ಬಂಗಾರ ದರ ಬಲು ದುಬಾರಿ
Gold Price on September 6: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದಲೂ ಕೊನೆವರೆಗೂ ಬೆಲೆ ಭರ್ಜರಿ ಇಳಿಕೆ ಆಗುತ್ತಲೇ ಬಂದಿತ್ತು. ಹಾಗಾದ್ರೆ, ಇಂದು (ಸೆಪ್ಟೆಂಬರ್ 6) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಸೆಪ್ಟೆಂಬರ್ 5) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 98,650 ರೂಪಾಯಿ ಇದ್ದರೆ, ಇಂದು (ಸೆಪ್ಟೆಂಬರ್ 6) 99,450 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,07,620 ರೂಪಾಯಿ ಇತ್ತು. ಇನ್ನು ಇಂದು 1,08,490 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 79,560 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 86,792
ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 99,450 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,08,490
ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 99,450 ರೂಪಾಯಿ
* ಚೆನ್ನೈ - 99,450 ರೂಪಾಯಿ
* ಮುಂಬೈ - 99,450 ರೂಪಾಯಿ
* ಕೋಲ್ಕತ್ತಾ - 99,450 ರೂಪಾಯಿ
* ನವದೆಹಲಿ - 99,600 ರೂಪಾಯಿ
* ಹೈದರಾಬಾದ್ - 99,450 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,08,490 ರೂಪಾಯಿ
* ಚೆನ್ನೈ - 1,08,490 ರೂಪಾಯಿ
* ಮುಂಬೈ - 1,08,490 ರೂಪಾಯಿ
* ಕೋಲ್ಕತ್ತಾ - 1,08,490 ರೂಪಾಯಿ
* ನವದೆಹಲಿ - 1,08,620 ರೂಪಾಯಿ
* ಹೈದರಾಬಾದ್ - 1,08,490 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,28,000 ರೂಪಾಯಿ (2,000 ಏರಿಕೆ)
* ಚೆನ್ನೈ - 1,38,000 ರೂಪಾಯಿ (2,000 ಏರಿಕೆ)
* ಮುಂಬೈ - 1,28,000 ರೂಪಾಯಿ (2,000 ಏರಿಕೆ)
* ಕೋಲ್ಕತ್ತಾ - 1,28,000 ರೂಪಾಯಿ (2,000 ಏರಿಕೆ)
* ನವದೆಹಲಿ - 1,28,000 ರೂಪಾಯಿ (2,000 ಏರಿಕೆ)
* ಹೈದರಾಬಾದ್ - 1,38,000 ರೂಪಾಯಿ (2,000 ಏರಿಕೆ)
ಬಂಗಾರ, ಬೆಳ್ಳಿ ದರಪಟ್ಟಿ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇನ್ನೂ ಈಗಾಗಲೇ ಶ್ರಾವಣ ಮಾಸ ಮುಗಿದಿದ್ದು, ದಸರಾ, ದೀಪಾವಳಿ ಹಬ್ಬಗಳು ಎಂಟ್ರಿ ಕೊಡಲಿವೆ. ಈ ಹಿನ್ನೆಲೆ ಈ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಬಂಗಾರ ದರ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ.












Click it and Unblock the Notifications