ಕೊರೊನಾ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್ ಸ್ಟಾರ್‌ಗೂ ಸೋಂಕು ಪತ್ತೆ
ಭೋಪಾಲ್, ಏಪ್ರಿಲ್ 12: ಕೊರೊನಾ ವೈರಸ್ ಎಷ್ಟು ಭಯಾನಕ, ಅದರಿಂದ ಪ್ರಾಣಕ್ಕೆ ಹೇಗೆ ಅಪಾಯ, ಅದು ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತೆ ಎಂದು ವಿಶ್ವದ ಅನೇಕ ವೈದ್ಯರು ವಿಡಿಯೋ ಹಾಗೂ ಸಂದರ್ಶನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಇನ್ನು ವಿದೇಶದಲ್ಲಿನ ಸ್ಥಿತಿಗಳನ್ನು ಕಣ್ಣಾರೆ ನೋಡಿರುವ ಅನೇಕ ಮಂದಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇಷ್ಟೆಲ್ಲಾ ಜಾಗೃತಿ, ಎಚ್ಚರಿಕೆ ಹಾಗೂ ವಾಸ್ತವವಾಗಿ ಕೊರೊನಾ ಪರಿಣಾಮ ನೋಡುತ್ತಿದ್ದರೂ, ಅದರ ಬಗ್ಗೆ ಅಪಹಾಸ್ಯ, ಗೇಲಿ ಮಾಡುವರರ ಸಂಖ್ಯೆಯೂ ಹೆಚ್ಚಿದೆ. ಹೀಗೆ, ಮಧ್ಯ ಪ್ರದೇಶದಲ್ಲೊಬ್ಬ ಟಿಕ್‌ಟಾಕ್ ಸ್ಟಾರ್ ಕೊರೊನಾ ಕುರಿತು ಹಗುರವಾಗಿ ಮಾತನಾಡಿದ್ದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದ.
ಆದ್ರೀಗ, ಕೊರೊನಾ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್ ಸ್ಟಾರ್‌ಗೂ ಕೊವಿಡ್ ಮಹಾಮಾರಿ ಅಂಟಿಕೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

ಮಧ್ಯ ಪ್ರದೇಶದ ಟಿಕ್‌ಟಾಕ್ ಸ್ಟಾರ್ ಗೆ ಕೊರೊನಾ
ಮಧ್ಯ ಪ್ರದೇಶದ ಸಮೀರ್ ಖಾನ್ ಎಂಬ ಟಿಕ್‌ಟಾಕ್ ಸ್ಟಾರ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆಯಂತೆ. ಹೀಗಂತ ಖುದ್ದು ಆ ಯುವಕನೇ ವಿಡಿಯೋ ಮಾಡಿ ತನ್ನ ನೋವು ಹಂಚಿಕೊಂಡಿದ್ದಾನೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸಣ್ಣದೊಂದು ನಗರದ ನಿವಾಸಿ ಈ ಯುವಕ ಎಂದು ತಿಳಿದುಬಂದಿದೆ.

ಮಾಸ್ಕ್ ಬಗ್ಗೆ ಗೇಲಿ ಮಾಡಿದ್ದ ಯುವಕ
ಕೊರೊನಾ ವೈರಸ್ ಹರಡುವಿಕೆ ತಡೆಯಲು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಮಧ್ಯೆ ಟಿಕ್ ಟಾಕ್ ಯುವಕ, ಕೊರೊನಾದಿಂದ ತಪ್ಪಿಸಿಕೊಳ್ಳಲು ಬಟ್ಟೆಯ ತುಂಡಿನ ಮೇಲೆ ಏಕೆ ಭರವಸೆ ಇಡ್ತೀರಾ, ಭರವಸೆ ಇಡೋದಾದರೆ ದೇವರ ಮೇಲೆ ಇಡಿ'' ಎಂದು ಗೇಲಿ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಸ್ ಆಗಿತ್ತು.

ಮತ್ತೊಂದು ವಿಡಿಯೋ ಹಾಕಿದ ವ್ಯಕ್ತಿ
ಮೊದಲ ವಿಡಿಯೋದಲ್ಲಿ ಮಾಸ್ಕ್ ಬಗ್ಗೆ ಹಗುರವಾಗಿ ಮಾತನಾಡಿದ್ದ ಟಿಕ್‌ಟಾಕ್ ಸ್ಟಾರ್, ಈಗ ಇನ್ನೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕೊರೊನಾ ಕುರಿತು ನಾನು ಆ ರೀತಿ ಮಾತನಾಡಬಾರದಿತ್ತು. ಇನ್ಮುಂದೆ ಇಂತಹ ವಿಡಿಯೋ ನಾನು ಅಪ್‌ಲೌಡ್ ಮಾಡಲ್ಲ. ನನಗೂ ಕೊರೊನಾ ಬಂದಿದೆ' ಎಂದು ಹೇಳಿದ್ದಾರೆ.

ಲಾಕ್‌ಡೌನ್ ವಿಸ್ತರಿಸಿದ ಸರ್ಕಾರ
ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ, ಮತ್ತೆ ಲಾಕ್‌ಡೌನ್ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಏಪ್ರಿಲ್ 14ಕ್ಕೆ ಮೊದಲ ಹಂತದ ಲಾಕ್‌ಡೌನ್ ಮುಗಿಯಲಿದ್ದು, ಏಪ್ರಿಲ್ 30ರವರೆಗೂ ಎರಡನೇ ಹಂತದ ಲಾಕ್‌ಡೌನ್ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ.












Click it and Unblock the Notifications