಬೆಲೆ ಸೆಪ್ಟಂಬರ್ 21ರಿಂದ ಇವತ್ತಿನವರೆಗೆ ಒಂದು ವಾರದಲ್ಲಿ ನಾಲ್ಕು ಬಾರಿ ಹೆಚ್ಚಾಗಿದೆ. ಎರಡು ಬಾರಿ ದರ ಕುಸಿದಿದೆ. ಸೆಪ್ಟಂಬರ್ 24 & 25ರಂದು 22ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ ಕ್ರಮವಾಗಿ 30 & 50 ರೂಪಾಯಿ ಇಳಿಕೆ ಆಗಿದೆ. 24ಕ್ಯಾರಟ್ ಚಿನ್ನವು ಅದೇ ದಿನಾಂಕದಂದು ಒಂದು ಗ್ರಾಂಗೆ ಕ್ರಮವಾಗಿ 32 & 93 ರೂಪಾಯಿ ಕುಸಿತ ಕಂಡಿದೆ. ಇದರ ಹೊರತು ಉಳಿದ ದಿನಗಳಲ್ಲಿ ಗರಿಷ್ಠ 22ಕ್ಯಾರಟ್ ಒಂದು ಗ್ರಾಂಗೆ 240 ರೂಪಾಯಿ, 24ಕ್ಯಾರಟ್ ಒಂದು ಗ್ರಾಂಗೆ 263 ರೂಪಾಯಿ ಹೆಚ್ಚಾಗಿದೆ.

Gold and Silver Rate on Sep 28th Gold Price Today Updates

ಚಿನ್ನದ ದರದಲ್ಲಿ ಯಾವಾಗಲೂ ಇಳಿಕೆ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಹೆಚ್ಚಾದರೆ ಒಮ್ಮೆಲೆ ನಾಲ್ಕು ದಿನ ತಗ್ಗಿದೆ ಬೆಲೆ ಒಂದೆ ಬಾರಿಗೆ ಹೆಚ್ಚಾಗಿರುತ್ತದೆ. ಇದರಿಂದ ಚಿನ್ನ ಇಂದು ಲಕ್ಷ ರೂಪಾಯಿ ಗಡಿ ದಾಟಿದೆ. ಇಂದು ಸೆಪ್ಟಂಬರ್ 28ರಂದು ಚಿನ್ನದ ಮತ್ತು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಒಂದೇ ವರ್ಷದಲ್ಲಿ ಚಿನ್ನ ಗಗನಕ್ಕೆ...

ಇಂದು 24 ಕ್ಯಾರಟ್ ಚಿನ್ನ 10 ಗ್ರಾಂ ಚಿನ್ನಕ್ಕೆ ಇಂದು 1,15,480 ರೂಪಾಯಿ ಇದೆ. 22 ಕ್ಯಾರಟ್ 10 ಗ್ರಾಂ ಬಂಗಾರಕ್ಕೆ 1,05,850 ರೂಪಾಯಿ ಇದೆ. ಕಳೆದ ವರ್ಷ ಇದೇ ತಿಂಗಳು 22ಕ್ಯಾರಟ್ ಚಿನ್ನದ ಬೆಲೆ 73,000 ರಿಂದ 77,000 ರೂಪಾಯಿ ಸಿಗುತ್ತಿತ್ತು. ಒಂದೇ ವರ್ಷದಲ್ಲಿ ನೋಡ ನೋಡುತ್ತಿದ್ದಂತೆ ಬಂಗಾರ ಬಲ ದುಬಾರಿಯಾಗಿಬಿಟ್ಟಿದೆ. ಮಧ್ಯಮ ವರ್ಗದ ಜನರಿಗೆ ಚಿನ್ನ ಗಗನಕುಸುಮದಂತಾಗಿದೆ.

90,000 ರೂಪಾಯಿ ದಾಟಿದೆ ಮೇಲೆ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನವು ನಂತರದ ಕೆಲವೇ ದಿನಗಳಲ್ಲಿ ದಿಢೀರ್ ಒಂದು ದಾಟಿತು. ಅಷ್ಟೊತ್ತಿಗಾಗಿ 24ಕ್ಯಾರಟ್ ಚಿನ್ನ ಒಂದು ಲಕ್ಷ ರೂಪಾಯಿ ದಾಟಿ ತಿಂಗಳು ಕಳೆದಿದ್ದವು. ಇನ್ನು ಬೆಳ್ಳಿಯು ಅದೇ ರೀತಿ ದರ ಹೆಚ್ಚಿಸಿಕೊಂಡಿದೆ. ಸೆಪ್ಟಂಬರ್ 22,23 & 24 ರಂದು ನಿರಂತರವಾಗಿ ಬೆಳ್ಳಿ ದರವು ಏರಿಕೆ ಆಗಿದೆ. ನಂತರ ಇವತ್ತಿನವರೆಗೆ ದರದಲ್ಲಿ ಸ್ಥಿರತೆ ಇದೆ.

ಇಂದು ಭಾನುವಾರ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬೆಳ್ಳಿಯ 100 ಗ್ರಾಂಗೆ 14,950 ರೂಪಾಯಿ ಇದೆ. ಇನ್ನೂ ಒಂದು ಕೆಜಿಗೆ (1000) 1,49,500 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಮತ್ತು ಚಿನ್ನ ಮತ್ತಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಈಗಾಗಲೇ ಹೂಡಿಕೆದಾರರಿಗೆ ಚಿನ್ನ-ಬೆಳ್ಳಿ ಉತ್ತಮ ರಿಟರ್ನ್ ಕೊಟ್ಟಿದೆ ಎಂದು ವರದಿ ಆಗಿದೆ.

ಇಂದು ವಿವಿಧ ನಗರಗಳಲ್ಲಿ 22 ಕ್ಯಾರಟ್ (1 ಗ್ರಾಂ) ಚಿನ್ನದ ದರ

ಬೆಂಗಳೂರು: 10,530 ರೂಪಾಯಿ
ಕೋಲ್ಕತಾ: 10,530 ರೂಪಾಯಿ
ಮುಂಬೈ: 10,530 ರೂಪಾಯಿ
ದೆಹಲಿ: 10,545 ರೂಪಾಯಿ
ಕೇರಳ: 10,530 ರೂಪಾಯಿ
ಅಹ್ಮದಾಬಾದ್: 10,535 ರೂಪಾಯಿ
ಚೆನ್ನೈ: 10,550 ರೂಪಾಯಿ
ಲಕ್ನೋ: 10,545 ರೂಪಾಯಿ
ಭುವನೇಶ್ವರ್: 10,530 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+