Get Updates
Get notified of breaking news, exclusive insights, and must-see stories!

Gold Atm: ಎಟಿಎಂನಿಂದ ಇನ್ಮುಂದೆ ಚಿನ್ನ ಮಾರಾಟ - ಖರೀದಿ ಮಾಡಬಹುದು, ದಕ್ಷಿಣ ಭಾರತದ ಈ ನಗರದಲ್ಲಿ ಮೊದಲ ಪ್ರಯೋಗ

ಹೈದರಾಬಾದ್: ಭಾರತೀಯರಿಗೆ ಚಿನ್ನದ ಬಗ್ಗೆ ವಿಶೇಷ ಒಲವು ಇದೆ. ಭಾರತೀಯರು ಚಿನ್ನದ ಖರೀದಿ ಮಾಡುವುದರ ಹಿಂದಿನ ಉದ್ದೇಶಗಳಲ್ಲಿ ಸಂಕಷ್ಟದ ಕಾಲದಲ್ಲಿ ಚಿನ್ನದಿಂದ ಸಹಾಯವಾಗಲಿದೆ. ಸಂಕಷ್ಟದ ಸಮಯದಲ್ಲಿ ಚಿನ್ನವನ್ನು ಅಡಮಾನ ಇರಿಸಿ, ಹಣ ಪಡೆಯಬಹುದು ಎನ್ನುವುದು ಸಹ ಇದರಲ್ಲಿ ಒಂದು. ಇದೀಗ ಚಿನ್ನವನ್ನು ಅಡಮಾನ ಇರಿಸುವುದಕ್ಕೆ ಸಂಬಂಧಿಸಿದಂತೆ ಎಟಿಎಂ ಪರಿಚಯಿಸಲಾಗಿದೆ. ಎಲ್ಲಿ ಹಾಗೂ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ತಂತ್ರಜ್ಞಾನವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದೀಗ ಚಿನ್ನ ಮಾರಾಟ ಮಾಡುವುದಕ್ಕೆ ದಕ್ಷಿಣ ಭಾರತದ ಪ್ರಮುಖ ನಗರದಲ್ಲಿ ಎಟಿಎಂ ಪರಿಚಯಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಬ್ಯಾಂಕಿಂಗ್‌ನಿಂದ ಆನ್‌ಲೈನ್ ಪಾವತಿಗಳವರೆಗೆ ಈಗ ಎಲ್ಲವೂ ಬದಲಾಗಿದೆ. ಅತಿ ಕಡಿಮೆ ವಿಷಯಗಳಿಗೆ ನೀವು ಬ್ಯಾಂಕ್‌ಗೆ ಹೋದರೆ ಸಾಕು. ಚಿನ್ನವನ್ನು ಸಹ ಸುರಕ್ಷತೆ ಹಾಗೂ ಕಡಿಮೆ ಬಡ್ಡಿದರಕ್ಕೆ ಬ್ಯಾಂಕ್‌ಗಳಲ್ಲಿ ಜನ ಅಡಮಾನ ಇರಿಸುವುದು ಇದೆ. ಆದರೆ ಇನ್ಮುಂದೆ ಚಿನ್ನ ಅಡಮಾನ ಇರಿಸುವುದಕ್ಕೂ ನೀವು ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇಲ್ಲ. ನೀವು ಎಟಿಎಂನ ಮೂಲಕವೇ ಚಿನ್ನವನ್ನು ಅಡಮಾನ ಇರಿಸಿಕೊಳ್ಳಬಹುದಾಗಿದೆ.

First Gold ATM Hyderabad Making Instant Gold Buying and Selling Possible Good News For Gold Lovers Know More

ಎಟಿಎಂ ಮೂಲಕ ಚಿನ್ನವನ್ನು ಮಾರಾಟ ಮಾಡುವುದು ಮತ್ತು ಹಣವನ್ನು ಪಡೆಯವಷ್ಟೇ ಈಗ ಸುಲಭವಾಗಿದೆ. ತೆಲಂಗಾಣದ ಹೈದರಾಬಾದ್ ಮೂಲದ ಫಿನ್‌ಟೆಕ್ ಗೋಲ್ಡ್‌ಸಿಕ್ಕಾ (Goldsikka) ಎನ್ನುವ ಕಂಪನಿಯು ಭಾರತದ ಮೊದಲ AI-ಚಾಲಿತ ಗೋಲ್ಡ್-ಮೆಲ್ಟಿಂಗ್ ಎಟಿಎಂ ಪರಿಚಯಿಸಿದೆ. ಇದು ಭಾರತದ ಮೊದಲ AI-ಚಾಲಿತ ಚಿನ್ನದ ಎಟಿಎಂ ಆಗಿದೆ. ಈ ಯಂತ್ರವು ಜನರು ತಮ್ಮ ಹಳೆಯ ಚಿನ್ನವನ್ನು ಮಾರಾಟ ಮಾಡುವುದಕ್ಕೆ ಸಹಕಾರಿಯಾಗಿದೆ. ಅಲ್ಲದೇ ಕೆಲವೇ ನಿಮಿಷಗಳಲ್ಲಿ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಚಿನ್ನ ಮಾರಾಟದ ಹಣ ವರ್ಗಾವಣೆ ಆಗಲಿದೆ.

