ಸತತ 9 ತಿಂಗಳ ಬಳಿಕ ಬಾಗಿಲು ತೆರೆದ ಪುರಿ ಜಗನ್ನಾಥ ದೇವಾಲಯ
ಭುವನೇಶ್ವರ, ಡಿಸೆಂಬರ್ 23: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸತತ 9 ತಿಂಗಳಿಂದ ಮುಚ್ಚಲಾಗಿದ್ದ, ಪುರಿ ಜಗನ್ನಾಥ ದೇವಾಲಯ ಇಂದು ಬಾಗಿಲು ತೆರೆದಿದೆ.
ಕಳೆದ ತಿಂಗಳು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ಅಧಿಕಾರಿ ಕೃಷನ್ ಕುಮಾರ್, ಕೋವಿಡ್-19 ಶಿಷ್ಠಾಚಾರಗಳನ್ನು ಪಾಲಿಸಿಕೊಂಡು ಇಂದಿನಿಂದ ಹಂತಹಂತವಾಗಿ ದೇವಸ್ಥಾನದ ಬಾಗಿಲು ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿದೆ ಎಂದರು.
12ನೇ ಶತಮಾನದ ದೇಶದ ಪ್ರಸಿದ್ಧ ಯಾತ್ರಾಸ್ಥಳ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶವನ್ನು ಮಾರ್ಚ್ 25ರಂದು ಮುಚ್ಚಲಾಗಿತ್ತು.

ಪುರಿ ದೇವಸ್ಥಾನದ ಬಾಗಿಲು ತೆರೆದ ಐದು ದಿನಗಳಲ್ಲಿ ಪುರಿಯ ಜನತೆಗೆ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡುವಂತೆ ಕೇಳಲಾಗುತ್ತಿದೆ ಎಂದಿದ್ದಾರೆ.
ದೇವಸ್ಥಾನದ ಆಸುಪಾಸಿನಲ್ಲಿ ವಾಸಿಸುತ್ತಿದ್ದರೂ ಕೂಡ ದೇವಸ್ಥಾನಕ್ಕೆ ತೆರಳಲು ಜನರಿಗೆ ಅವಕಾಶವಿರಲಿಲ್ಲ ಹೀಗಾಗಿ ಮೊದಲ ಐದು ದಿನ ಪುರಿಯ ಭಕ್ತರು ದೇವರ ದರ್ಶನ ಪಡೆಯಬೇಕು. ಹೊಸ ವರ್ಷವಾಗಿದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುವುದರಿಂದ ಜನವರಿ 1 ಹಾಗೂ 2 ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಜನವರಿ 3 ರಂದು ಎಂದಿನಂತೆ ದೇವಸ್ಥಾನದ ಬಾಗಿಲು ತೆರೆದಿರಲಿದೆ. 48 ಗಂಟೆಯೊಳಗಾಗಿ ಪಡೆದ ಕೊವಿಡ್ ನೆಗೆಟಿವ್ ವರದಿಯನ್ನು ಭಕ್ತರು ಹೊಂದಿರಬೇಕು.
ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಲು ಅನುಮತಿ ಇದೆ. 5 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಕ್ರಮೇಣವಾಗಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.












Click it and Unblock the Notifications