ಒಡಿಶಾಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ, ಬಿರುಗಾಳಿ ಸಹಿತ ಮಳೆ
Recommended Video
ಒಡಿಶಾಗೆ ಅಪ್ಪಳಿಸಿದ ಫ್ಯಾನಿ ಚಂಡಮಾರುತ | ಇದು ರಾಜ್ಯದ ಮೇಲೂ ಪರಿಣಾಮ ಬೀರುವುದೇ?
ಪುರಿ, ಮೇ 3: ಪ್ರಳಯಾಂತಕ ಚಂಡಮಾರುತ ಫೋನಿ ಒಡಿಶಾಕ್ಕೆ ಅಪ್ಪಳಿಸಿದೆ. ಒಡಿಶಾದ ಪುರಿ ಕರಾವಳಿಗೆ ಚಂಡಮಾರುತ ಅಪ್ಪಳಿಸಿದೆ.
ಚಂಡಮಾರುತದಿಂದ 14 ಜಿಲ್ಲೆ 10 ಸಾವಿರ ಗ್ರಾಮಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. 20 ವರ್ಷಗಳಲ್ಲೇ ಪ್ರಳಯಾಂತಕ ಚಂಡಮಾರುತ ಇದಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಫೋನಿ ಚಂಡ ಮಾರುತ ಉದ್ಭವವಾಗಿದೆ. ಒಡಿಶಾದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 147 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕರಾವಳಿಗೆ ಬಂದು ಅಪ್ಪಳಿಸುತ್ತಿದ್ದಂತೆ ಧಾರಾಕಾರ ಮಳೆ ಆರಂಭವಾಗಿದೆ. ಗೋಪಾಲಪುರ, ಛಾಂದ್‌ಬಾಲಿ ಮಧ್ಯತೆ ಚಂಡಮಾರುತ ಅಪ್ಪಳಿಸಿದೆ. ಹಲವೆಡೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಗಂಟೆಗೆ 180 ಕಿ,ಮೀ ವೇಗದಲ್ಲಿ ಮಾರುತ ಗಾಳಿ ಬೀಸುತ್ತಿದೆ. ಒಡಿಶಾದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ.
1999ರಲ್ಲಿ ಫೋನಿ ಚಂಡಮಾರುತ ತನ್ನ ರೌದ್ರಾವತಾರವನ್ನು ಒಡಿಶಾ ಜನರಿಗೆ ತೋರಿಸಿತ್ತು. ಆ ಸಮಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.












Click it and Unblock the Notifications