Gold Price: ಚಿನ್ನದ ಬೆಲೆ ಕೊಂಚ ಇಳಿಕೆ, ಗಗನಕ್ಕೇರಿದ ಬೆಳ್ಳಿ ದರ
ಬೆಂಗಳೂರು, ಮಾರ್ಚ್ 31: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. ಎರಡಂಕಿಯ ಸಂಖ್ಯೆಯ ರೂಪಾಯಿಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದು, ಬೆಳ್ಳಿ ಬೆಲೆಯೂ ಕೂಡ ಕೊಂಚ ಹೆಚ್ಚಾಗಿದೆ.
ಯುಗಾದಿ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಶುಭಕಾರ್ಯಗಳು ಕೂಡ ಭರದಿಂದ ಸಾಗುತ್ತಿದ್ದು, ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಶುಭ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 62,750 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 68,450 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,800 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್ 1) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,275 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 6,845 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 62,750 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 68,450 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 50,200 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 54,760 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು-62,750 ರೂಪಾಯಿ
* ಚೆನ್ನೈ- 63,700 ರೂಪಾಯಿ
*ಮುಂಬೈ- 62,750 ರೂಪಾಯಿ
* ಕೇರಳ - 62,750 ರೂಪಾಯಿ
* ಕೋಲ್ಕತ್ತಾ -62,750 ರೂಪಾಯಿ
* ಜೈಪುರ್- 62,900 ರೂಪಾಯಿ
* ಭುವನೇಶ್ವರ್- 62,750 ರೂಪಾಯಿ
*ಅಹ್ಮದಾಬಾದ್-62,800 ರೂಪಾಯಿ
*ಲಕ್ನೋ-62,900 ರೂಪಾಯಿ
* ನವದೆಹಲಿ- 62,900 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 7,700 ರೂಪಾಯಿ
* ಚೆನ್ನೈ- 8,100 ರೂಪಾಯಿ
* ಮುಂಬೈ-7,800 ರೂಪಾಯಿ
* ಕೋಲ್ಕತ್ತಾ- 7,800 ರೂಪಾಯಿ
* ನವದೆಹಲಿ- 7,800 ರೂಪಾಯಿ












Click it and Unblock the Notifications