Viral Video: ಸಾಮಾಜಿಕ ಅಂತರದ ಪರಮಾವಧಿ ನೋಡಿದಿರಾ?

ಭೋಪಾಲ್, ಮೇ 4: ಕೊರೊನಾ ಕಾರಣಕ್ಕೆ ಶುರುವಾದ ಲಾಕ್‌ಡೌನ್ ನಿಂದ ಜನ ಇನ್ನಿಲ್ಲದ ಪಡಿಪಾಟಲು ಪಡುತ್ತಿದ್ದಾರೆ. ಅದರಲ್ಲೂ ಕೊರೊನಾ ತಡೆಯಲು ಸಾಮಾಜಿಕ ಅಂತರವೇ ಮದ್ದಾಗಿರುವುದರಿಂದ ಎಲ್ಲಿ ನೋಡಿದರಲ್ಲಿ ಸಾಮಾಜಿಕ ಅಂತರದೇ ಮಾತು.

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜನ ಏನೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಆದರೆ, ಮಧ್ಯಪ್ರದೇಶದಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಅಂತರದ ಪರಮಾವಧಿಯನ್ನು ತೋರಿಸಿಕೊಟ್ಟಿದೆ.

Viral Video: Hight Of Social Distance At Marriage Party In Madhya Pradesh

ಸಾಮಾಜಿಕ ಅಂತರದ ಸಲುವಾಗಿಯೇ ಮದುವೆ, ಜಾತ್ರೆಗಳನ್ನು ರದ್ದು ಮಾಡಲಾಗಿದೆ. ಆದರೆ, ಮಧ್ಯಪ್ರದೇಶದಲ್ಲಿ ಲಾಕ್‌ಡೌನ್ ಇದ್ದರೂ ಅನಿವಾರ್ಯವಾಗಿ ಜೋಡಿಯೊಂದು ಮದುವೆಯಾಗುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮದುವೆಯಾಗಿದ್ದಾರೆ. ಮದುವೆ ಎಂದರೇ, ಪತಿ ಪತ್ನಿ ಒಬ್ಬರಲ್ಲಿ ಮತ್ತೊಬ್ಬರು ಲೀನವಾಗುವುದು. ಅಂತಹದರಲ್ಲಿ ಮದುವೆ ವೇಳೆ ಅದೆಂತಹುದು ಸಾಮಾಜಿಕ ಅಂತರ ಎಂದರೆ ಈ ವಿಡಿಯೋ ನೋಡಿ...

ಮದುವೆಯಾಗುತ್ತಿರುವ ಜೋಡಿ ಕೋಲುಗಳನ್ನು ಹಿಡಿದುಕೊಂಡು ಅದಕ್ಕೆ ಹೂಹಾರ ತಗುಲಿಸಿ ಹಾರ ಬದಲಿಸಿಕೊಂಡಿದ್ದಾರೆ. ಇದನ್ನು ನೋಡಿ ಜನ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಇದು ಸಾಮಾಜಿಕ ಅಂತರದ ಪರಮಾವಧಿ ಎಂದು ತಮಾಷೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಇದುವರೆಗೆ 2,846 ಜನರಿಗೆ ಕೊರೊನಾ ಸೋಂಕು ತಗುಲಿದ್ದು 156 ಜನ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+