ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ, ವಿವರ ಇಲ್ಲಿದೆ
ನವದೆಹಲಿ, ಜೂನ್ 25: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಜುಲೈ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಜುಲೈ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್ ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ರಜಾ ದಿನಗಳು ಹೆಚ್ಚಾಗಿವೆ. ಆದರೆ 15 ರಜೆಗಳ ಪೈಕಿ 9 ವಿವಿಧ ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ.
ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.
ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಬ್ಯಾಂಕ್ ಕಚೇರಿಗಳು ಬಂದ್ ಆಗಿದ್ದರೂ, ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
| ಜುಲೈ 2021ರಲ್ಲಿ ಬ್ಯಾಂಕ್ ರಜಾ ದಿನ | |||
|---|---|---|---|
| ದಿನ | ದಿನಾಂಕ | ರಜಾ ದಿನ | ನಗರ |
| ಜುಲೈ 12, 2021 | ಸೋಮವಾರ | ಕಂಗ್, ರಥಯಾತ್ರೆ | ರಾಜಸ್ಥಾನ, ಭುವನೇಶ್ವರ, ಇಂಫಾಲ್ |
| ಜುಲೈ 13 | ಮಂಗಳವಾರ | ಭಾನು ಜಯಂತಿ, ಹುತಾತ್ಮ ದಿನ | ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ |
| ಜುಲೈ 14 | ಬುಧವಾರ | ದ್ರುಪ್ಕ ಶೆಚಿ | ಗ್ಯಾಂಗ್ ಟಕ್ |
| ಜುಲೈ 16 | ಗುರುವಾರ | ಹರೇಲಾ ಪೂಜಾ | ಡೆಹ್ರಾಡೂನ್ |
| ಜುಲೈ 17 | ಶುಕ್ರವಾರ | ಖರಚಿ ಪೂಜಾ | ಅಗರ್ತಲ, ಶಿಲ್ಲಾಂಗ್ |
| ಜುಲೈ 21 | ಮಂಗಳವಾರ | ಈದ್ ಅಲ್ ಅಧಾ | ಭಾರತದೆಲ್ಲೆಡೆ |
| ಜುಲೈ 31 | ಶನಿವಾರ | ಕೇರ್ ಪೂಜಾ | ಅಗರ್ತಲ |
ಮೇಲ್ಕಂಡ ದಿನಾಂಕಗಳಲ್ಲದೆ, ಜುಲೈ 4 (ಭಾನುವಾರ), ಜುಲೈ 10 (2ನೇ ಶನಿವಾರ), ಜುಲೈ 11 (ಭಾನುವಾರ), ಜುಲೈ 18 (ಭಾನುವಾರ), ಜುಲೈ 24 (4ನೇ ಶನಿವಾರ), ಜುಲೈ 25 (ಭಾನುವಾರ) ರಂದು ರಜೆ ಇರಲಿದೆ.












Click it and Unblock the Notifications