ಮಾಲ್ ಮತ್ತು ಮಾರ್ಟ್‌ಗಳಲ್ಲಿ ಹಣ ಉಳಿಸುವುದಕ್ಕೆ 5 ಬೆಸ್ಟ್ ಮಾರ್ಗಗಳು!
ವಾರಾಂತ್ಯ ಹಾಗೂ ಹಬ್ಬ ಎಂದರೆ ಜನ ಸಾಮಾನ್ಯವಾಗಿ ಮಾಲ್‌ಗಳಿಗೆ ಹಾಗೂ ಮಾರ್ಟ್‌ಗಳಿಗೆ ಭೇಟಿ ನೀಡುವುದು ಇದೆ. ಮಾಲ್ ಮತ್ತು ಮಾರ್ಟ್‌ಗಳಿಗೆ ಭೇಟಿ ನೀಡುವುದು ಎರಡೂ ಬೇರೆ ಬೇರೆ ಕಾರಣಗಳಿಗೆ ನಿಜ. ಮಾಲ್‌ಗಳಲ್ಲಿ ಸಿನಿಮಾ ನೋಡುವುದಕ್ಕೆ, ಸುತ್ತಾಡುವುದು ಹಾಗೂ ಬಟ್ಟೆ ಸೇರಿದಂತೆ ಫ್ಯಾನ್ಸಿ ಖರೀದಿಗೆ ಹೋದರೆ. ಮಾರ್ಟ್‌ಗಳಲ್ಲಿ ಮನೆಗೆ ಬೇಕಾದ ದಿನಸಿ ಖರೀದಿ ಹಾಗೂ ಅಗತ್ಯ ವಸ್ತುಗಳ ಖರೀದಿ ಸೇರಿರುತ್ತದೆ. ಆದರೆ ಕೆಲವೊಮ್ಮೆ ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ಹಣ ಖರ್ಚಾಗುವುದು ಇರುತ್ತದೆ. ಈ ರೀತಿ ಅನವಶ್ಯಕವಾಗಿ ಹಾಗೂ ಬಜೆಟ್‌ನಲ್ಲಿ ಇಲ್ಲದ ಮೊತ್ತವನ್ನು ಖರ್ಚು ಮಾಡದಂತೆ ಉಳಿಸಿಕೊಳ್ಳುವುದು ಹೇಗೆ ಎನ್ನುವ ವಿವರ ಇಲ್ಲಿದೆ.
ಮಾಲ್‌ಗಳಲ್ಲಿ ಹಾಗೂ ಮಾರ್ಟ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಣ ಖರ್ಚಾಗುವುದು ಸಹಜ. ಆದರೆ ಹೆಚ್ಚು ಹಣ ಖರ್ಚು ಆಗದಂತೆ ನೋಡಿಕೊಳ್ಳುವುದು ಹೇಗೆ ಎನ್ನುವುದು ತುಂಬಾ ಮುಖ್ಯ ಈ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಟಿಪ್ಸ್‌ಗಳು ಇಲ್ಲಿವೆ.

ಲಿಸ್ಟ್ ಮಾಡಿಕೊಳ್ಳಿ: ಮಾಲ್, ಮಾರ್ಕೆಟ್ ಅಥವಾ ಯಾವುದೇ ವಸ್ತುಗಳನ್ನು ಖರೀದಿ ಮಾಡುವುದಕ್ಕಿಂತ ಮುಂಚಿತವಾಗಿ ಒಂದು ಲಿಸ್ಟ್ ಮಾಡಿಕೊಳ್ಳಿ. ಯಾವ ವಸ್ತುಗಳು ಬೇಕಿವೆ ಹಾಗೂ ಎಷ್ಟು ಪ್ರಮಾಣದಲ್ಲಿ ಬೇಕು ಎನ್ನುವುದನ್ನು ಸಹ ಒಂದು ಚೀಟಿಯಲ್ಲಿ ಇಲ್ಲವೇ ಪೋನ್‌ನಲ್ಲೇ ನೋಟ್ ಮಾಡಿಕೊಳ್ಳಿ. ಆ ನಿರ್ದಿಷ್ಟ ವಸ್ತುಗಳನ್ನು ಮಾತ್ರ ಖರೀದಿ ಮಾಡಿ. ಇದರಿಂದ ಅನಗತ್ಯ ವಸ್ತುಗಳ ಖರೀದಿ ಹಾಗೂ ವೆಚ್ಚ ಕಡಿಮೆ ಆಗುತ್ತದೆ.
