Gold Price on Feb 6: ಚಿನ್ನ ಪ್ರಿಯರಿಗೆ ಬಿಗ್ ಶಾಕ್; ಹೊಸ ದಾಖಲೆ ಬೆಲೆಗೆ ಜಿಗಿದ ಬಂಗಾರ!
Gold Price on Feb 6: ಚಿನ್ನ ಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಶಾಕ್ ಎದುರಾಗಿದೆ. ಕಳೆದ 15 ದಿನಗಳಿಂದಲೂ ಚಿನ್ನದ ಬೆಲೆ ಸ್ವಲ್ಪ ಸ್ಪಲ್ಪ ಪ್ರಮಾಣದಲ್ಲಿ ಜಿಗಿಯುತ್ತಲ್ಲೇ ಇದೆ. ಇದೀಗ 24 ಕ್ಯಾರೇಟ್ ಚಿನ್ನದ ಬೆಲೆಯು 86,510 ರೂಪಾಯಿ ಆಗಿದೆ. ಫೆಬ್ರವರಿ 6ರ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ. ಫೆಬ್ರವರಿ 5ರ ಚಿನ್ನದ ಬೆಲೆಗಿಂತ ಎಷ್ಟು ಹೆಚ್ಚಳವಾಗಿದೆ ಎನ್ನುವ ಸಂಪೂರ್ಣ ವಿವರ ನೋಡೋಣ..
ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬಂಗಾರವನ್ನು ಖರೀದಿ ಮಾಡಬೇಕು ಅಥವಾ ಅಡಮಾನವಿರಿಸಿರುವ ಬಂಗಾರವನ್ನು ಬಿಡಿಸಿಕೊಳ್ಳಬೇಕು ಎನ್ನುವವರಿಗೆ ಶಾಕ್ ಎದುರಾಗುತ್ತಿದೆ. ಬಂಗಾರ ಖರೀದಿ ಮಾಡಬೇಕು ಎಂದು ಕೊಂಡವರಿಗೆ ಚಿನ್ನದ ಬೆಲೆ ಹೆಚ್ಚಳ ಶಾಕ್ ಕೊಟ್ಟಿದ್ದರೆ. ಚಿನ್ನವನ್ನು ಅಡಮಾನ ಇರಿಸಿರುವವರಿಗೆ ಬಡ್ಡಿಯ ಶಾಕ್ ಆತಂಕವನ್ನುಂಟು ಮಾಡಿದೆ.

ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷತೆಯ ಮಾರ್ಗ ಎಂದು ಎಲ್ಲರೂ ಭಾವಿಸುತ್ತಾರೆ. ಇದೀಗ ವಿಶ್ವದಲ್ಲಿ ನಾನಾ ಕಾರಣಕ್ಕೆ ವಿವಿಧ ವಸ್ತುಗಳ ಹೇರಿಕೆ ಹಾಗೂ ಷೇರುಮಾರುಕಟ್ಟೆಯಲ್ಲಿ ವ್ಯತ್ಯಾಸ ಮುಂದುವರಿದಿದೆ. ಈ ಬಾರಿ ಕೇಂದ್ರ ಬಿಜೆಪಿ ಸರ್ಕಾರವು ಬಜೆಟ್ ಮಂಡನೆ ಮಾಡಿದ ಮೇಲೆ ಷೇರುಮಾರುಕಟ್ಟೆಯಲ್ಲಿ ಸುಧಾರಣೆ ಕಾಣಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇಂದ್ರ ಈ ಬಾರಿ ಟ್ಯಾಕ್ಸ್ ರಿಲ್ಯಾಕ್ಸ್‌ನಂತಹ ಕೊಡುಗೆ ಕೊಟ್ಟರೂ ಸಹ ಷೇರುಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸ ಕಂಡು ಬಂದಿಲ್ಲ. ಚಿನ್ನದ ಬೆಲೆಯಲ್ಲೂ ಇದೇ ಆಗಿದೆ.
ಫೆಬ್ರವರಿ 6 ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?
ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಚಿನ್ನದ ಬೆಲೆಯು 86,000 ಸಾವಿರ ರೂಪಾಯಿ ಮುಟ್ಟುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಫೆಬ್ರವರಿ 6ಕ್ಕೆ 22 ಕ್ಯಾರೇಟ್ ಚಿನ್ನದ ಬೆಲೆಯು 10 ಗ್ರಾಂಗೆ 79,300 ರೂಪಾಯಿ ಇದೆ. 1 ಗ್ರಾಂಗೆ 7,930 ರೂಪಾಯಿ ಇದೆ. ಇನ್ನು 24 ಕ್ಯಾರೇಟ್‌ನ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 86,510 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೇಟ್ ಚಿನ್ನದ ಬೆಲೆಯ 8,651 ರೂಪಾಯಿ ಆಗಿದೆ.

ಬುಧವಾರಕ್ಕಿಂತ ಹೆಚ್ಚು: ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬುಧವಾರಕ್ಕಿಂತ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,000 ಸಾವಿರ ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂಗೆ 200 ರೂಪಾಯಿ ಹೆಚ್ಚಳವಾಗಿರುವುದು ವರದಿಯಾಗಿದೆ. 2025ನೇ ಸಾಲಿನ ಜನವರಿ 6ರಿಂದ ಚಿನ್ನದ ಬೆಲೆಯು ಏರಿಕೆ ಆಗುವುದು ಮುಂದುವರಿದಿದೆ. ಜನವರಿಯಲ್ಲಿ ಚಿನ್ನದ ಬೆಲೆ ಏರಿಕೆ ಆಗುವುದು ಮುಂದುವರಿದಿದೆ.
ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಎಲ್ಲಿ 1 ಲಕ್ಷ ರೂಪಾಯಿ ಮುಟ್ಟಲಿದೆಯೇ ಎನ್ನುವ ಆತಂಕ ಚಿನ್ನ ಪ್ರಿಯರನ್ನು ಕಾಡುತ್ತಿದೆ. ಯಾಕೆಂದರೆ 80,000 ಸಾವಿರ ರೂಪಾಯಿ ಅಲ್ಲಿಂದ 86,000 ಸಾವಿರ ರೂಪಾಯಿ ಮುಟ್ಟಿರುವ ಚಿನ್ನ 1 ಲಕ್ಷ ರೂಪಾಯಿ ತಲುಪುವುದಕ್ಕೆ ಇದೀಗ 14,000 ಸಾವಿರ ರೂಪಾಯಿ ಮಾತ್ರ ಅಂತರವಿದೆ. ಕಳೆದ ಮೂರು ತಿಂಗಳ ಹಿಂದೆ ಚಿನ್ನ 70,000 ಸಾವಿರದಿಂದ 75,000 ಸಾವಿರ ರೂಪಾಯಿ ಒಳಗಿತ್ತು.












Click it and Unblock the Notifications