ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡಲು '0' ಒತ್ತಿ
ನವದೆಹಲಿ, ನವೆಂಬರ್ 26 : ಸ್ಥಿರ ದೂರವಾಣಿಯಿಂದಯಿಂದ ಮೊಬೈಲ್‌ಗೆ ಕರೆ ಮಾಡಲು ಇನ್ನು ಮುಂದೆ '0' ಸೇರಿಸಬೇಕು. ಜನವರಿ 15ರಿಂದ ಇದು ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.
ಲ್ಯಾಂಡ್ ಲೈನ್‌ನಿಂದ ಲ್ಯಾಂಡ್ ಲೈನ್, ಮೊಬೈಲ್‌ನಿಂದ ಮೊಬೈಲ್‌ಗೆ ಕರೆ ಮಾಡುವ ವಿಧಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ.
ಸ್ಥಿರ ದೂರವಾಣಿಯಿಂದ '0' ನಂಬರ್ ಒತ್ತದೆ ಮೊಬೈಲ್‌ಗೆ ಕರೆ ಮಾಡಿದರೆ ಆ ಕುರಿತು ಸಂದೇಶ ಪ್ರಸಾರವಾಗಲಿದೆ. ಮೊಬೈಲ್‌ನಿಂದ ಲ್ಯಾಂಡ್ ಲೈನ್‌ಗೆ ಕರೆ ಮಾಡುವ ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ.

ಈ ಕ್ರಮದಿಂದ ಸುಮಾರು 2,539 ಮಿಲಿಯನ್ ಸಂಖ್ಯೆಯ ಸರಣಿ ಸಷ್ಟಿಯಾಗುತ್ತದೆ. ಇದರಿಂದಾಗಿ ಅರ್ಜಿದಾರರಿಗೆ ಪೋನ್ ನಂಬರ್ ನೀಡಲು ಸಹಾಯಕವಾಗಲಿದೆ ಎಂದು ಇಲಾಖೆ ಹೇಳಿದೆ.
ಭಾರತದಲ್ಲಿ 10 ಅಂಕೆಯ ನಂಬರ್ ನೀಡುವ ನೀತಿಯಿದ್ದು '0' ಮತ್ತು '1'ರಿಂದ ಆರಂಭವಾಗುವ ನಂಬರ್‌ಗಳನ್ನು ವಿಶೇಷ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಹೊಸ ಯೋಜನೆಯಿಂದ ಸುಮಾರು 800 ಕೋಟಿ ನಂಬರ್‌ಗಳು ದೊರಕುತ್ತವೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications