Get Updates
Get notified of breaking news, exclusive insights, and must-see stories!

ಪುರಿ ಜಗನ್ನಾಥ ರಥಯಾತ್ರೆ: ಕಲಾವಿದನ ಕೈ ಚಳಕದಲ್ಲಿ ಅರಳಿದ ಮರಳಿನ ರಥ

ಪುರಿ ಜಗನ್ನಾಥ ರಥಯಾತ್ರೆ ಆರಂಭಗೊಂಡಿದೆ. ಪುರಿಯ ಸಮುದ್ರದ ತಟದಲ್ಲಿ ಕಲಾವಿದನ ಕೈಚಳಕದಿಂದ ಮರಳಿನಲ್ಲಿ ರಥ ಮೂಡಿಬಂದಿದೆ. ಜಗತ್ ಪ್ರಸಿದ್ಧ ಪುರಿ ಜಗನ್ನಾಥನ ರಥಯಾತ್ರೆಯನ್ನು ಈ ವರ್ಷವೂ ಕೊರೊನಾ ಕಾರಣದಿಂದ ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ.

ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲವಾದರೂ, ಥಾರ್ಮಿಕ ಆಚರಣೆಗೆ ಚ್ಯುತಿ ಬರದಂತೆ ಕೇವಲ ಜನರ ಸಮ್ಮುಖದಲ್ಲಿ ನಡೆಯುತ್ತಿದೆ. ಜುಲೈ 20ರಂದು ಸಂಪನ್ನಗೊಳ್ಳಲಿದೆ.

ಈ ಪ್ರಯುಕ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಪದ್ಮಶ್ರೀ ಪುರಸ್ಕೃತ ಸುದರ್ಶನ್​ ಪಟ್ನಾಯಕ್​ ಅವರು ಪುರಿ ಬೀಚ್​ನಲ್ಲಿ ರಥದ ಚಿತ್ರವನ್ನು ರಚಿಸಿದ್ದಾರೆ. ಸರಿಸುಮಾರು 43.2 ಅಡಿ ಉದ್ದ ಮತ್ತು 25 ಅಡಿ ಅಗಲವಿರುವ ಭಗವಾನ್​ ಜಗನ್ನಾಥರ ರಥ 3ಡಿ ಮರಳು ಕಲೆಯನ್ನು ರಚಿಸಿದ್ದಾರೆ.

Puri Rath Yatra : Artist Sudarsan Pattanaik Creates 3D Sand Art Of Lord Jagannath’s Chariot

ಸುಪ್ರೀಂ ಕೋರ್ಟ್​ ಆದೇಶ ಮತ್ತು ಒಡಿಶಾ ರಾಜ್ಯ ಸರ್ಕಾರದ ಎಸ್​ಒಪಿ ಅನ್ವಯ ರಥಯಾತ್ರೆಯಲ್ಲಿ ಭಕ್ತರಿಗೆ ಅವಕಾಶ ನೀಡಿಲ್ಲ ಇನ್ನು ಎರಡೂ ಡೋಸ್​ ಲಸಿಕೆ ಪಡೆದು, ಆರ್​-ಪಿಸಿಆರ್​ ನೆಗೆಟಿವ್​ ರಿಪೋರ್ಟ್​ ಹೊಂದಿರುವವರಿಗೆ ರಥ ಎಳೆಯಲು ಅವಕಾಶ ನೀಡಲಾಗುತ್ತಿದೆ.

ರಥಯಾತ್ರೆಯ ಸಂದರ್ಭದಲ್ಲಿ ಒಡಿಶಾದ ಪುರಿ ಬೀಚ್​ನಲ್ಲಿ 43.2 ಅಡಿ ಉದ್ದ ಮತ್ತು 35 ಅಡಿ ಅಗಲದ ಭಗವಾನ್​ ಜಗನ್ನಾಥರ ಅವರ ನಂದಿಗೋಸ ರಥದ ಅತಿದೊಡ್ಡ 3ಡಿ ಸ್ಯಾಂಡ್​ ಆರ್ಟ್​ ರಥವನ್ನು ನಾವು ರಚಿಸಿದ್ದೇವೆ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಅತಿದೊಡ್ಡ 3ಡಿ ಸ್ಯಾಂಡ್​ ಆರ್ಟ್ ಸುಂದರವಾಗಿ ಗೋಚರಿಸುತ್ತಿದೆ. ಕಡಲ ತೀರದ ಮರಳಿನಲ್ಲಿ ಬಣ್ಣದಿಂದ ಆವೃತವಾದ ಚಿತ್ರ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಸುದರ್ಶನ್​ ಅವರು ಗಿನ್ನಿಸ್​ ದಾಖಲೆ ಸೇರಿದಂತೆ ಪದ್ಮಶ್ರೀ ಪುರಸ್ಕೃತ ಮರಳು ಕಲಾವಿದ ವಿಶ್ವದಾದ್ಯಂತ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+