ಪಾರ್ಟಿಗೆಂದು ಮನೆಗೆ ಬಂದವರು, ಅತ್ಯಾಚಾರ, ಕೊಲೆ ಮಾಡಿದ್ರು
ವಿದಿಶಾ, ಅಕ್ಟೋಬರ್ 30: ಪಾರ್ಟಿಗೆಂದು ಸ್ನೇಹಿತನ ಮನೆಗೆ ಹೋಗಿದ್ದವರು ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿ, ಸ್ನೇಹಿತನ್ನೂ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಆರೋಪಿಗಳಾದ ಸುನಿಲ್ ಕುಶ್ವಾಹ ಹಾಗೂ ಮನೋಜ್ ಅಹಿರ್ವಾರ್ ಓರ್ವರ ಮನೆಗೆ ಪಾರ್ಟಿಗೆಂದು ಹೋಗಿದ್ದರು. ಕುಡಿದ ಮತ್ತಿನಲ್ಲಿ ಸುನಿಲ್ ಎಂಬಾತ ಮನೆ ಮಾಲೀಕರ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದ, ಅದು ಪತಿಗೆ ತಿಳಿದು ತಪ್ಪಿಸಲು ಬಂದಾಗ ಮನೋಜ್ ಅವರನ್ನು ಕೊಲೆ ಮಾಡಿದ್ದಾನೆ.

ಆರೋಪಿಗಳಿಗೆ ಬಲೆ ಬೀಸಿರುವುದಾಗಿ ಪೊಲೀಸ್ ಅಧಿಕಾರಿ ಬಿಎಸ್ ಸಿಸೊಡಿಯಾ ತಿಳಿಸಿದ್ದಾರೆ.ಮಹಿಳೆಯನ್ನೂ ಕೂಡ ಥಳಿಸಿ ಬಳಿಕ ಅತ್ಯಾಚಾರವೆಸಗಿದ್ದಾರೆ. ಘಟನೆಯು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.












Click it and Unblock the Notifications