ಏರ್ ಟೆಲ್ ನಿಂದ ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ
ಬೆಂಗಳೂರು, ಜನವರಿ 09: ಜಿಯೋ ಆರ್ಭಟದಿಂದ ತನ್ನ ಗ್ರಾಹಕರನ್ನು ಕಳೆದುಕೊಂಡಿರುವ ಭಾರ್ತಿ ಏರ್ ಟೆಲ್ ಈಗ್ ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಪ್ರೀಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ.
ಏರ್ಟೆಲ್ ಪ್ರೀಪೇಯ್ಡ್ 76 ರೂ. ರೀಚಾರ್ಜ್ ಯೋಜನೆಯು ಮೊದಲ ಬಾರಿಗೆ ಪ್ರೀಪೇಯ್ಡ್ ಬಳಕೆದಾರರಿಗೆ ಹೇಳಿ ಮಾಡಿಸಿದಂತಿದೆ. 100 ಎಂಬಿ ಹೈಸ್ಪೀಡ್ ಇಂಟರ್ನೆಟ್ ಜೊತೆಗೆ 26 ರೂ.ಗಳ ಟಾಕ್ ಟೈಮ್ 28 ದಿನಗಳ ಅವಧಿಯ ವ್ಯಾಲಿಡಿಟಿ ಹೊಂದಿರುವ ಪ್ಯಾಕೇಜ್ ಇದಾಗಿದೆ.
ಈಗಾಗಲೇ ಏರ್ಟೆಲ್ ಚಂದಾದಾರರಾಗಿದ್ದರೆ ಈ ರೀಚಾರ್ಜ್ ಯೋಜನೆ ನಿಮಗೆ ಸಿಗುವುದಿಲ್ಲ. ಇದು ಹೊಸ ಚಂದಾದಾರರಿಗೆ ಮಾತ್ರ.

ಈ ಯೋಜನೆಯಲ್ಲಿ ಪ್ರತಿ ಕರೆಯ ದರ ಪ್ರತಿ ನಿಮಿಷಕ್ಕೆ ಅರುವತ್ತು ಪೈಸೆ ಆಗಿರುತ್ತದೆ. ಹಾಗೆಯೇ ಏರ್ಟೆಲ್ ಆರು ರೀತಿಯ ರಿಚಾರ್ಜ್ ಯೋಜನೆಗಳನ್ನು ಹೊಸ ಗ್ರಾಹಕರಿಗೆ ಪ್ರಕಟಿಸಿದೆ. 178 ರು, 229 ರು, 344 ರು, 495ರು ಹಾಗೂ559ರು ಗಳ ರೀಚಾರ್ಜ್ ಯೋಜನೆಗಳಿವೆ.












Click it and Unblock the Notifications