Gold Price Today: ಅಕ್ಷಯ ತೃತೀಯಕ್ಕೆ ಕೈಯಲ್ಲಿ ಇಷ್ಟು ಲಕ್ಷ ಇದ್ದರಷ್ಟೇ ಸಿಗುತ್ತೆ ಚಿನ್ನ! ಎಷ್ಟಿದೆ ಇಂದಿನ ದರ?
ಚಿನ್ನದ ಹಬ್ಬ ಅಕ್ಷಯ ತೃತೀಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಆಭರಣ ಪ್ರಿಯರ ಚಿತ್ತ ಚಿನ್ನದ ದರದತ್ತ ನೆಟ್ಟಿದೆ. ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಕಾಣುತ್ತಿದ್ದು, ಮಧ್ಯಮವರ್ಗದ ಜನರಿಗೆ ಗಗನಕುಸುಮವಾಗುತ್ತಿದೆ. ಇನ್ನು ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಬೇಕು ಎಂದು ಕನಸು ಕಂಡಿದ್ದವರಿಗೆ ಇತ್ತೀಚಿನ ದರ ಏರಿಕೆಯು ಬಿಗ್ ಶಾಕ್ ನೀಡಿದೆ. ಈಗೆಲ್ಲ ಲಕ್ಷ ಇದ್ದರೆ ಚಿನ್ನ ಎನ್ನುವ ಮಾತು ಕೂಡ ಜನರ ಬಾಯಲ್ಲಿ ಕೇಳಿಬರುತ್ತಿದೆ. ಇನ್ನು ಇಂದಿನ ಚಿನ್ನ ಹಾಗೂ ಬೆಳ್ಳಿ ದರಗಳು ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ನೋಡುವುದಾದರೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,821 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನಕ್ಕೆ 9,002 ರೂಪಾಯಿ ಹಾಗೂ 999 ಚಿನ್ನ ಎಂದೂ ಕರೆಯುವ 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ 7,366 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,002 ರೂಪಾಯಿ, 8 ಗ್ರಾಂ.ಗೆ 72,016 ರೂಪಾಯಿ, 10 ಗ್ರಾಂ.ಗೆ 90,020 ರೂಪಾಯಿ ಇದ್ದರೆ, 100 ಗ್ರಾಂ ಚಿನ್ನದ ದರ 9,00,200 ರೂಪಾಯಿ ಇದೆ. ಸದ್ಯಕ್ಕೆ ದರಗಳು ಯತಾಸ್ಥಿತಿಯಲ್ಲೇ ಮುಂದುವರಿದಿದ್ದು, ಯಾವುದೇ ಏರಿಕೆ ಕಂಡುಬಂದಿಲ್ಲ.
ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ.ಗೆ 9,821 ರೂಪಾಯಿ, 8 ಗ್ರಾಂ.ಗೆ 78,568 ರೂಪಾಯಿ, 10 ಗ್ರಾಂ.ಗೆ 98,210 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 9,82,100 ರೂಪಾಯಿ ಇದೆ. 18 ಕ್ಯಾರೆಟ್ ಚಿನ್ನದ ದರವು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 7,366 ರೂಪಾಯಿ ಇದೆ. 8 ಗ್ರಾಂ.ಗೆ 58,928 ರೂಪಾಯಿ, 10 ಗ್ರಾಂ.ಗೆ 73,660 ರೂಪಾಯಿ ಹಾಗೂ 100 ಗ್ರಾಂಗೆ 7,36,600 ಇದೆ. ಸದ್ಯಕ್ಕೆ ದರಗಳು ಸ್ಥಿರವಾಗಿದ್ದು ಗ್ರಾಹಕರು ನಿಟ್ಟುಸಿರುಬಿಟ್ಟಿದ್ದಾರೆ.

ಏಪ್ರಿಲ್ 17ರಂದು 22 ಕ್ಯಾರೆಟ್ ಚಿನ್ನದ ದರ 8,920 ರೂಪಾಯಿ ಆಗಿತ್ತು. 24 ಕ್ಯಾರೆಟ್ ಚಿನ್ನದ ದರ 9,731ಕ್ಕೆ ತಲುಪಿತ್ತು. ಏಪ್ರಿಲ್ 22ರ ವೇಳೆಗೆ 22 ಕ್ಯಾರೆಟ್ ಚಿನ್ನ 9,290ಕ್ಕೆ ಜಿಗಿದಿತ್ತು. 24 ಕ್ಯಾರೆಟ್ ಚಿನ್ನದ ದರ ಕೂಡ 10,135 ರೂಪಾಯಿಗೆ ಭಾರಿ ಏರಿಕೆ ಕಂಡಿತ್ತು. ಕಳೆದ ಹತ್ತು ದಿನಗಳಿಂದಲೂ ಚಿನ್ನದ ದರದಲ್ಲಿ ಏರಿಳಿತ ಕಂಡುಬರುತ್ತಿದೆ. ಏಪ್ರಿಲ್ 30ರಂದು ಅಕ್ಷಯ ತೃತೀಯ ಇರುವುದರಿಂದ ಈ ಮುಂದಿನ ಮೂರು ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಬೆಳ್ಳಿ ದರವೂ ಯತಾಸ್ಥಿತಿ
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 101.90 ರೂಪಾಯಿ ಇದೆ. ಪ್ರತಿ ಕೆ.ಜಿಗೆ 1,01,900 ರೂಪಾಯಿ ಆಗಿದೆ. ಇನ್ನು ಪ್ರತಿ 8 ಗ್ರಾಂ ಬೆಳ್ಳಿಯು 815.20 ರೂಪಾಯಿ ಇದ್ದರೆ, 10 ಗ್ರಾಂ.ಗೆ 1,019 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ 10,190 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ದರ 1,01,900 ರೂಪಾಯಿ ಆಗಿದೆ. ಬೆಳ್ಳಿ ದರ ಕೂಡ ಯತಾಸ್ಥಿತಿಯಲ್ಲಿದೆ.
-
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications