ಸಾಲಗಾರ ವಿಜಯ್ ಮಲ್ಯ ಘೋಷಿತ ಅಪರಾಧಿ?

Written By:
Subscribe to Oneindia Kannada

ಮುಂಬೈ, ಜೂನ್. 11: ಸಾಕಷ್ಟು ಸಾಲ ಮಾಡಿ ಮರೆಯಾಗಿರುವ ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಫೋಷಣೆ ಮಾಡಬೇಕು ಎಂದು ಜಾರಿ ನಿರ್ದೇಶನಾಲಯ ಮುಂಬೈ ಕೋರ್ಟ್ ವೊಂದರ ಮೊರೆ ಹೋಗಿದೆ. ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ನ್ಯಾಯಾಲಯದ ಮೊರೆ ಹೋಗಿದೆ.

ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ನ್ಯಾಯಾಲಯ ನೀಡಿರುವ ಯಾವ ಸಮಸ್ಸ್ ಗಳಿಗೂ ಮಲ್ಯ ಸಮರ್ಪಕ ಉತ್ತರ ನೀಡಿಲ್ಲ ಈ ಎಲ್ಲ ಕಾರಣ ಇಟ್ಟುಕೊಂಡು ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣನೆ ಮಾಡಬೇಕು ಎಂದು ಇಡಿ ಒತ್ತಾಯ ಮಾಡಿದೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

 vijay mallya

ಸಿಬಿಐ ಮತ್ತು ಇಡಿ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿವೆ. ಐಡಿಬಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿಕೊಂಡ ಮಲ್ಯ ಸದ್ಯ ಇಂಗ್ಲೆಂಡ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಈ ಅರ್ಜಿಯ ಕುರಿತು ಜೂನ್‌ 13ರಂದು ಕೋರ್ಟ್‌ ತನ್ನ ಆದೇಶ ಪ್ರಕಟಿಸುವ ಸಾಧ್ಯತೆ ಇದೆ. ಸೆಕ್ಷನ್‌ 82ರ ಅಡಿಯಲ್ಲಿ ನ್ಯಾಯಾಲಯ ಘೋಷಿತ ಅಪರಾಧಿಯನ್ನಾಗಿಸಿದರೆ, ಅಪರಾಧಿ 30 ದಿನಗಳೊಳಗೆ ಪ್ರಕರಣದ ವಿಚಾರಣೆಗೆ ಹಾಜರಾಗಲೇಬೇಕು ಎಂಬ ನಿಯಮ ಇದೆ.[ಲಂಡನ್ನಿನಲ್ಲಿ ಮಗನ ಜತೆ ಮಲ್ಯ, ವಿಡಿಯೋ ಟ್ರೆಂಡಿಂಗ್]

ಬೆಂಗಳೂರು ರಾಯ್ಲ್ ಚಾಲೆಂಜರ್ಸ್ ಮತ್ತು ಹೈದರಾಬಾದ್ ತಂಡಗಳ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯವನ್ನು ಮಲ್ಯ ತಮ್ಮ ಮಗ ಸಿದ್ಧಾರ್ಥ ಮಲ್ಯ ಅವರೊಂದಿಗೆ ವೀಕ್ಷಣೆ ಮಾಡುತ್ತ ಎಂಜಾಯ್ ಮಾಡುತ್ತಿದ್ದ ಕ್ಷಣಗಳು ವೈರಲ್ ಆಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Enforcement Directorate has moved a court in Mumbai to declare Vijay Mallya a proclaimed offender. The application was filed before the special anti money laundering court today by the ED. In the application the ED has sought to declare Mallya a proclaimed offender.
Please Wait while comments are loading...