Gold and silver Price: ಚಿನ್ನ, ಬೆಳ್ಳಿ ದರ ಇಳಿಕೆ, ಯಾವ್ಯಾವ ನಗರದಲ್ಲಿ ಎಷ್ಟಿದೆ?
ಬೆಂಗಳೂರು, ನವೆಂಬರ್, 09: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಆದ್ರೆ ಇದರ ಬೆಲೆ ದಿನದಿಂದ ಗಗನಕ್ಕೆ ಏರುತ್ತಿದ್ದರಿಂದ ಜನರು ಈ ಕಡೆ ಗಮನ ಹರಿಸುವುದಿಲ್ಲ. ಇದನ್ನು ಬಿಟ್ಟರೆ ಮತ್ಯಾವ ಕಾರಣದಿಂದಲೂ ಚಿನ್ನದ ಮೇಲಿನ ವ್ಯಾಮೋಹವಂತೂ ಕಡಿಮೆಯಿರುವುದಿಲ್ಲ. ಅದರಲ್ಲೂ ಹಬ್ಬಗಳ ಸಮಯದಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ಕೊಳ್ಳಲು ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳೇ ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ನಿನ್ನೆಗಿಂತ ಇಂದು (ನವೆಂಬರ್ 9) ಚಿನ್ನ, ಬೆಳ್ಳಿ ಬಂಗಾರದ ದರ ಕಡಿಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿನ್ನೆಗಿಂದ ಇಂದು ಬೆಳ್ಳಿ, ಬಂಗಾರದ ದರ ಕಡಿಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಇದೀಗ ದೀಪಾವಳಿ ಹಬ್ಬವು ಸನಿಹದಲ್ಲಿದ್ದು, ಬಹುತೇಕರು ಚಿನ್ನ, ಬೆಳ್ಳಿ ಖರೀದಿಗೆ ಮುಂದಾಗಿರುತ್ತಾರೆ. ಹಾಗಾದರೆ ಚಿನ್ನ, ಬೆಳ್ಳಿ ಖರೀದಿಸುವ ಇಚ್ಚಿಸುವವರು ಯಾವ್ಯಾವ ನಗರದಲ್ಲಿ ಬೆಳ್ಳಿ, ಬಂಗಾರದ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ
1. 22 ಕ್ಯಾರಟ್ನ (10 ಗ್ರಾಂ) ಚಿನ್ನದ ಬೆಲೆ - 55,700 ರೂಪಾಯಿ
2. 24 ಕ್ಯಾರಟ್ನ (10 ಗ್ರಾಂ) ಚಿನ್ನದ ಬೆಲೆ - 60,760 ರೂಪಾಯಿ
3. 1 ಕೆಜಿ ಬೆಳ್ಳಿ ಬೆಲೆ - 72,500 ರೂಪಾಯಿ
ಪ್ರಸ್ತುತ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ ನಿನ್ನೆ (ನವೆಂಬರ್ 08) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 56,100 ರೂಪಾಯಿ ಇತ್ತು. ಆದರೆ ಇಂದು (ನವೆಂಬರ್ 09) 55,700 ರೂಪಾಯಿ ಆಗಿದ್ದು, ಇದನ್ನು ಗಮನಿಸಿದರೆ ನಿನ್ನೆಗಿಂತ ಇಂದು 400 ರೂಪಾಯಿ ಇಳಿಕೆ ಆಗಿದೆ ಎಂದು ತಿಳಿಯಬಹುದು.
ಇನ್ಮಿ ನಿನ್ನೆ (ನವೆಂಬರ್ 08) ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 61.200 ರೂಪಾಯಿ ಇತ್ತು. ಆದರೆ ಇಂದು 60,760 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 440 ಇಂದು ರೂಪಾಯಿ ಇಳಿಕೆ ಆಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ಎಷ್ಟಿದೆ?
1. ಬೆಂಗಳೂರು - 55,700 ರೂಪಾಯಿ
2. ಮುಂಬೈ: 55,700 ರೂಪಾಯಿ
3. ದೆಹಲಿ - 58,850 ರೂಪಾಯಿ
4. ಕೇರಳ - 55,700 ರೂಪಾಯಿ
5. ಅಹ್ಮದಾಬಾದ್: 55,750 ರೂಪಾಯಿ
6. ಜೈಪುರ್ - 55,850 ರೂಪಾಯಿ












Click it and Unblock the Notifications