• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರಿಕೆಗೊಂಡ ಚಿನ್ನದ ಬೆಲೆ ಮತ್ತೆ ಕುಸಿತ: ಬೆಳ್ಳಿ ಬೆಲೆಯಲ್ಲೂ ಇಳಿಕೆ

|

ನವದೆಹಲಿ, ಡಿಸೆಂಬರ್ 02: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಏರಿಕೆ ದಾಖಲಿಸಿದ್ದ ಚಿನ್ನದ ಬೆಲೆಗಳು ಬುಧವಾರ ಇಳಿಕೆಗೊಂಡಿದೆ. ದುರ್ಬಲ ಜಾಗತಿಕ ಮಾರುಕಟ್ಟೆಗಳ ಸೂಚನೆಗಳ ನಡುವೆ ಎಂಸಿಎಕ್ಸ್‌ನಲ್ಲಿ ಫೆಬ್ರವರಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.24ರಷ್ಟು ಇಳಿಕೆಗೊಂಡು 48,449ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯು ಕೆಜಿಗೆ ಶೇಕಡಾ 1ರಷ್ಟು ಇಳಿಕೆಗೊಂಡು 62,559 ರೂಪಾಯಿಗೆ ತಲುಪಿದೆ. ಕಳೆದ ದಿನದ ವಹಿವಾಟಿನಲ್ಲಿ ಚಿನ್ನ-ಬೆಳ್ಳಿ ದರಗಳು ತೀಕ್ಷ್ಣ ಏರಿಕೆ ದಾಖಲಿಸಿತ್ತು. ಚಿನ್ನವು 10 ಗ್ರಾಂಗೆ ಶೇ. 1.4 ಅಥವಾ 700 ರೂಪಾಯಿ ಜಿಗಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 3,000 ರೂ. ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಗರಿಷ್ಠ 56,200 ಕ್ಕೆ ತಲುಪಿದಾಗಿನಿಂದ ಚಿನ್ನವು ಇಳಿಕೆಯತ್ತ ಮುಖಮಾಡಿದೆ.

ಕುಸಿದಿದ್ದ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಕೆಜಿಗೆ 1,900 ರೂಪಾಯಿ ಹೆಚ್ಚಳ

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆಯ ಆಶಾವಾದವು ಮಾರುಕಟ್ಟೆ ಮೇಲೆ ನಿರಂತರ ಪರಿಣಾಮವನ್ನು ಬೀರುತ್ತಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಕುಸಿದು 1,813.75 ಡಾಲರ್‌ಗೆ ತಲುಪಿದೆ.

      ಎಷ್ಟು ಬೇಕು ಚಿನ್ನ ? ಬಾರಿ ಬೆಲೆ ಇಳಿಕೆ | Oneindia Kannada

      ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.5ರಷ್ಟು ಕುಸಿದು 23.89 ಡಾಲರ್‌ಗೆ ತಲುಪಿದ್ದರೆ, ಪ್ಲ್ಯಾಟಿನಂ ಶೇ. 0.6ರಷ್ಟು ಇಳಿದು 994.00 ಡಾಲರ್ ಮತ್ತು ಪಲ್ಲಾಡಿಯಮ್ ಶೇ. 0.4ರಷ್ಟು ಇಳಿಕೆಯಾಗಿ 2,397.00 ಡಾಲರ್‌ಗೆ ಇಳಿಕೆಯಾಗಿದೆ.

      English summary
      Gold and silver prices in India down marginally on wednesday. Silver Rate dropped
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X