ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ: ಎಷ್ಟು ರೂಪಾಯಿ ಕಡಿಮೆ?
ನವದೆಹಲಿ, ಡಿಸೆಂಬರ್ 23: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಸತತ ಎರಡನೇ ದಿನ ಹಳದಿ ಲೋಹದ ಬೆಲೆ ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,750 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 53,180 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 800 ರೂಪಾಯಿ ಕುಸಿದು 66,900 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 23: 46,600-50,830 (440 ರೂ. ಇಳಿಕೆ)
ಡಿಸೆಂಬರ್ 22: 47,000-51,270
ಡಿಸೆಂಬರ್ 21: 47,100-51,380
ಡಿಸೆಂಬರ್ 20: 46,810-51,060

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 23: 48,750-53,180
ಡಿಸೆಂಬರ್ 22: 49,150-53,610
ಡಿಸೆಂಬರ್ 21: 49,250-53,720
ಡಿಸೆಂಬರ್ 20: 48,970-53,410

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 23: 47,130-51,410 (150 ರೂ. ಇಳಿಕೆ)
ಡಿಸೆಂಬರ್ 22: 47,470-51,780
ಡಿಸೆಂಬರ್ 21: 47,690-52,030
ಡಿಸೆಂಬರ್ 20: 47,450-51,760

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 23: 48,770-49,770 (490 ರೂ. ಇಳಿಕೆ)
ಡಿಸೆಂಬರ್ 22: 49,260-50,260
ಡಿಸೆಂಬರ್ 21: 49,370-50,370
ಡಿಸೆಂಬರ್ 20: 48,720-49,720

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 23: 48,750-53,180 (430 ರೂ. ಇಳಿಕೆ)
ಡಿಸೆಂಬರ್ 22: 49,150-53,610
ಡಿಸೆಂಬರ್ 21: 49,250-53,720
ಡಿಸೆಂಬರ್ 20: 48,970-53,410

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 23: 49,030-53,000 (190 ರೂ. ಇಳಿಕೆ)
ಡಿಸೆಂಬರ್ 22: 49,220-53,190
ಡಿಸೆಂಬರ್ 21: 49,250-53,330
ಡಿಸೆಂಬರ್ 20: 49,160-53,120

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications