Akshaya Tritiya 2025: ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಬೇಕೇ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್!
Akshaya Tritiya 2025: ದೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ಇನ್ನು ಇದೇ ತಿಂಗಳು 30ರಂದು ಅಕ್ಷಯ ತೃತೀಯ ಇದೆ. ಈ ಬಾರಿ ಅಕ್ಷಯ ತೃತೀಯ ಚಿನ್ನ ಪ್ರಿಯರಿಗೆ ಹಾಗೂ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಸ್ವಲ್ಪ ಸಿಹಿ ಹಾಗೂ ಸ್ವಲ್ಪ ಕಹಿ ತಂದಿದೆ ಅಂತಲೇ ಹೇಳಬಹುದು. ಆದರೆ, ಬಂಗಾರ ಪ್ರಿಯರ ಆತಂಕವನ್ನು ದೂರ ಮಾಡುವುದಕ್ಕೆ ಚಿನ್ನದ ಮಳಿಗೆಗಳು ಹಾಗೂ ಚಿನ್ನದ ಉದ್ಯಮಿಗಳು ಮುಂದಾಗಿದ್ದಾರೆ. ಅಕ್ಷಯ ತೃತೀಯದಂದು ಹಲವು ಆಫರ್‌ಗಳನ್ನು ನೀಡಿದ್ದು. ಚಿನ್ನ ಪ್ರಿಯರಿಗೆ ಚಿನ್ನ ಖರೀದಿಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ಸಹ ನೀಡಲಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದಕ್ಕೆ ಕೊಟ್ಟಿರುವ ಆಫರ್ ಏನು, ಬೆಲೆ ಏರಿಕೆಯಾದರೂ ಚಿನ್ನ ಖರೀದಿ ಹೇಗಿದೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಚಿನ್ನದ ಬೆಲೆಯು ಏಪ್ರಿಲ್ 25ಕ್ಕೆ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 98,240 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯು 9,824 ರೂಪಾಯಿ ಆಗಿದೆ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ, ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಬೇಕು ಎನ್ನುವುದು ಬಹುತೇಕ ಜನರ ಆಸೆಯಾಗಿರುತ್ತದೆ. ಅಂದು ಚಿನ್ನ ಖರೀದಿ ಮಾಡಿದರೆ, ಶುಭವಾಗುತ್ತದೆ ಹಾಗೂ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಹಿಂದೂಗಳಲ್ಲಿದೆ. ಆದರೆ, ಇದೀಗ ಚಿನ್ನದ ಬೆಲೆಯು ಬರೋಬ್ಬರಿ 1,00,000 ಲಕ್ಷ ರೂಪಾಯಿ ಮುಟ್ಟಿದೆ. ಹೀಗಾಗಿ, ಚಿನ್ನ ಖರೀದಿ ಮಾಡುವುದು ಹೇಗೆ ಎಂದು ಚಿನ್ನದ ಪ್ರಿಯರು ಚಿಂತಿಸುತ್ತಿದ್ದಾರೆ.

ಹೊಸ ಮಾದರಿ ಹಾಗೂ ಸಣ್ಣ ಡಿಸೈನ್ಸ್ ಚಿನ್ನ: ಅಕ್ಷಯ ತೃತೀಯಗೆ ಚಿನ್ನದ ವ್ಯಾಪಾರಿಗಳು ಹಾಗೂ ಮಳಿಗೆಗಳು ಗುಡ್‌ನ್ಯೂಸ್ ನೀಡಿವೆ. ರೇಟ್ ಎಷ್ಟೇ ಜಾಸ್ತಿಯಾದರೂ ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಯನ್ನು ಸಂಪತ್ತು ಎಂದು ತಿಳಿದುಕೊಂಡು ಆ ದಿನ ಚಿನ್ನ ಮತ್ತು ಬೆಳ್ಳಿಯನ್ನು ಜನ ಖರೀದಿ ಮಾಡುತ್ತಾರೆ. ಮನೆಗೆ ಬರಮಾಡಿಕೊಳ್ಳಬೇಕು ಎಂದು ಜನ ಕಳೆದ ಒಂದು ತಿಂಗಳಿಂದಲೇ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಅಂದು ಹೆಚ್ಚು ಜನ ಸೇರುವುದರಿಂದ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ ಎಂದು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಪ್ರೆಸಿಡೆಂಟ್ & ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಅವರು ಹೇಳಿದ್ದಾರೆ.
ಈ ಬಾರಿ ಹೆಚ್ಚು ಲೈಟ್‌ವೈಟ್ ಗೋಲ್ಡ್ ಹಾಗೂ ಜ್ಯುವೆಲ್ಲರಿಗಳನ್ನು ಹೆಚ್ಚಾಗಿ ಪರಿಚಯಿಸಲಾಗಿದೆ. ನಕಾಶಿ (Antique Nakshi Jewellery) ಜ್ಯುವೆಲ್ಲರಿ, ಟೆಂಪಲ್ ಜ್ಯುವೆಲ್ಲರಿ ಸೇರಿದಂತೆ ವಿವಿಧ ಮಾದರಿಗಳನ್ನು ಪರಿಚಯಿಸಲಾಗಿದೆ. ಅಲ್ಲದೇ ಡೈಮಂಡ್‌ನಲ್ಲೂ ಲೈಟ್‌ವೈಟ್ ಆಭರಣಗಳನ್ನು ಪರಿಚಯಿಸಲಾಗಿದೆ. 1 ಲಕ್ಷ ರೂಪಾಯಿಗೆಲ್ಲ ವಜ್ರದ ಸರ ಸಿಗುತ್ತದೆ. ಚಿನ್ನಾಭರಣಗಳ ಬೆಲೆ ಹೆಚ್ಚಾಗಿರುವುದುರಿಂದ ಕಡಿಮೆ ತೂಕದ ಆಭರಣಗಳನ್ನು ಚಿನ್ನದ ಉದ್ಯಮಿಗಳು ಈ ಬಾರಿ ಪರಿಚಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಚಿನ್ನದ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ತೂಕ ಆಭರಣಗಳನ್ನು ಚಿನ್ನದ ಮಳಿಗೆಗಳು ಪರಿಚಯಿಸಿವೆ.

ಚಿನ್ನ ಖರೀದಿ ಮಾಡುವವರ ಸಂಖ್ಯೆ ಶೇ 25ರಷ್ಟು ಹೆಚ್ಚಳ: ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆಯು ಬರೋಬ್ಬರಿ ಏರಿಕೆಯನ್ನೇ ಕಂಡಿದೆ. ಅಲ್ಲದೇ ಚಿನ್ನದ ಬೆಲೆಯು ಈಗಾಗಲೇ ಒಂದು ಲಕ್ಷ ರೂಪಾಯಿ ಸಹ ದಾಡಿದೆ. ಇನ್ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಆದರೆ ಕಳೆದ ಒಂದು ವರ್ಷದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಅಥವಾ ಗ್ರಾಹಕರ ಸಂಖ್ಯೆಯು ಶೇ 25ರಷ್ಟು ಹೆಚ್ಚಳವಾಗಿದೆ ಎಂದು ಶರವಣ ಅವರು ಹೇಳಿದ್ದಾರೆ. ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಜನ ಚಿನ್ನ ಖರೀದಿ ಮಾಡುವ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ ಜನ ಚಿನ್ನ ಖರೀದಿ ಮಾಡುವುದರಿಂದ ಹಿಂದೆ ಸರಿದಿಲ್ಲ. ಚಿನ್ನ ಖರೀದಿ ಮಾಡುವ ಒಟ್ಟಾರೆ ಪ್ರಮಾಣವು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ25% ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.
ಚಿನ್ನ ಖರೀದಿ ಕಡಿಮೆ ಆಗಿಲ್ಲ: ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದರಿಂದ ಚಿನ್ನ ಖರೀದಿಯಲ್ಲಿ ಇಳಿಕೆಯಾಗಲಿದೆ. ಚಿನ್ನ ಖರೀದಿ ಪ್ರಮಾಣ ಕುಸಿದಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆ ಲೆಕ್ಕಾಚಾರಗಳು ತಲೆಕೆಳೆಗಾಗಿವೆ. ಚಿನ್ನ ಖರೀದಿ ಮಾಡುವುದನ್ನು ಜನ ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿದ್ದಾರೆ. ಆದರೆ ಬಿಟ್ಟಿಲ್ಲ!












Click it and Unblock the Notifications