ಪೀಕ್ ಅವರ್‌ನಲ್ಲಿ ಬೇಡ: ಮಾಲ್‌ಗಳಿಗೆ ಹಲವರಿಗೆ ವಾರಾಂತ್ಯ ಇಲ್ಲವೇ ಪೀಕ್ ಅವರ್ ಬಿಟ್ಟು ಬೇರೆ ಸಂದರ್ಭದಲ್ಲಿ ಹೋಗಲು ಸಾಧ್ಯವಾಗದೆ ಇರಬಹುದು. ಆದರೆ, ಮಾರ್ಟ್‌ಗಳಿಗೆ ಸಮಯ ಹೊಂದಿಸಿಕೊಳ್ಳಬಹುದು. ಮಾರ್ಟ್‌ಗಳಿಗೆ ದಿನಸಿ ಹಾಗೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಾಗ ನಾನ್ ಪೀಕ್ ಅವರ್ ಆಯ್ಕೆ ಮಾಡಿಕೊಳ್ಳಿ. ಆಗ ಸಮಾಧಾನವಾಗಿ ವಸ್ತುಗಳನ್ನು ಹುಡುಕಿ ತೆಗೆದುಕೊಳ್ಳಬಹುದು.
ಕೊನೆಯದಾಗಿ ಚೆಕ್ ಮಾಡಿ: ಇನ್ನು ಲಿಸ್ಟ್ ಮಾಡಿಕೊಂಡ ಮೇಲೆಯೂ ಕೆಲವೊಮ್ಮೆ ಬೇಡದ ವಸ್ತುಗಳನ್ನು ತೆಗೆದುಕೊಂಡಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೊನೆಯದಾಗಿ ಬಿಲ್ ಮಾಡುವುದಕ್ಕಿಂತ ಮುಂಚೆ ಅಥವಾ ಬಿಲ್ ಕೌಂಟರ್‌ನಲ್ಲಿ ನಿಮಗೆ ಯಾವುದಾದರೂ ವಸ್ತುಗಳ ಬೇಡ ಎಂದು ಅನಿಸಿದರೆ ಅಲ್ಲೇ ಸೆಪರೇಟ್ ಮಾಡಿ. ಆ ವಸ್ತುಗಳನ್ನು ಬಿಲ್ ಮಾಡದಂತೆ ತಿಳಿಸಿ. ಇದರಿಂದ ಅನಗತ್ಯ ಖರ್ಚಿಗೆ ಕಡಿವಾಣ ಹಾಕಬಹುದು.
ಇದೇ ತಿಂಗಳು ಖರೀದಿ ಮಾಡಬೇಕಾ ನೋಡಿ: ಇನ್ನು ಕೆಲವೊಮ್ಮೆ ಮುಂದಿನ ದಿನಗಳಲ್ಲಿ ಅಥವಾ ಮುಂದಿನ ತಿಂಗಳು ಖರೀದಿ ಮಾಡಿದರೂ ನಡೆಯುತ್ತದೆ ಎನ್ನುವ ವಸ್ತುಗಳು ಇರುತ್ತವೆ. ಈ ರೀತಿ ಯಾವುದಾರೂ ವಸ್ತುಗಳು ಬೇಡ ಎನಿಸಿದರೆ ತೆಗೆದುಕೊಳ್ಳಬೇಡಿ. ಕೆಲವೊಮ್ಮೆ ಸ್ವಲ್ಪ ಇದೆ ಬೇಕಾಗಬಹುದು ಎನ್ನುವ ವಸ್ತುಗಳು ತುರ್ತು ಇರುವುದಿಲ್ಲ. ಈ ರೀತಿಯ ವಸ್ತುಗಳ ಬಗ್ಗೆ ನೋಡಿಕೊಳ್ಳಿ.
ಊಟ ಮನೆಯಲ್ಲೇ ಮಾಡಿಕೊಳ್ಳಿ: ಇದು ಸಲಹೆಯಲ್ಲ ಆಯ್ಕೆ. ಬಹಳಷ್ಟು ಜನ ಊಟ ಹೊರಗೆ ಮಾಡುವ ಕಾರಣಕ್ಕೆ ಮಾಲ್ ಅಥವಾ ತಮ್ಮ ನೆಚ್ಚಿನ ಜಾಗಗಳಿಗೆ ಹೋಗುವವರಿದ್ದಾರೆ. ಆದರೆ ಕೇವಲ ವಸ್ತುಗಳನ್ನು ಖರೀದಿ ಮಾಡುವ ಉದ್ದೇಶ ಹಾಗೂ ಕಡಿಮೆ ಬಜೆಟ್‌ನಲ್ಲಿ ಶಾಪಿಂಗ್ ಮುಗಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಇದ್ದರೆ, ಸಾಧ್ಯವಾದಷ್ಟೂ ಮನೆಯಲ್ಲೇ ಊಟ ಮಾಡಿಕೊಂಡು ಹೋಗಿ ಇದರಿಂದ ಸಮಯ ಹಾಗೂ ಹಣ ಎರಡೂ ಉಳಿತಾಯವಾಗುತ್ತದೆ.












Click it and Unblock the Notifications