ಬ್ಯಾಂಕ್‌ಗಳಿಗೆ ಅಲೆಯದೆ, ಆಭರಣ ಅಂಗಡಿಗಳಿಗೆ ಭೇಟಿ ನೀಡದೆ ಅಥವಾ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸದೆ ನೀವು ಕೆಲವೇ ನಿಮಿಷಗಳಲ್ಲಿ ನೀವು ಚಿನ್ನವನ್ನು ಮಾರಾಟ ಮಾಡಿ, ಅದಕ್ಕೆ ಸರಿ ಸಮಾನವಾದ ಹಣವನ್ನು ಪಡೆದುಕೊಳ್ಳಬಹುದು. ಅಲ್ಲದೇ ಈ ಹಣವು ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲಿದೆ. ಕೇವಲ 30 ನಿಮಿಷಗಳಲ್ಲಿ ನಗದು ರೂಪದಲ್ಲಿ ಚಿನ್ನ ಪರಿವರ್ತಿಸಲಾಗುತ್ತದೆ.

ಚಿನ್ನದ ಎಟಿಎಂ ಹೇಗೆ ಕೆಲಸ ಮಾಡುತ್ತದೆ ?

ಚಿನ್ನದ ಎಟಿಎಂ ಬಹುತೇಕ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವುದು ಹಾಗೂ ಹಣ ಡಿಪೋಸಿಟ್ ಮಾಡುವ ಮಾದರಿಯಲ್ಲಿಯೇ ಕೆಲಸ ಮಾಡುತ್ತದೆ. ಚಿನ್ನವನ್ನು ಕರಗಿಸಿ ನಂತರ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಹಣ ನೀಡಲಾಗುತ್ತದೆ.

ಚಿನ್ನವನ್ನು ಕರಗಿಸುವಿಕೆ: ಗ್ರಾಹಕರು ಚಿನ್ನವನ್ನು ಯಂತ್ರದೊಳಗೆ ಇರಿಸಿದ ತಕ್ಷಣ, ಅದು ಕರಗುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

AI ತಂತ್ರಜ್ಞಾನ ಆಧಾರಿತ ಚಿನ್ನದ ಶುದ್ಧತೆ ಪರಿಶೀಲನೆ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಹಸ್ತಚಾಲಿತ ಹಸ್ತಕ್ಷೇಪವಿಲ್ಲದೆ ಚಿನ್ನದ ಶುದ್ಧತೆ ಮತ್ತು ತೂಕವನ್ನು ನಿಖರವಾಗಿ ಮೌಲ್ಯಮಾಪನ ಮಾಡಲಿದೆ.

ತಕ್ಷಣವೇ ಹಣ ಪಾವತಿ: ಚಿನ್ನದ ಗುಣಮಟ್ಟ ಮತ್ತು ಪ್ರಸ್ತುತ ಮಾರುಕಟ್ಟೆ ದರವನ್ನು ಆಧರಿಸಿ, ಚಿನ್ನದ ಬೆಲೆಯನ್ನು ತಕ್ಷಣವೇ ಲೆಕ್ಕಹಾಕಲಾಗುತ್ತದೆ. ಅಂತಿಮ ಮೊತ್ತದ ಹಣವನ್ನು ಕೇವಲ ಅರ್ಧ ಗಂಟೆಯೊಳಗೆ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಚಿನ್ನ ಖರೀದಿಯನ್ನೂ ಮಾಡಬಹುದು

ಇನ್ನು ಹೊಸ ಎಟಿಎಂನ ಮೂಲಕ ನೀವು ಕೇವಲ ಚಿನ್ನವನ್ನು ಮಾರಾಟ ಮಾಡುವುದು ಮಾತ್ರವಲ್ಲ ಖರೀದಿಯನ್ನೂ ಮಾಡುವುದಕ್ಕೆ ಅವಕಾಶ ಇರಲಿದೆ. ಇದಲ್ಲದೆ, ಗ್ರಾಹಕರು 0.5 ಗ್ರಾಂ ನಿಂದ 100 ಗ್ರಾಂ ವರೆಗಿನ ಚಿನ್ನದ ನಾಣ್ಯಗಳನ್ನು ಎಟಿಎಂನಿಂದ ನೇರವಾಗಿ ಖರೀದಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಈ ಸೇವೆಯು 24/7 ಲಭ್ಯವಿದೆ ಯಾವುದೇ ಸಮಯದಲ್ಲಿ ಚಿನ್ನವನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ಡಿಜಿಟಲೀಕರಣಗೊಳಿಸಲು ಅವಕಾಶ ಇರಲಿದೆ. ಮೊದಲ ಹಂತದಲ್ಲಿ ಇದನ್ನು ಹೈದರಾಬಾದ್‌ನಲ್ಲಿ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶದ 100 ಪ್ರಮುಖ ಪ್ರದೇಶಗಳಲ್ಲಿ ಈ ಎಟಿಎಂ ಅನ್ನು ವಿಸ್ತರಿಸುವ ಉದ್ದೇಶವನ್ನು ಹಾಕಿಕೊಂಡಿರುವುದಾಗಿ ಸಂಸ್ಥೆ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+