Gold Rate: ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್; ಚಿನ್ನದ ಬೆಲೆ ಕುಸಿತ ಮುಂದುವರಿದಿದೆ!
ಚಿನ್ನ ಪ್ರಿಯರಿಗೆ ಇದು ಖಂಡಿತವಾಗಿಯೂ ಖುಷಿಯ ಸುದ್ದಿ ಅಂತನೇ ಹೇಳಬಹುದು. ಯಾಕೆಂದರೆ, ಚಿನ್ನದ ಬೆಲೆಯ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಇನ್ನೇನು ಚಿನ್ನದ ಬೆಲೆ ಜಾಸ್ತಿಯಾಗಿ ನಾವೆಲ್ಲ ಚಿನ್ನ ಖರೀದಿ ಮಾಡೋದನ್ನೇ ಮರೆತು ಬಿಡಬೇಕು ಅಂತ ಜನ ಯೋಚನೆ ಮಾಡುವಾಗಲೇ ಚಿನ್ನದ ಬೆಲೆ ಇಳಿಕೆಯಾಗ್ತಿದೆ. ಚಿನ್ನದ ಬೆಲೆಯನ್ನು ನೋಡಿಯೇ ಬಹಳಷ್ಟು ಜನ ಚಿನ್ನ ಖರೀದಿ ಮಾಡೋದೇ ಬೇಡ. ಬಂಗಾರ ಬೆಲೆ ಕಡಿಮೆಯಾದಾಗ ನೋಡೋಣ ಅಂತಿದ್ದರು. ಆ ಸಮಯ ಈಗ ಬಂದಿದೆ. ಇಂದಿನ ಚಿನ್ನದ ಬೆಲೆಯ ನಿಖರ ವಿವರ ಇಲ್ಲಿದೆ.
ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದು ಆಪ್ಕಾಲದ ಸಂಪತ್ತು. ಆಸೆಯಿಂದ ತೆಗೆದುಕೊಳ್ಳುವ ಚಿನ್ನ & ಬೆಳ್ಳಿ ಯಾವುದೇ ಆಭರಣ ಇರಲಿ ಎಲ್ಲದಕ್ಕೂ ಒಂದು ಮುಂದಾಲೋಚನೆ ಇರುತ್ತೆ. ಕಷ್ಟ ಅಂತ ಬಂದಾಗ ಯಾರ ಬಳಿಯೂ ಕೈಚಾಚದೆ ನಮ್ಮ ಬಳಿ ಇರುವ ಬಂಗಾರವನ್ನು ಅಡಮಾನವೋ, ಮಾರಾಟವೋ ಮಾಡಿ ಹಣ ಗಳಿಸಲು ಇರುವ ಬೆಸ್ಟ್ ಮಾರ್ಗ ಚಿನ್ನ!. ಅದಕ್ಕೆ ಬಂಗಾರವನ್ನು ಎಲ್ಲಾ ಕಾಲದ ಬೆಸ್ಟ್ ಇನ್ವೆಸ್ಟ್‌ಮೆಂಟ್ ಅಂತಾರೆ.

ತುಂಬಾ ಹಳೆಯ ಮಾತೇನು ಅಲ್ಲ. ಈಚೆಗೆ 1ರಿಂದ 2 ವರ್ಷದ ಅವಧಿಯಲ್ಲಿ ಚಿನ್ನದ ಬೆಲೆ 30,000 ಸಾವಿರ ರೂಪಾಯಿಯಿಂದ 35,000 ಸಾವಿರ ರೂಪಾಯಿಯ ವರೆಗೆ ಹೆಚ್ಚಳವಾಗಿದೆ. ಚಿನ್ನದ ಬೆಲೆಯನ್ನು ನೋಡಿ, ಛೇ ಆಗಲೇ ಚಿನ್ನ ತಗೊಂಡಿದ್ರೆ ಚೆನ್ನಾಗಿತ್ತು. ತಪ್ಪು ಮಾಡಿ ಬಿಟ್ವಾ ಅಂತ ಕೊರಗುವ ಚಿನ್ನ ಪ್ರಿಯರೂ ಇದ್ದಾರೆ. ಅಚ್ಚರಿಯ ವಿಷಯವೇನೆಂದರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ವಿಷಯದಲ್ಲೂ ಇದು ನಿಜವಾಗಿದೆ.
ಇಂದಿನ ಚಿನ್ನದ ಬೆಲೆ ಎಷ್ಟು ?
ಚಿನ್ನದ ಬೆಲೆಯು ಮಂಗಳವಾರ (ನವೆಂಬರ್ 5ಕ್ಕಿಂತ) ಬುಧವಾರ (ನವೆಂಬರ್ 6ಕ್ಕೆ) ಇನ್ನಷ್ಟು ಇಳಿಕೆಯಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಶುದ್ಧ ಚಿನ್ನ 24 ಕ್ಯಾರೆಟ್ ಬಂಗಾರದ ಬೆಲೆ ಭಾರೀ ಅಲ್ಲದಿದ್ದರೂ ಸಣ್ಣ ಪ್ರಮಾಣದ ಬೆಲೆ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 100 ಗ್ರಾಂಗೆ 100 ರೂಪಾಯಿ ಇಳಿದಿದೆ. ನೆನ್ನೆ ಬರೋಬ್ಬರಿ 1,600 ರೂಪಾಯಿ ಇಳಿಕೆ ಆಗಿತ್ತು. ಈ ಮೂಲಕ ಎರಡು ದಿನಗಳಲ್ಲಿ 1,700 ರೂಪಾಯಿ ಚಿನ್ನದ ಬೆಲೆ ಕುಸಿದಂತಾಗಿದೆ.
ಶುದ್ಧ ಚಿನ್ನ ಬೆಲೆ ಇದೀಗ ಪ್ರತಿ 100 ಗ್ರಾಂಗೆ 8,02,300 ರೂಪಾಯಿ ಆಗಿದೆ. ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 80,230ಕ್ಕೆ ಕುಸಿತವಾಗಿದೆ. ಇನ್ನು 1 ಗ್ರಾಂ ಚಿನ್ನದ ಬೆಲೆಯು 8,023 ರೂಪಾಯಿ ಇದೆ. ಅಲ್ಲದೇ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಮಾರುಕಟ್ಟೆಯಲ್ಲಿ ಸಹ ಕುಸಿತ ಮುಂದುವರಿದಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆಯು ಇದೀಗ ಈಗ 100 ರೂಪಾಯಿ ಕುಸಿತ ಕಂಡಿದೆ. ಇದು ಮಂಗಳವಾರ 1,500 ರೂಪಾಯಿ ಕುಸಿತ ಕಂಡಿತ್ತು. ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆಯು 73,540 ರೂಪಾಯಿ ಆಗಿದೆ.
ಚಿನ್ನದ ಬೆಲೆಯಲ್ಲಿ ಏರಿಳಿತ: ಇನ್ನು ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಳಿತ ಆಗುತ್ತಲ್ಲೇ ಇದೆ. ಏಕಾಏಕಿ ಕೆಲವೊಮ್ಮೆ ಏರಿಕೆಯಾದರೆ ಇನ್ನೂ ಕೆಲವೊಮ್ಮೆ ದಿಢೀರ್ ಕುಸಿತ ಕಾಣ್ತಿದೆ. ಈಚೆಗೆ ಚಿನ್ನದ ಬೆಲೆ 80 ಸಾವಿರ ರೂಪಾಯಿ ಗಡಿ ತಲುಪಿತ್ತು. ಈ ಬೆಲೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನ ಒಂದು ಲಕ್ಷ ತಲುಪಲಿದೆ ಎಂದೇ ಅಂದಾಜಿಸಲಾಗಿತ್ತು. ಆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಚಿನ್ನದ ಬೆಲೆ ಇಳಿಕೆಯಾಗ್ತಿದೆ. ಇದು ಚಿನ್ನ ಪ್ರಿಯರಲ್ಲಿ ನಿಜಕ್ಕೂ ನಿರಾಳತೆ ಮೂಡಿಸಿದೆ.












Click it and Unblock the Notifications