ಶೀಘ್ರದಲ್ಲಿ ನಿಮ್ಮ ಮೊಬೈಲ್ ನಂಬರ್ 11 ಅಂಕಿಗೆ ಬದಲಾವಣೆ!

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 12: ತಂತ್ರಜ್ಞಾನ, ತರಂಗಗುಚ್ಛ ವಿಸ್ತಾರಗೊಳ್ಳುತ್ತಿದ್ದಂತೆ ಮೊಬೈಲ್ ಫೋನ್ ಸಂಖ್ಯೆಯನ್ನು 10 ರಿಂದ 11 ಅಂಕಿಗಳಿಗೆ ಬದಲಾಯಿಸಲು ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

ದೂರಸಂಪರ್ಕ ಇಲಾಖೆಯು 2003ರಲ್ಲಿ 30 ವರ್ಷಗಳ ಚಾಲ್ತಿಯಲ್ಲಿರುವಂತೆ 10 ಡಿಜಿಟ್ ನಂಬರ್ ಗಳ ಮೊಬೈಲ್ ಸಂಖ್ಯೆಗಳಿಗೆ ಅನುಮೋದನೆ ನೀಡಿತ್ತು.

mobilephone

ಆದರೆ, ಗ್ರಾಹಕರ ಸಂಖ್ಯೆ, ಮೊಬೈಲ್ ಪೀಳಿಗೆ ಸುಧಾರಣೆಗೊಂಡಿದೆ, ನಿರೀಕ್ಷೆಗೂ ಮೀರಿದ ಬ್ಯಾಂಡ್ ವಿಡ್ತ್ ನಿಯಂತ್ರಿಸಲು ಹೊಸ ವ್ಯವಸ್ಥೆ ಅನಿವಾರ್ಯವಾಗಿದೆ. ಕೂಡಲೇ ದೂರಸಂಪರ್ಕ ಇಲಾಖೆ ತನ್ನ ನೀತಿಯನ್ನು ಪರಾಮರ್ಶಿಸಿ, 11 ಡಿಜಿಟರ್ ನಂಬರಿಂಗ್ ವ್ಯವಸ್ಥೆ ಜಾರಿಗೊಳಿಸಲು ಆದೇಶ ಹೊರಡಿಸುವ ಸಾಧ್ಯತೆಯಿದೆ,

ರಿಲಯನ್ಸ್ ಸಂಸ್ಥೆ ಯನ್ನ ತನ್ನ ಜಿಯೋ 'ವೆಲ್‍ಕಮ್ ಆಫರ್' ಮೂಲಕ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಗ್ರಾಹಕರನ್ನು ಸಂಪಾದಿಸಿತ್ತು. 16 ಮಿಲಿಯನ್ ಗೂ ಅಧಿಕ ಚಂದಾದಾರರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿದ ಸುದ್ದಿ ಓದಿರಬಹುದು. ಗ್ರಾಹಕರ ಬಳಕೆ ಹೆಚ್ಚಿದಂತೆ ಅದನ್ನು ನಿಭಾಯಿಸಲು ದೂರಸಂಪರ್ಕ ಇಲಾಖೆ ಈ ರೀತಿ ವ್ಯವಸ್ಥೆಗೆ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of Telecom soon to implement 11-digit mobile numbering system?The Department of Telecom (DoT) has decided to rule out 10-digit mobile numbers and is considering to implement an 11-digit numbering system soon.
Please Wait while comments are loading...