ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನದಲ್ಲಿ 650 ವಿಮಾನಗಳ ಹಾರಾಟ ನಡೆಸಿದ್ದ ಜೆಟ್ ಏರ್ ವೇಸ್ ಈಗ ಶೂನ್ಯ

|
Google Oneindia Kannada News

ಭಾರತದಲ್ಲಿ ದೀರ್ಘ ಎನಿಸಿದ, ಅಂದರೆ 26 ವರ್ಷಗಳಿಂದ ವಿಮಾನ ಯಾನ ಸೇವೆ ಸಲ್ಲಿಸುತ್ತಿರುವ ಜೆಟ್ ಏರ್ ವೇಸ್ ತೀವ್ರ ಸಂಕಷ್ಟದಲ್ಲಿ ಇರುವುದು ಈಗ ರಹಸ್ಯ ಏನಲ್ಲ. ನಿಮಗೆ ಗೊತ್ತಿದೆಯೋ ಇಲ್ಲವೋ, ಒಂದು ಕಾಲವಿತ್ತು. ಜೆಟ್ ಏರ್ ವೇಸ್ ನ ಉಚ್ಛ್ರಾಯ ಕಾಲವದು. ಆಗ ದಿನದಲ್ಲಿ 650 ವಿಮಾನಗಳು ಹಾರಾಟ ನಡೆಸಿವೆ.

ಒಂದು ವೇಳೆ ಜೆಟ್ ಏರ್ ವೇಸ್ ಮುಚ್ಚಿಬಿಟ್ಟರೆ ನೇರವಾಗಿ 16 ಸಾವಿರ ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ಸಾವಿರ ಸಿಬ್ಬಂದಿ ಭವಿಷ್ಯ ಅತಂತ್ರವಾಗುತ್ತದೆ. ಜೆಟ್ ಮತ್ತೆ ಹಾರಾಟ ನಡೆಸಬೇಕು ಅಂದರೆ ಹೊಸ ಖರೀದಿದಾರರು ಸಿಗಬೇಕು. ಅದಕ್ಕೆ ಮತ್ತೆ ಜೀವ ನೀಡಬೇಕು.

ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್

ಭಾರತೀಯ ಬ್ಯಾಂಕ್ ಗಳೆಲ್ಲದರ ಪರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮಂಗಳವಾರ ರಾತ್ರಿ ಜೆಟ್ ಗೆ ಸ್ಪಷ್ಟವಾಗಿ ಹೇಳಿಬಿಟ್ಟಿತು: ಇನ್ನು ಮಧ್ಯಂತರ ಹಣಕಾಸು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಇನ್ನು ಸಂಸ್ಥೆಯಿಂದಂತೂ ಇಂಧನ ಮತ್ತಿತರ ತುರ್ತು ಸೇವೆಗೆ ಹಣ ಪಾವತಿ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿ. ಅಲ್ಲಿಗೆ ಕಾರ್ಯಾಚರಣೆ ಅಸಾಧ್ಯ ಅಂತಾಯಿತು.

Jet airways

ಅದರ ಬೆನ್ನಿಗೇ ತಕ್ಷಣದಿಂದ ಜೆಟ್ ಏರ್ ವೇಸ್ ನಿಂದ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಮಾನಗಳ ಎಲ್ಲ ಸೇವೆ ಸ್ಥಗಿತಗೊಳಿಸಬೇಕಾಯಿತು. ಕೊನೆ ವಿಮಾನ ಅಂದರೆ ಅದು ಬುಧವಾರ ಹಾರಾಟ ನಡೆಸಿದ್ದು ಎಂದು ತಾತ್ಕಾಲಿಕವಾಗಿ ಜೆಟ್ ಏರ್ ವೇಸ್ ನ ವಿಮಾನ ಯಾನ ಸೇವೆ ರದ್ದು ಆಗಿರುವ ಬಗ್ಗೆ ಬಿಎಸ್ ಇ ನಿಯಂತ್ರಣ ವ್ಯವಸ್ಥೆಗೆ ಮಾಹಿತಿ ನೀಡಲಾಗಿದೆ.

ವಿಮಾನ ಯಾನ ಸೇವೆ ಮುಂದುವರಿಸಬೇಕು ಅಂದರೆ ಜೆಟ್ ಏರ್ ವೇಸ್ ಮಂಗಳವಾರದಂದು ಸಾವಿರ ಕೋಟಿ ರುಪಾಯಿ ತುರ್ತು ಸಾಲಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಈಗ ಪರಿಸ್ಥಿತಿ ತೀರಾ ಹದಗೆಟ್ಟಿದೆ.

English summary
India’s longest-serving private carrier shut down operations after a 26-year journey, during which it flew 650 flights a day at its peak. The shutdown leaves a huge question mark over the future of over 16,000 direct and 6,000 contractual employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X